Advertisement
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇದೇ ಮೊದಲ ಬಾರಿಗೆ ನಡೆದ ಆರೋಗ್ಯ ರಕ್ಷಾ ಸಮಿತಿಯ ಮೊದಲ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಸರ್ಕಾರಿ ಆಸ್ಪತ್ರೆಗಳ ಸುಧಾರಣೆ ಹಾಗೂ ಜನಸ್ನೇಹಿಯಾಗಿಸುವ ಪ್ರಯತ್ನವನ್ನು ಸರ್ಕಾರ ನಡೆಸಿದೆ. ಸರ್ಕಾರದಿಂದ ಸಿಗುವ ಆರೋಗ್ಯ ಸೌಲಭ್ಯಗಳನ್ನು ಬಡ ಜನತೆಗೆ ತಲುಪಿಸುವಲ್ಲಿ ಯಾವುದೇ ಲೋಪವಾಗದಂತೆ ಕ್ರಮವಹಿಸಲು ಆರೋಗ್ಯ ರಕ್ಷಾ ಸಮಿತಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
Related Articles
ರಾಜ್ಯ ಸರ್ಕಾರ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ಮಾಲೂರು ತಾಲೂಕಿನ ದೊಡ್ಡಶಿವಾರದ ಬಾಬು ರೆಡ್ಡಿ, ನಗರದ ಗೌರಿಪೇಟೆಯ ಸಿ.ಮಂಜುನಾಥ್, ಬೇತಮಂಗಲದ ಅರುಣ್ ಕುಮಾರ್, ಕೋಲಾರದ ರಾಮದೇವರ ಗುಡಿ ಬೀದಿಯ ಕೆ.ಎಲ್.ಜಗದೀಶ್, ಮಾಲೂರು ತಾಲೂಕು ಎಳೆಸಂದ್ರಹಳ್ಳಿಯ ವೈ.ಎನ್. ತಿಮ್ಮ ರಾಯಪ್ಪ, ಬಂಗಾರಪೇಟೆ ತಾಲೂಕು ದೊಡ್ರಹಳ್ಳಿಯ ವೆಂಕಟರತ್ನಮ್ಮ, ಮುಳಬಾಗಿ ಲಿನ ಎಂ. ಪ್ರಸಾದ್, ಕೋಲಾರದ ಮಿಥುನ್ ಎಂ.ಜೈನ್ ಅವರನ್ನು ನಾಮ ನಿರ್ದೇಶನ ಗೊಳಿಸಿದ್ದಾರೆ.
Advertisement
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ ಸೇರಿದಂತೆ ಎಲ್ಲ ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ತಾಲೂಕು ವೈದ್ಯಾಧಿಕಾರಿಗಳು, ತಾಲೂಕು ಆಸ್ಪತ್ರೆಗಳ ಮುಖ್ಯಸ್ಥರು ಹಾಜರಿದ್ದರು.
ಆಸ್ಪತ್ರೆಯಲ್ಲಿನ ಸೇವೆಯನ್ನು ಮಾನವೀಯ ನೆಲಗಟ್ಟಿನಲ್ಲಿ ಜೀವ ಉಳಿಸುವ ಕೆಲಸವೆಂದು ಬದ್ಧತೆಯಿಂದ ಮಾಡಬೇಕು. ಯಾವುದೇ ಆಮಿಷಗಳಿಗೆ ಒಳಗಾಗದಿರಿ. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಮತ್ತಷ್ಟು ಸೌಲಭ್ಯಗಳು ರೋಗಿಗಳಿಗೆ ಸಿಗುವಂತಾಗಬೇಕು.
●ಎಸ್.ಮುನಿಸ್ವಾಮಿ, ಸಂಸದ