ಯಾದಗಿರಿ: ದೇಶದ ಒಬ್ಬ ಪ್ರಜೆ ಒಂದೊಂದು ಸಸಿ ನೆಡುವ ಸಂಕಲ್ಪ ಮಾಡಿ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಹೇಳಿದರು.
ನಗರದ ಮುಸ್ಲಿಂಪುರ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಈದ್ ಮಿಲಾದುನ್ನಬಿ (ಮಹಮ್ಮದ ಪೈಗಂಬರ್ ಜನ್ಮದಿನಾಚರಣೆ) ಅಂಗವಾಗಿ ಬಾದಲ್ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ಎಸ್ .ಐ.ಓ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಕಾಡು ತೀವ್ರ ಗತಿಯಲ್ಲಿ ನಾಶ ಆಗುತ್ತಿದೆ. ಎಲ್ಲೆಡೆ ಕಾಂಕ್ರಿಟ್ ಕಟ್ಟಡ ಬೆಳೆಯುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಮಾನಗಳಲ್ಲಿ ನಗರದಲ್ಲಿ ಆಮ್ಲಜನಕ ತೊಂದರೆ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಎಲ್ಲರೂ ಒಂದೊಂದೆ ಸಸಿ ನೆಡುವ ಸಂಕಲ್ಪ ಮಾಡಲೇಬೇಕಿದೆ ಎಂದರು.
ನಗರ ಠಾಣೆ ಪಿಎಸ್‌ಐ ಮಹಾಂತೇಶ ಸಜ್ಜನ್ ಮಾತನಾಡಿ, ಮಹಮ್ಮದ್ ಪೈಗಂಬರ್ ಜಯಂತಿ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಶ್ಲಾಘನೀಯ ಎಂದ ಅವರು, ಇಂತಹ ಕಾರ್ಯಕ್ರಮ ಕೇವಲ ಒಂದೇ ದಿನಕ್ಕೆ ಸೀಮಿತ ಮಾಡಬಾರದು ಎಂದು ಸಲಹೆ ನೀಡಿದರು.
ಇದೇ ಸಂದರ್ಭಧಲ್ಲಿ ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು. ವೇದಿಕೆ ಮೇಲೆ ಜಿಲ್ಲಾ ವಕ್ ಮಂಡಳಿ ನೂತನ ಅಧ್ಯಕ್ಷ ಜಿಲಾನಿ ಅಫಘಾನ, ನಗರಸಭೆ ಮಾಜಿ ಉಪಾಧ್ಯಕ್ಷೆ ರಾಚಮ್ಮ ಅನಪುರ, ನಗರಸಭೆ ಸದಸ್ಯ ಮನಸೂರ ಅಫಘಾನ, ಮಾಜಿ ಸದಸ್ಯ ಕರೀಂ ನಾಲ್ವಾರಿ, ಅಬ್ದುಲ್ ಗಫೂರ ಮುಲ್ಲಾ, ವಾಸೆ ಖೋತ, ರಾಫೆ ಬದಲ್ ಇದ್ದರು.
ಉರ್ದು ಶಾಲೆ ಮುಖ್ಯ ಗುರು ಬದರ ಉಜ್ಜಮಾ ಅಧ್ಯಕ್ಷತೆ ವಹಿಸಿದ್ದರು. ಮೋಯಿನ್ ಬಾದಲ್ ಸ್ವಾಗತಿಸಿದರು. ಸಿರಾಜ್ ಮುಖದ್ದಮ್ ವಂದಿಸಿದರು. ಇಮ್ರಾನ್ ಆನೂರಿ ನಿರೂಪಿಸಿದರು.