Advertisement

ಖಾಲಿ ಮಾಡಿದ್ರು ಕೆರೆ-ಮಲಪ್ರಭೆ ನೀರಿಗೆ ಮೊರೆ!

03:21 PM Jun 24, 2018 | |

ನವಲಗುಂದ: ಕುಡಿಯುವ ನೀರಿನ ಕೆರೆಯಲ್ಲಿ ವ್ಯಕ್ತಿಯೊಬ್ಬ ಬಿದ್ದು ಮೃತಪಟ್ಟಿದ್ದರಿಂದ ಗ್ರಾಮಸ್ಥರು, ಗ್ರಾಪಂ ಸದಸ್ಯರು ಸೇರಿಕೊಂಡು ಇಡೀ ಕೆರೆ ನೀರನ್ನೇ ಪಂಪ್‌ಸೆಟ್‌ ಮೂಲಕ ಕಳೆದ ನಾಲ್ಕು ದಿನಗಳಿಂದ ಖಾಲಿ ಮಾಡುತ್ತಿದ್ದಾರೆ. ಇನ್ನೊಂದು ದಿನ ಕಳೆದರೆ ಕೆರೆ ಸಂಪೂರ್ಣ ಖಾಲಿ-ಖಾಲಿ.

Advertisement

ಇದು ಅಣ್ಣಿಗೇರಿ ತಾಲೂಕಿನ ನಾವಳ್ಳಿ ಗ್ರಾಮದ ಕೆರೆಯ ಕಥೆ-ವ್ಯಥೆ. ಒಂದು ವಾರದ ಹಿಂದೆ ಶಲವಡಿ ಗ್ರಾಮದ ಪರಶರಾಮ ತಳವಾರ ಎಂಬ ವ್ಯಕ್ತಿ ಕೆರೆಯಲ್ಲಿ ಬಿದ್ದು ಸಾವನ್ನಪಿದ ಘಟನೆ ನಡೆದಿತ್ತು. ಮೃತ ವ್ಯಕ್ತಿಯ ಬಾಯಿ, ಕಿವಿಯಿಂದ ರಕ್ತ ಬಂದು ಕೆರೆ ನೀರಿನಲ್ಲಿ ಸೇರಿದೆ ಎಂಬ ನೆಪವೊಡ್ಡಿ ಗ್ರಾಮಸ್ಥರು ಕೆರೆ ನೀರನ್ನು ಉಪಯೋಗಿಸಲು ಹಿಂದೇಟು ಹಾಕುತ್ತಿದ್ದಾರೆಂದು ಗ್ರಾಮದ ಮುಖಂಡರು ನೀರನ್ನು ತೆರವುಗೊಳಿಸುತ್ತಿದ್ದಾರೆ.

ಗ್ರಾಮದಲ್ಲಿ ಏಕೈಕ ಕುಡಿಯುವ ನೀರಿನ ಕೆರೆ ಇದಾಗಿದ್ದು, ಗ್ರಾಮಸ್ಥರು ಇದೇ ಕೆರೆಯನ್ನು ಅವಲಂಬಿತರಾಗಿದ್ದಾರೆ. ಶುದ್ಧ ನೀರಿನ ಘಟಕದ ವ್ಯವಸ್ಥೆ ಗ್ರಾಮದಲ್ಲಿ ಇದ್ದರೂ ಎರಡು ಬಿಂದಿಗೆ ನೀರಿಗೆ ಸುಮಾರು 5 ರಿಂದ 10 ರೂ. ಭರಣ ಮಾಡಬೇಕು. ಹೀಗಾಗಿ ಬಡ ಕುಟುಂಬಗಳಿಗೆ ಹೊರೆಯಾಗಲಿದೆ. ಬೇರೆ ವ್ಯವಸ್ಥೆ ಮಾಡದೆ ಕೆರೆ ನೀರು ಖಾಲಿ ಮಾಡಬಾರದಿತ್ತು ಎನ್ನುತ್ತಾರೆ ಗ್ರಾಮಸ್ಥರು.

ಈಗಾಗಲೇ ಎರಡು ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಅದರಲ್ಲಿ ಒಂದರಿಂದ ಶುದ್ಧ ಘಟಕಕ್ಕೆ ವ್ಯವಸ್ಥೆ ಕಲ್ಪಿಸಿದರೆ, ಮತ್ತೊಂದರಿಂದ ಬಳಕೆಗೆ ನೀರು ಬಿಡಲಾಗುತ್ತಿದೆ. ಬಳಕೆಗೆ ಹರಿಬಿಡುವ ನೀರು ಕಹಿಯಾಗಿದ್ದು, ಸ್ನಾನ ಮಾಡಿದರೆ ಮೈಯೆಲ್ಲ ಜಿಡ್ಡಾಗುತ್ತಿದೆ. ಬಟ್ಟೆ ತೊಳೆಯಲೂ ಬರುತ್ತಿಲ್ಲ ಎನ್ನುತ್ತಾರೆ ಗ್ರಾಮದ ಹನುಮಂತಪ್ಪ.

ಮುನೇನಕೊಪ್ಪ ಭೇಟಿ: ನಾವಳ್ಳಿ ಕೆರೆಗೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಭೇಟಿ ನೀಡಿ ಕೆರೆ ನೀರು ತೆರವು ಕಾರ್ಯ ವೀಕ್ಷಿಸಿದ್ದಾರೆ. ನೀರನ್ನು ತೆರವುಗೊಳಿಸಿ ಒಂದು ವಾರದಲ್ಲಿ ಮಲಪ್ರಭಾ ಕಾಲುವೆ ಮುಖಾಂತರ ನೀರು ಬಿಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆನ್ನಲಾಗಿದೆ.

Advertisement

ನಾವಳ್ಳಿ ಕೆರೆ ನೀರು ಶುದ್ಧವಾಗಿಲ್ಲ ಎಂದು ಶಲವಡಿಯ ವೈದ್ಯರು ವರದಿ ನೀಡಿದ್ದಾರೆ. ಹೀಗಾಗಿ ಕೆರೆ ನೀರನ್ನು ಖಾಲಿ ಮಾಡಲಾಗುತ್ತಿದೆ. ಕೆರೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಕಾರಣಕ್ಕಾಗಿ ನೀರು ತೆರವುಗೊಳಿಸುತ್ತಿಲ್ಲ ಹಾಗೂ ಈ ಗ್ರಾಮದಲ್ಲಿ ಯಾವುದೇ ರೀತಿಯ ಜಾತಿ ಭೇದವಿಲ್ಲ. ಪ್ರಸ್ತುತ ಗ್ರಾಮಸ್ಥರು ನೀರಿನ ತೊಂದರೆ ಕುರಿತು ನನ್ನ ಗಮನಕ್ಕೆ ತಂದಿಲ್ಲ. ಸಮಸ್ಯೆ ಕಂಡುಬಂದರೆ ತುರ್ತಾಗಿ ಸಮಸ್ಯೆ ಪರಿಹರಿಸುತ್ತೇನೆ.
 ಶಂಕರ ಪಾಟೀಲ ಮುನೇನಕೊಪ್ಪ,
ನವಲಗುಂದ ಶಾಸಕ

ನಾಲ್ಕು ದಿನಗಳ ಹಿಂದೆ ನಾವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕೆರೆ ನೀರು ಶುದ್ಧವಾಗಿದ್ದು, ನೀರನ್ನು ತೆರವುಗೊಳಿಸಬಾರದು ಎಂದು ಗ್ರಾಮಸ್ಥರಿಗೆ, ಗ್ರಾಪಂ ಅಧಿಕಾರಿಗಳಿಗೆ ತಿಳಿವಳಿಕೆ ಹೇಳಲಾಗಿದೆ. ಅಲ್ಲದೇ ಗ್ರಾಮದಲ್ಲಿ ನೀರಿನ ಸಮ ಉದ್ಭವಿಸಬಹುದೆಂದು ನನ್ನ ಕಚೇರಿಗೆ ಕರೆದು ಬುದ್ಧಿ ಹೇಳಿದ್ದೇನೆ. ಆದರೂ ನನ್ನ ಮಾತು ಕೇಳದೆ ನೀರನ್ನು ಖಾಲಿ ಮಾಡುತ್ತಿದ್ದಾರೆ.
„ ಪ್ರತಿಭಾ ಪಾಟೀಲ, ತಾಪಂ ಇಒ, ನವಲಗುಂದ

ನಾಲ್ಕು ದಿನಗಳ ಹಿಂದೆ ನಾವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕೆರೆ ನೀರು ಶುದ್ಧವಾಗಿದ್ದು, ನೀರನ್ನು ತೆರವುಗೊಳಿಸಬಾರದು ಎಂದು ಗ್ರಾಮಸ್ಥರಿಗೆ, ಗ್ರಾಪಂ ಅ ಧಿಕಾರಿಗಳಿಗೆ ತಿಳಿವಳಿಕೆ ಹೇಳಲಾಗಿದೆ. ಅಲ್ಲದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉದ್ಭವಿಸಬಹುದೆಂದು ನನ್ನ ಕಚೇರಿಗೆ ಕರೆದು ಬುದ್ಧಿ ಹೇಳಿದ್ದೇನೆ. ಆದರೂ ನನ್ನ ಮಾತು ಕೇಳದೆ ನೀರನ್ನು ಖಾಲಿ ಮಾಡುತ್ತಿದ್ದಾರೆ.
 ಪ್ರತಿಭಾ ಪಾಟೀಲ, ತಾಪಂ ಇಒ, ನವಲಗುಂದ

Advertisement

Udayavani is now on Telegram. Click here to join our channel and stay updated with the latest news.

Next