Advertisement

ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ

05:51 PM May 02, 2018 | Team Udayavani |

ಗೋಕಾಕ: ಕಾರ್ಮಿಕರು ತಮ್ಮ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿಸದೆ, ಸರ್ಕಾರ ನೀಡುವ ಶೈಕ್ಷಣಿಕ ಸವಲತ್ತುಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ದೇಶದ ಉನ್ನತ ನಾಗರಿಕರನ್ನಾಗಿ ಬೆಳೆಸುವಂತೆ ಇಲ್ಲಿಯ 2ನೇ ಹೆಚ್ಚುವರಿ ಜೆಎಂಎಫ್‌ಸಿ ಹಾಗೂ ಸಿವಿಲ್‌ ನ್ಯಾಯಾಧೀಶ ಮೋಹನ ಎಸ್‌.ಪೋಳ ಕರೆ ನೀಡಿದರು.

Advertisement

ಮಂಗಳವಾರ ತಾಪಂ ಸಭಾಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಪಂಚಾಯತ್‌ ರಾಜ್ಯ ಇಲಾಖೆ
ಸಹಯೋಗದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾನೂನು ಸಾಕ್ಷರತಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಅಸಂಘಟಿತ ಕಾರ್ಮಿಕರು ವೇತನ ತಾರತಮ್ಯ ನಿವಾರಣೆಗೆ, ಪರಿಶ್ರಮಕ್ಕೆ ತಕ್ಕ ವೇತನ, ಸರ್ಕಾರದ ಯೋಜನೆಗಳ ಅನುಷ್ಠಾನ ಇತ್ಯಾದಿ ಹಕ್ಕುಗಳಿಗಾಗಿ
ಕಾರ್ಮಿಕರ ಬಾಂಧವರು, ತಮ್ಮ ಹೋರಾಟವನ್ನು ಮುಂದುವರೆಸಿಕೊಂಡು ಬಂದಿರುವುದು ಅತಂತ್ಯ ವಿಷಾದಕರ ಸಂಗತಿ ಎಂದರು.

ಹಿರಿಯ ವಕೀಲ ಆರ್‌.ಎಚ್‌. ಇಟ್ನಾಳ ಕಾರ್ಮಿಕರಿಗೆ ಇರುವ ಕಾನೂನು ಮತ್ತು ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ವಕೀಲರ ಸಂಘದ ಅಧ್ಯಕ್ಷ ಎಸ್‌.ವಿ. ದೇಮಶೆಟ್ಟಿ, ಕಾರ್ಮಿಕರ ಹಿತ ರಕ್ಷಣೆಗಾಗಿ ಸರ್ಕಾರದ ಕಾರ್ಮಿಕರ ಪರ ನೀತಿ ಜಾರಿಗೊಳ್ಳಬೇಕಿದೆ ಎಂದರು. ವೇದಿಕೆಯಲ್ಲಿ ಸಮೃದ್ಧಿ ಸಂಘದ ಅಧ್ಯಕ್ಷ ನಿಂಗಪ್ಪ ಕಟ್ಟಿಕಾರ ಹಾಗೂ ಗೋಕಾಕ ತಾಲೂಕು ಹಮಾಲರ ಸಂಘದ ಅಧ್ಯಕ್ಷ ಬಸವರಾಜ ಆರ್ಯನ್ನವರ ಉಪಸ್ಥಿತರಿದ್ದರು. ಜಿ.ಬಿ. ಪೋಟಿ ಸ್ವಾಗತಿಸಿ, ನಿರೂಪಿಸಿದರು. ಆರ್‌.ಎಸ್‌. ಹಿರೇಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next