Advertisement

ಕುವೆಂಪು ಚಿಂತನೆ ಮೈಗೂಡಿಸಿಕೊಳ್ಳಿ

07:20 AM Feb 03, 2019 | |

ಕೋಲಾರ: ಕುವೆಂಪು ಚಿಂತನೆಗಳನ್ನು ಯುವಕರು ಮೈಗೂಡಿಸಿಕೊಂಡು ಸಮಾ ಜವನ್ನು ಸರಿದಾರಿಯಲ್ಲಿ ನಡೆಸ ಬೇಕಾ ಗಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

Advertisement

ನಗರದ ಸರ್ವಜ್ಞ ಪಾರ್ಕ್‌ ಬಳಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಾಷ್ಟ್ರಕವಿ ಕುವೆಂಪುರ 114 ನೇ ಜಯಂ ತ್ಯುತ್ಸವ ಮತ್ತು ಜಿಲ್ಲಾ ಕರವೇ ಮಹಿಳಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಯುವ ಸಮೂಹ ವಿದ್ಯಾ ಭ್ಯಾಸವನ್ನು ಪಡೆದು ಯಾವುದಾದರೂ ಒಂದು ವಿಭಾಗದಲ್ಲಿ ಸಾಧನೆ ಮಾಡಲು ಮುಂದೆ ಬರಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರವೇ ರಾಜ್ಯ ಅಧ್ಯಕ್ಷ ಪ್ರವೀಣ್‌ ಕುಮಾ ರ್‌ ಶೆಟ್ಟಿ, ಎತ್ತಿನ ಹೊಳೆಗೆ ಅಳವಡಿಸುತ್ತಿರುವ ಪೈಪು ಕೊಳಾಯಿಗಳಲ್ಲಿ ಯಾರು ಅವ್ಯವಹಾರ ನಡೆಸುತ್ತಿದ್ದಾರೆಂಬುದು ತಿಳಿಯುತ್ತಿಲ್ಲ. ಹೋರಾಟ ಮಾಡಿದರೆ ಕೇಸ್‌ ಹಾಕಿ ಲಾಠಿಯಲ್ಲಿ ಹೊಡೆಯುತ್ತೀರಾ ಎಂದು ಕಿಡಿಕಾರಿ ದರು.ಉಪನ್ಯಾಸಕ ಜೆ.ಜಿ.ನಾಗರಾಜ್‌, ಕುವೆಂಪು ನಿಸರ್ಗದ ಜೊತೆಗೆ ಶ್ರಮಿಕರ ಕವಿಯಾಗಿದ್ದರೆಂದರು.

ಕರವೇ ರಾಜ್ಯ ಉಪಾಧ್ಯಕ್ಷ ಶಿವರಾಜ್‌ಗೌಡ, ಹೋರಾಟ ಮಾಡಲು ಜೈಲಿಗೆ ಹೋಗಲು ನಾವು ಬೇಕು. ಹಣ ಮಾಡ ಲು ಲಾಂಛನ ನಾರಾಯಣಗೌಡಗೆ ಬೇಕಾಗಿದೆ. ಕರವೇ 6 ಕೋಟಿ ಕನ್ನಡಿಗರ ಆಸ್ತಿ ಎಂದರು.ಬಿಬಿಎಂಪಿ ಸದಸ್ಯ ಎಸ್‌.ಮುನಿಸ್ವಾಮಿ, ರೈತ ಸಂಘದ ಜಿ.ನಾರಾ ಯಣಸ್ವಾಮಿ, ನೀರಾವರಿ ಹೋರಾಟ ಗಾರ ವಿ.ಕೆ.ರಾಜೇಶ್‌, ಡಿಎಸ್‌ಎಸ್‌ ನರ ಸಾಪುರ ನಾರಾಯಣಸ್ವಾಮಿ ಮಾತನಾಡಿದರು.

ಇದೇ ವೇಳೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸರಸ್ವತಮ್ಮ , ಇತರೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಇತಿಹಾಸ ಪ್ರಾಧ್ಯಾ ಪಕ ಕೆ.ಶ್ರೀನಿವಾಸ, ಬೆಂ.ಗ್ರಾಮಾಂತರ ಜಿಲ್ಲಾ ಸರ್ಜನ್‌ ಡಾ.ಅನ್ಸರ್‌ ಅಹಮದ್‌, ಸಮಾಜ ಸೇವಕ ಕೋಡಿರಾಮಸಂದ್ರ, ಅಂಗಡಿ ಮುನಿಯಪ್ಪರ‌ನ್ನು ಸನ್ಮಾನಿಸಲಾ ಯಿತು. ಕರವೇ ಜಿಲ್ಲಾಧ್ಯಕ್ಷ ರಾಜೇಶ್‌, ಕೆ.ನಾರಾಯಣಗೌಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next