Advertisement

ಮಲೇರಿಯಾ ಮುಕ್ತ ಜಿಲ್ಲೆಗಾಗಿ ಸಂಕಲ್ಪ ಮಾಡಿ

06:38 AM Jun 18, 2020 | Lakshmi GovindaRaj |

ಅರಸೀಕೆರೆ: ಶೂನ್ಯ ಮಲೇರಿಯಾ ನನ್ನಿಂದಲ್ಲೇ ಪ್ರಾರಂಭ ಎಂಬ ಘೋಷ ವಾಕ್ಯದಲ್ಲಿ 2025ಕ್ಕೆ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ನಾವೆಲ್ಲರೂ ಸಂಕಲ್ಪ ಮಾಡಬೇಕಾಗಿದೆ ಎಂದು ತಹಶೀಲ್ದಾರ್‌ ಸಂತೋಷ್‌ ಕುಮಾರ್‌  ಹೇಳಿದರು. ನಗರದ ಜೆ.ಸಿ.ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಲೇರಿಯಾ ಮಾಸಾಚರಣೆ ಅಂಗವಾಗಿ ಏರ್ಪಡಿಸಿದ್ದ ಜನಜಾಗೃತಿ  ರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಅನಾಫಿಲಿಸ್‌ ಸೊಳ್ಳೆಗಳು ಕಚ್ಚುವುದರಿಂದ ರೋಗ ಒಬ್ಬರಿಂದ ಮತ್ತೂಬ್ಬರಿಗೆ ಮಲೇರಿಯಾ ಜ್ವರ ಹರಡುತ್ತದೆ. ಮನೆಯ ಸುತ್ತ ನೈರ್ಮಲ್ಯ ಕಾಪಾಡುವ ಮೂಲಕ ಮಲೇರಿಯಾ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಪ್ಪ ಮಾತನಾಡಿ, ಸಾಂಕ್ರಾಮಿಕ ರೋಗಗಳು ಹರಡ ದಂತೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದರು.

ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿ ಕಾರಿಗಳ ಕಚೇರಿ ಅಧಿಕಾರಿ ಮಂಜುನಾಥ್‌, ಪೌರಾಯುಕ್ತ ಕಾಂತರಾಜ್‌, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಾಲಯ್ಯ, ಪಶುಪಾಲನಾ  ಇಲಾಖೆ ಸಹಾಯಕ ನಿರ್ದೇಶಕ ಡಾ.ರಂಗನಾಥ್‌, ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ನಾರಾಯಣಪ್ಪ, ಆಯುಷ್‌ ಇಲಾಖೆ ವೈದ್ಯ ಡಾ.ರಮೇಶ್‌, ಆರೋಗ್ಯ ಇಲಾಖೆಯ ಆರೋಗ್ಯಾಧಿಕಾರಿಗಳಾದ ಲಲಿತಮ್ಮ, ಜಬ್ಬೀರ್‌  ಪಾಷಾ, ಮಾಲತಿ, ಹಾಗೂ ನಗರಸಭೆ ಸದಸ್ಯರಾದ ಗಿರೀಶ್‌, ಜಾಕೀರ್‌ ಹುಸೇನ್‌, ಸಿಕಂದರ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next