Advertisement

ಭವ್ಯ ಭಾರತ ಕಟ್ಟುವ ಸಂಕಲ್ಪ ಮಾಡಿ

04:46 PM May 26, 2020 | Suhan S |

ಮುಧೋಳ: ಕೋವಿಡ್ ವೈರಸ್‌ ಹಿನ್ನೆಲೆಯಲ್ಲಿ ವಿಶ್ವದ ವಿವಿಧ ರಾಷ್ಟ್ರಗಳಿಗೆ ಹೋಗಿದ್ದ ಯುವ ಸಮೂಹ, ತಾಯ್ನಾಡಿಗೆ ಮರಳಿ ಬಂದಿದ್ದಾರೆ. ಅವರೆಲ್ಲ ಭಾರತದಲ್ಲಿಯೇ ಉಳಿದ ಭವ್ಯ ಭಾರತ ಕಟ್ಟುವ ಸಂಕಲ್ಪ ಮಾಡಬೇಕು ಎಂದು ಬೀಳಗಿ ಶಾಸಕ ಮುರುಗೇಶ ನಿರಾಣಿ ಹೇಳಿದರು.

Advertisement

ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಪಡೆದ ಅನುಭವ ಮತ್ತು ಜ್ಞಾನದ ಉಪಯೋಗ ಜನ್ಮಭೂಮಿಗೆ ದೊರಕಬೇಕು. ಮುಂಬೈ, ಗೋವಾ ಬೇರೆ ಬೇರೆ ರಾಜ್ಯಗಳಿಂದ ತಮ್ಮ ಹಳ್ಳಿಗಳಿಗೆ ಮರಳಿದ ಯುವಕರು ಹಳ್ಳಿಯಲ್ಲಿ ಉಳಿದು ಕೃಷಿ, ಕುಶಲ ಕೆಲಸಗಳಲ್ಲಿ ತೊಡಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಿ ವಸ್ತುಗಳ ಉತ್ಪಾದನೆಗೆ ಮತ್ತು ಬಳಸುವುದಕ್ಕೆ ಜನರು ಗಮನ ಕೊಡಬೇಕು ಎಂದು ಹೇಳಿರುವುದು ಭವ್ಯ ಭಾರತ ಕಟ್ಟುವಲ್ಲಿ ಮಹತ್ವ ಹೆಜ್ಜೆಯಾಗಿದೆ ಎಂದರು.

ಭಾರತದಲ್ಲಿ ಹೊಸ ಹೊಸ ಕೈಗಾರಿಕೆ ಕಟ್ಟಲು ವಿಫುಲ ಅವಕಾಶಗಳಿವೆ. ಬ್ಯಾಂಕ್‌ಗಳು ಉದಾರವಾಗಿ ಬಂಡವಾಳ ನೀಡಲು ಮುಂದೆ ಬಂದಿವೆ. ವಿದೇಶಗಳಿಂದ ಬಂದ ಯುವಕರು ತಮ್ಮ ಅನುಭವ ಹಾಗೂ ಹೊಸ ತಂತ್ರಜ್ಞಾನ ಬಳಸಿ ಕೈಗಾರಿಕೆ ಕಟ್ಟಬೇಕು ಎಂದು ಸಲಹೆ ನೀಡಿದರು. ಸಮಸ್ಯೆಗಳನ್ನು ಅವಕಾಶವಾಗಿ ಬಳಸಿಕೊಳ್ಳಬೇಕು. ವಿದೇಶಿದಿಂದ ಬಂದ ಯುವಕರು ಭಾರತದಲ್ಲಿಯೇ ಉಳಿದು ನಮ್ಮ ದೇಶವನ್ನು ವಿಶ್ವದ ನಂಬರ ಒನ್‌ ದೇಶವನ್ನಾಗಿ ಕಟ್ಟಲು ಮುಂದಾಗಬೇಕು ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next