Advertisement

ಪರಿಣಾಮಕಾರಿ ಬರ ನಿರ್ವಹಣೆ ಮಾಡಿ

03:10 PM Jun 26, 2019 | Team Udayavani |

ಹಾಸನ: ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ತುರ್ತು ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಹಾಸನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ ರಾಜ್‌ಸಿಂಗ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಮಿತಿ ಸಭೆ ನಡೆಸಿದ ಅವರು, ಈ ಬಾರಿಯೂ ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಮಳೆಯ ಕೊರತೆಯಾಗಿದೆ. ತೀವ್ರ ಸ್ವರೂಪದ ಬರ ಉಂಟಾದಲ್ಲಿ ಅದನ್ನು ಎದುರಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಮೇವಿನ ಬ್ಯಾಂಕ್‌ ಸ್ಥಾಪಿಸಿ: ಮುಂಗಾರು ಮಳೆ ಕೊರತೆ ಹಾಗೂ ವಿಳಂಬವಾಗಿರುವುದರಿಂದ ರೈತರಿಗೆ ಪ್ರಸಕ್ತ ಪರಿಸ್ಥಿತಿಗೆ ತಕ್ಕಂತೆ ಬೇಸಾಯ ಕ್ರಮ ಅನುಸರಿಸುವ ಕುರಿತು ಸೂಕ್ತ ಅರಿವು ನೀಡಿ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಪೂರೈಸ ಬೇಕು. ಜಿಲ್ಲೆಯಲ್ಲಿ ಅನಿವಾರ್ಯವಿರುವ ಕಡೆಗಳಲ್ಲಿ ಮೇವಿನ ಬ್ಯಾಂಕ್‌ ಸ್ಥಾಪಿಸ ಬೇಕು. ಸ್ಥಳೀಯ ಪಶು ಆಹಾರ ಉತ್ಪಾ ದನೆ ಹೆಚ್ಚಿಸಿ ಹಾಸನ ಹಾಲು ಒಕ್ಕೂಟದ ಸಹಕಾರದೊಂದಿಗೆ ಗರಿಷ್ಠ ಪ್ರಮಾಣದ ಮೇವಿನ ಬೀಜದ ಮಿನಿಕಿಟ್ ಗಳನ್ನು ವಿತರಿಸಿ ಎಂದರು.

ಮೇವು ಬೆಳೆಸಿರಿ: ಸೋಮನಹಳ್ಳಿ ಕಾವಲು ಮತ್ತು ಉದಯಪುರ ಬಳಿಯ ತೋಟಗಾರಿಕಾ ಇಲಾಖೆ ಜಾಗದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವತಿ ಯಿಂದ ಕೊಳವೆ ಬಾವಿಯನ್ನು ಕೊರೆಸಿ ಕನಿಷ್ಠ 25 ರಿಂದ 35 ಎಕರೆ ಪ್ರದೇಶದಲ್ಲಿ ಮೇವು ಬೆಳೆಯಬೇಕು ಎಂದರು.

ಕಾಮಗಾರಿ ಪೂರ್ಣಗೊಳಿಸಲು ಗಡುವು: ಗ್ರಾಮೀಣ ಕುಡಿಯು ನೀರು ಮತ್ತು ನೈರ್ಮಲ್ಯ ಇಲಾಖೆ, ಸಣ್ಣ ನೀರಾವರಿ ಇಲಾಖೆ, ನಗರಾಭಿವೃದ್ಧಿ ಇಲಾಖೆ ವತಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾಮಿತಿ ನಿಗದಿಪಡಿಸಲಾಗಿತ್ತು. ಆದರೂ ಇನ್ನೂ ಹಲವು ಕೆಲಸಗಳನ್ನು ಮುಗಿಸಿಲ್ಲ. ಮುಂದಿನ 15 ದಿನಗಳ ಒಳಗೆ ಎಲ್ಲವೂ ಗುರಿ ಸಾಧನೆಯಾಗ ಬೇಕು ಎಂದು ನವೀನ್‌ ರಾಜ್‌ ಸಿಂಗ್‌ ಗಡುವು ನೀಡಿದರು.

Advertisement

ಸೋಮನಹಳ್ಳಿ ಕಾವಲಿನಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆಗೆ ಈ ವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ಈ ವರ್ಷವೇ ಶೈಕ್ಷಣಿಕ ಚಟುವಟಿಕೆ ಪ್ರಾರಂಭವಾಗುವು ದರಿಂದ ಮೂಲಭೂತ ಸೌಕರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಡಲು ಪ್ರಸ್ತಾವನೆ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ನೀರಿನ ಯೋಜನೆ ಪೂರ್ಣಗೊಳಿಸಿ: ಕುಡಿವ ನೀರಿನ ಯೋಜನೆಗಳನ್ನು ತ್ವರಿತ ವಾಗಿ ಮುಗಿಸಿ ಅರಸೀಕೆರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮೊದಲ ಆದ್ಯತೆಯೊಂದಿಗೆ ಮುಗಿಸಿ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿ ಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಿ ಎಂದು ನವೀನ್‌ ರಾಜ್‌ ಸಿಂಗ್‌ ಹೇಳಿದರು.

ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಮಾತನಾಡಿ ಜಿಲ್ಲೆಯಲ್ಲಿ ಬರನಿರ್ವ ಹಣೆಗೆ ಎಲ್ಲಾ ಅಗತ್ಯ ಮುಂಜಾಗ್ರತೆ ವಹಿಸಲಾಗಿದ್ದು ಕುಡಿಯುವ ನೀರಿಗೆ ತಾಲೂಕುವಾರು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಮೇವು ಬ್ಯಾಂಕ್‌ ತೆರೆಯಲು ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಅಗತ್ಯರುವ ಕಡೆಗಳಲ್ಲಿ ಹೊಸ ಕೊಳವೆ ಬಾವಿ ಕೊರೆಯಲು ಹಣ ಒದಗಿಸ ಲಾಗುತ್ತಿದೆ ಎಂದರು.

ಜಿಪಂ ಪ್ರಭಾರಿ ಸಿಇಒ ಪುಟ್ಟಸ್ವಾಮಿ, ಎಡೀಸಿ ಎಂ.ಎಲ್ ವೈಶಾಲಿ, ಎಸಿಗಳಾದ ನಾಗರಾಜ್‌, ಕವಿತಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next