Advertisement

ಮತ್ತೆ ರಾಹುಲ್ ಗಾಂಧಿಗೆ ಒಲಿಯಲಿದೆ ಕಾಂಗ್ರೇಸ್‌ ಅಧ್ಯಕ್ಷ ಪಟ್ಟ : ದಿಲ್ಲಿ ಕಾಂಗ್ರೇಸ್ ನಿರ್ಣಯ

09:49 PM Jan 31, 2021 | Team Udayavani |

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಗಾಂಧಿ ಕುಟುಂಬದಿಂದ ಹೊರತಾದ ನಾಯಕರು ಬರಬೇಕು ಎಂಬ ವಿಚಾರ ಕೆಲ ಸಮಯದಿಂದ ಚರ್ಚೆಯಾಗುತ್ತಿದೆ. ಅದಕ್ಕೆ ಪೂರಕವಾಗಿ ದೆಹಲಿ ಕಾಂಗ್ರೆಸ್‌ ಘಟಕ “ಕೂಡಲೇ ರಾಹುಲ್‌ ಗಾಂಧಿಯವರೇ ಪಕ್ಷದ ಅಧ್ಯಕ್ಷರಾಗಿ ಹಿಂದಿರುಗಬೇಕು” ಎಂದು ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಇತರ ಪ್ರದೇಶ ಕಾಂಗ್ರೆಸ್‌ ಸಮಿತಿಗಳು ಕೂಡ ಮುಂದಿನ ದಿನಗಳಲ್ಲಿ ಇದೇ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Advertisement

ಕಳೆದ ವಾರ ಈ ವಿಚಾರವಾಗಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆ ನಡೆದು ಆಂತರಿಕ ಚುನಾವಣೆ ನಡೆಸುವ ವಿಚಾರ ಘೋಷಿಸಲಾಗಿತ್ತು. ಸಭೆಯ ವೇಳೆ ಹಿರಿಯ ನಾಯಕರಾದ ಗುಲಾಂನಬಿ ಆಜಾದ್‌, ಆನಂದ್‌ ಶರ್ಮಾ, ಮುಕುಲ್‌ ವಾಸ್ನಿಕ್‌ ಮತ್ತು ಪಿ.ಚಿದಂಬರಂ ಸೇರಿದಂತೆ ಅನೇಕರು, ಪಕ್ಷದ ನಾಯಕತ್ವ ಮತ್ತು ನಿರ್ವಹಣೆಯ ಬಗ್ಗೆ ಪ್ರಶ್ನೆಯೆತ್ತಿದ್ದು, ರಾಹುಲ್‌ ಪರ ನಾಯಕರಿಂದ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿಯೇ ದೆಹಲಿ ಕಾಂಗ್ರೆಸ್‌ ಘಟಕ ಈಗ ರಾಹುಲ್‌ರ ಹೆಸರನ್ನು ಅನುಮೋದಿಸಿ ಸರ್ವಾನುಮತದ ನಿರ್ಣಯ ಹೊರಡಿಸಿದೆ ಎನ್ನಲಾಗುತ್ತದೆ.

ಇದನ್ನೂ ಓದಿ:ದುಷ್ಕರ್ಮಿಗಳಿಂದ ಮಾಜಿ ಸಿಎಂ ಧರಂಸಿಂಗ್‌ ಅವರ ದೂರದ ಸಂಬಂಧಿಯ ಅಪಹರಿಸಿ ಕೊಲೆ

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲನುಭವಿಸಿದಾಗ ರಾಹುಲ್‌ ಗಾಂಧಿ ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿದಿದ್ದರು. ಅಂದಿನಿಂದ ಸೋನಿಯಾ ಗಾಂಧಿಯವರೇ ಕಾಂಗ್ರೆಸ್‌ನ ಮಧ್ಯಂತರ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next