Advertisement

ಶೈಕ್ಷಣಿಕ ಕಾರ್ಯ ಸರಾಗವಾಗುವಂತೆ ನೋಡಿಕೊಳ್ಳಿ: ಮುನವಳ್ಳಿ

03:32 PM Dec 30, 2020 | Team Udayavani |

ಹುಬ್ಬಳ್ಳಿ: ಕೋವಿಡ್‌-19ನಿಂದ ಸ್ಥಗಿತಗೊಂಡಿರುವ ಶೈಕ್ಷಣಿಕ ಚಟುವಟಿಕೆಗಳ ಪುನರಾಂಭಕ್ಕೆ ಪಾಲಕರು, ವಿದ್ಯಾರ್ಥಿಗಳು, ಶಿಕ್ಷಕರು ಸಕಾರಾತ್ಮಕವಾಗಿ ಭಾಗಿಯಾಗುವ ಮೂಲಕ ಶೈಕ್ಷಣಿಕ ಕಾರ್ಯ ಸರಾಗವಾಗಿ ಸಾಗುವಂತಾಗಬೇಕೆಂದು ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅಭಿಪ್ರಾಯಪಟಿದ್ದಾರೆ.

Advertisement

ಇಲ್ಲಿನ ಬಿವಿಬಿ ಬಯೋಟೆಕ್‌ ಸಭಾಭವನದಲ್ಲಿ ಜಿಲ್ಲೆಯ ಪಪೂಕಾಲೇಜುಗಳ ಆಡಳಿತ ಮಂಡಳಿ,ಪ್ರಾಂಶುಪಾಲರು ಹಾಗೂ ಪಾಲಕರ

ಸಭೆಯಲ್ಲಿ ಅವರು ಮಾತನಾಡಿದರು.ಕೋವಿಡ್‌-19ನಿಂದ ಹೊರಬಂದುಧನಾತ್ಮಕ ಚಿಂತನೆಗಳ ಮೂಲಕ ಶೈಕ್ಷಣಿಕ ಚಟುವಟಿಕೆ ಪುನರಾರಂಭಕ್ಕೆ ನಾವೆಲ್ಲಮುಂದಾಗಬೇಕಿದೆ. ಶಾಲಾ ಕಾಲೇಜುಗಳ ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಿದೆ. ಸರಕಾರ ಕೆಲ ನಿಯಮಗಳನ್ನು ಕಡ್ಡಾಯಗೊಳಿಸುವ ಬದಲು ಕೈಬಿಡಬೇಕೆಂದರು.

15 ವಿದ್ಯಾರ್ಥಿಗಳಿಗೆ ಸೀಮಿತ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಚಿದಂಬರ ಮಾತನಾಡಿ, ಸರಕಾರ ಜನವರಿ 1ರಿಂದ ದ್ವಿತೀಯ ಪಿಯುಸಿವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಲುಸೂಚಿಸಿದೆ. 45 ನಿಮಿಷಗಳ ನಾಲ್ಕತರಗತಿ ನಿತ್ಯ ತೆಗೆದುಕೊಳ್ಳಬೇಕಿದೆ. ಒಂದುತರಗತಿಯಲ್ಲಿ 15 ವಿದ್ಯಾರ್ಥಿಗಳಿಗೆ ಮಾತ್ರ ವ್ಯವಸ್ಥೆ ಮಾಡಬೇಕಿದೆ. ಸ್ಥಳೀಯಅಗತ್ಯಕನುಗುಣವಾಗಿ ವಿದ್ಯಾರ್ಥಿಗಳ ಸಂಖ್ಯೆ ನಿಗದಿ ಪಡಿಸಿಕೊಳ್ಳ ಬಹುದೆಂದರು. ವಿದ್ಯಾರ್ಥಿಗಳ ನಡುವೆಕನಿಷ್ಠ ಆರು ಅಡಿಗಳ ಭೌತಿಕ ಅಂತರ ನಿಯಮ ಪಾಲನೆ, ಮಾಸ್ಕ್ ಧರಿಸುವುದು,ಸ್ಯಾನಿಟೈಸರ್‌ ಬಳಸುವುದು ಕಡ್ಡಾಯ. ತರಗತಿ ಕೋಣೆ, ಪ್ರಯೋಗಾಲಯ ಇನ್ನಿತರೆ ಕಡೆಗಳಲ್ಲಿ ಶೇ.1ಸೋಡಿಯಂ ಹೈಡ್ರೋಕ್ಲೋರೈಟ್‌ ದ್ರಾವಣ ಸಿಂಪರಿಸಬೇಕಿದೆ. ಕೆಲ ಕಾಲೇಜುಗಳನ್ನು ಕೋವಿಡ್‌-19 ಕಂಟೋನ್ಮೆಂಟ್‌ ಕೊಠಡಿಯಾಗಿ ಬಳಸಿದ್ದು, ಅಂತಹ ಕಾಲೇಜುಗಳನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಬೇಕು ಎಂದರು.

ದ್ವಿತೀಯ ಪಿಯು ವಿದ್ಯಾರ್ಥಿಗಳುಸ್ವಯಂ ಪ್ರೇರಣೆಯಿಂದ ಇಲ್ಲವೆಪಾಲಕರಿಂದ ಸಮ್ಮತಿ ಪತ್ರ ತಂದಲ್ಲಿ ಭೌತಿಕತರಗತಿಗಳಿಗೆ ಹಾಜರಾಗಬಹುದು.ಮಕ್ಕಳಿಗೆ ಕೋವಿಡ್‌ ಗುಣಲಕ್ಷಣಗಳಿಲ್ಲಎಂಬುದರ ಬಗ್ಗೆ ದೃಢೀಕರಣ ಪತ್ರಕಡ್ಡಾಯ. ವಿದ್ಯಾರ್ಥಿ-ಶಿಕ್ಷಕರಿಗೆಬಯೋಮೆಟ್ರಿಕ್‌ ಹಾಜರಿ ಬದಲು,ಬದಲಿ ವ್ಯವಸ್ಥೆ ಮಾಡಬೇಕು. ವಿದ್ಯಾಥಿ-ವಿದ್ಯಾರ್ಥಿಗಳ ನಡುವೆ, ವಿದ್ಯಾರ್ಥಿ-ಉಪನ್ಯಾಸಕರ ನಡುವ ಆರು ಅಡಿಅಂತರ ಮುಖ್ಯ ಎಂದರು. ವಿದ್ಯಾರ್ಥಿ ಅಥವಾ ಉಪನ್ಯಾಸಕರಿಗೆ ರೋಗ ಲಕ್ಷಣ ಕಂಡು ಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ವರದಿ ನೀಡಬೇಕು.ಕೋವಿಡ್‌-19 ನಿಯಂತ್ರಣ ಮಾಹಿತಿಯ ಪೋಸ್ಟರ್‌ ಹಾಕಬೇಕು.ಪ್ರತಿ ದಿನ ಕೊಠಡಿ, ಕಾರಿಡಾರ್‌ಗಳ ನೆಲ ಸ್ವಚ್ಛಗೊಳಿಸಬೇಕು. ಶೌಚಾಲಯಗಳಲ್ಲಿ ಸಾಬೂನು, ಬಳಕೆಯಾಗುವ ಬೋಧನಾ ಸಾಮಗ್ರಿ, ಕಂಪ್ಯೂಟರ್‌, ಲ್ಯಾಪ್‌ ಟಾಪ್‌ ಸೋಂಕು ರಹಿತವಾಗಿರುವಂತೆ ನೋಡಿಕೊಳ್ಳಬೇಕು ಎಂದರು.

Advertisement

ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಎಸ್‌.ವಿ.ಕರೇಪ್ಪಗೌಡರ, ಮಾಧ್ಯಮಿಕಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷಸಂದೀಪ ಬೂದಿಹಾಳ, ಕಾಲೇಜುಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜಹೆಬ್ಬಳ್ಳಿ, ವಿವಿಧ ಕಾಲೇಜುಗಳ ಆಡಳಿತಮಂಡಳಿಯವರು, ಪ್ರಾಂಶುಪಾಲರುಪಾಲ್ಗೊಂಡಿದ್ದರು. ಪ್ರೇರಣಾಕಾಲೇಜು ಪ್ರಾಂಶುಪಾಲ ಸೈಮನ್‌, ಎಂ.ವಿ.ಹಡಪದ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next