Advertisement

ಕಾರ್ಮಿಕರಿಗೆ ಸುರಕ್ಷತಾ ಸಾಧನ ಕಡ್ಡಾಯಗೊಳಿಸಿ

09:22 PM Mar 04, 2020 | Lakshmi GovindaRaj |

ನಂಜನಗೂಡು: ಪ್ರತಿಯೊಬ್ಬರೂ ಸುರಕ್ಷತೆ ಕುರಿತು ಜಾಗೃತಿ ವಹಿಸಿದಾಗ ಮಾತ್ರ ಅವಘಡಗಳು ಕಡಿಮೆಯಾಗಲಿವೆ ಎಂದು ನಂಜನಗೂಡು ಡಿವೈಎಸ್‌ಪಿ ಪ್ರಭಾಕರ್‌ ಸಿಂಧೆ ತಿಳಿಸಿದರು. ನಂಜನಗೂಡು ಕೈಗಾರಿಕಾ ಒಕ್ಕೂಟದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸುರಕ್ಷಾತಾ ದಿನಾಚರಣೆ ಪ್ರಯುಕ್ತ ಕೈಗಾರಿಕಾ ಕಚೇರಿ ಮುಂಭಾಗ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

Advertisement

ಬಹುತೇಕ ಕೈಗಾರಿಕೆಗಳು ಸುರಕ್ಷಾತಾ ಸಲಕರಣೆಗಳನ್ನು ಅಳವಡಿಸಿಕೊಂಡಿರುತ್ತವೆ. ಆದರೆ, ಕಾರ್ಮಿಕರು ಅವುಗಳನ್ನು ಬಳಸುವುದಿಲ್ಲ. ಇಂತ‌ಹ ಅಜಾಗುರ‌ಕತೆಯೇ ಅವಘಡಗಳಿಗೆ ಕಾರಣವಾಗಲಿದೆ. ಹೀಗಾಗಿ ಎಲ್ಲಾ ಕಾರ್ಮಿಕರು ಸುರಕ್ಷಾತಾ ಸಾಧನಗಳನ್ನು ಧರಿಸಿಯೇ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಮಾಲೀಕರು ಸುರಕ್ಷಾತಾ ಸಾಧನಗಳನ್ನು ಖರೀದಿಸಿರುವುದು ತಮ್ಮ ಕಾರ್ಮಿಕರಿಗಾಗಿ ಎಂಬುದನ್ನು ಅರಿತು ಪ್ರತಿ ಸಮಯದಲ್ಲೂ ಅದನ್ನು ಅವರು ಉಪಯೋಗಿಸುವ ಹಾಗೆ ಕಡ್ಡಾಯ ಗೊಳಿಸಬೇಕು ಎಂದು ಕೈಗಾರಿಕೆಗಳ ಮುಖ್ಯಸ್ಥರಿಗೆ ಕಿವಿ ಮಾತು ಹೇಳಿದರು. ಜ್ಯುಬಲೀಯಟ್ಸ್‌ ಜನರಿಕ್‌ ಕೈಗಾರಿಕೆ ಮುಖ್ಯಸ್ಥ ಅನಂತೇಗೌಡ, ಐಟಿಸಿಯ ಧಿಪನ್‌ ಬಿಸ್ವಾಸ್‌ ಮತ್ತಿತರರು ಕಾರ್ಮಿಕರು ಹಾಗೂ ಕೈಗಾರಿಕೆಗಳ ಸುರಕ್ಷತೆ ಮತ್ತು ಮುಂಜಾಗ್ರತಾ ವಿಧಾನಗಳ ಕುರಿತು ಮಾತನಾಡಿದರು.

ಸಮಾರಂಭದಲ್ಲಿ ಒಕ್ಕೂಟದ ಅಧ್ಯಕ್ಷ ಎಂ. ಎಸ್‌.ರಾಮ್‌, ಕಾರ್ಯದರ್ಶಿ ಚಂದ್ರಶೇಖರ್‌ ಸೇರಿದಂತೆ ವಿವಿಧ ಕಾರ್ಖಾನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next