Advertisement
1956ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ 50 ವರ್ಷಗಳಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಕೇವಲ 6, 7ನೇ ತರಗತಿಗೆ ಸೀಮಿತಗೊಂಡಿತ್ತು. 2012ರಲ್ಲಿ ಎಂಟನೇ ತರಗತಿ ಆರಂಭಗೊಂಡು ಉನ್ನತ್ತಿ¤àಕರಣಗೊಂಡ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾಯಿತು. ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಗೊಂಡಿತು. ಎರಡು ವರ್ಷಗಳಿಂದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಶಿಕ್ಷಣ ಅಳವಡಿಸಿದ ಬಳಿಕ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದ್ದು, ಎಲ್‌ಕೆಜಿ, ಯುಕೆಜಿ ಶಾಲಾಭಿವೃದ್ಧಿ ಸಮಿತಿಯ ಮೇಲುಸ್ತುವಾರಿಯಲ್ಲಿ ಆರಂಭಗೊಂಡರೆ, ಬಳಿಕ 1, 2ನೇ ತರಗತಿ ಆರಂಭಗೊಂಡಿತು. ಕಳೆದ ವರ್ಷ 310 ವಿದ್ಯಾರ್ಥಿಗಳಿದ್ದು, ಶಿಕ್ಷಕರು, ಕೊಠಡಿ, ಪೀಠೊಪಕರಣ ಸಮಸ್ಯೆ ಎದುರಾಗಿತ್ತು. ಆದರೆ ಈ ಬಾರಿ ಮೂರನೇ ತರಗತಿ ಆರಂಭಗೊಂಡಿದ್ದು, ವಿದ್ಯಾರ್ಥಿಗಳ ಸಂಖ್ಯೆ 390ಕ್ಕೇರಿದೆ. ಈ ಶಾಲೆಗೆ ದಾಖಲಾತಿಗಾಗಿ ನೂರಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಸಾಲುಗಟ್ಟಿ ನಿಂತಿದ್ದು, ಹಲವರಿಗೆ ಪರಿಸರದ ಬೇರೆ ಶಾಲೆಗಳಿಗೆ ತೆರಳುವಂತೆ ಸೂಚಿಸಿದ್ದರೂ ಕೆಲವರು ಇದೇ ಶಾಲೆಗೆ ಸೇರುವ ಆಶಾವಾದ ಇಟ್ಟುಕೊಂಡಿದ್ದಾರೆ.
Related Articles
Advertisement
ಮೂಲ ಸೌಕರ್ಯದ ಕೊರತೆ :
ಒಂದನೇ ತರಗತಿಯಲ್ಲಿ 67 ವಿದ್ಯಾರ್ಥಿಗಳಿದ್ದು, ಎರಡು ವಿಭಾಗಗಳಾಗಿ ಮಾಡಿದರೆ ಎರಡು ತರಗತಿ ಕೊಠಡಿ ಅಗತ್ಯವಿದೆ. ಇನ್ನೂ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಗೊಂಡರೆ ಮತ್ತೂಂದು ತರಗತಿಯ ಆವಶ್ಯಕತೆಯಿದೆ. ಎರಡನೇ ತರಗತಿಯಲ್ಲಿ 76 ವಿದ್ಯಾರ್ಥಿಗಳಿದ್ದು, ಎರಡು ವಿಭಾಗಗಳಾಗಿ ಮಾಡಿದರೆ 2 ಕೊಠಡಿ ಅಗತ್ಯವಿದೆ. ಮೂರನೇ ತರಗತಿಯಲ್ಲಿ 110 ವಿದ್ಯಾರ್ಥಿಗಳಿದ್ದು, 3 ವಿಭಾಗಗಳಾಗಿ ಮಾಡಿದರೆ, ಮೂರು ಕೋಣೆಗಳ ಅಗತ್ಯವಿದೆ. 6, 7, 8ನೇ ತರಗತಿ ಈ ಹಿಂದೆ ಇದ್ದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು 12 ಕೊಠಡಿಗಳ ಆವಶ್ಯಕತೆಯಿದ್ದು, ಈಗಿರುವ ಐದು ಕೊಠಡಿಗಳು, ಶಾಸಕರ ಅನುದಾನದಲ್ಲಿ ಮೂರು ಕೊಠಡಿಗಳ ನಿರ್ಮಾಣ ನಡೆಯುತ್ತಿದ್ದು, ಅವುಗಳು ಪೂರ್ಣಗಂಡರೆ ಶಾಲೆಯ ಒಟ್ಟು ಕೊಠಡಿಗಳ ಸಂಖ್ಯೆ ಎಂಟು ಆಗಲಿದೆ. ಇನ್ನೂ ನಾಲ್ಕು ಕೊಠಡಿಗಳ ಆವಶ್ಯಕತೆಯಿದೆ. ಮುಂದಿನ ಎರಡು ವರ್ಷಗಳಲ್ಲಿ ನಾಲ್ಕನೇ, ಐದನೇ ತರಗತಿ ಆರಂಭಗೊಂಡರೆ ಹೆಚ್ಚುವರ ಕೊಠಡಿಗಳು, ಶೌಚಾಲಯದ ಅಗತ್ಯವಿವೆ. ಇದರೊಂದಿಗೆ ಪೀಠೊಪಕರಣಗಳ ಕೊರತೆಯಿದೆ.
ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗ ಆರಂಭವಾದ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಕಿ.ಪ್ರಾ. ಶಾಲೆ ಆರಂಭದ ಪ್ರಥಮ ವರ್ಷದಲ್ಲಿ ಇರುವ ಶಿಕ್ಷಕರು ಮತ್ತು ಮೂಲ ಸೌಕರ್ಯವನ್ನು ಉಪಯೋಗಿಸಿ ಪಾಠ ಮಾಡಲಾಗಿತ್ತು. ಕೋವಿಡ್ ಬಂದ ಅನಂತರ ಆನ್‌ಲೈನ್ ಕ್ಲಾಸ್ ನಡೆಸಲು ನಾಲ್ವರು ಶಿಕ್ಷಕರು ಎಲ್ಲ ತರಗತಿಗಳಿಗೆ ಪಾಠ ಮಾಡುವುದರಿಂದ ಬಿಡುವಿಲ್ಲದಂತಾಗಿದೆ. ಶಾಲಾ ಆರಂಭಕ್ಕೆ ಮೊದಲು ಶಾಲಾ ಕೊಠಡಿ, ಪೀಠೊಪಕರಣ, ಶಿಕ್ಷಕರನ್ನು ನೇಮಕ ಮಾಡಿದರೆ ಸಮಸ್ಯೆ ಉದ್ಭವಿಸುವುದಿಲ್ಲ. ಮೂಲಸೌಕರ್ಯ ಅಭಿವೃದ್ಧಿಯಾದರೆ ಎಲ್ಲ ವಿದ್ಯಾರ್ಥಿಗಳಿಗೂ ದಾಖಲಾತಿ ನೀಡಬಹುದು. –ಆಲಿಸ್ ವಿಮಲಾ, ಮುಖ್ಯ ಶಿಕ್ಷಕರು, ಜಿ.ಪಂ.ಸ.ಹಿ.ಪ್ರಾ. ಶಾಲೆ ದೇರಳಕಟ್ಟೆ
-ವಸಂತ ಎನ್. ಕೊಣಾಜೆ