Advertisement

ಮಕ್ಕಳನ್ನು ಸಂಸ್ಕಾರವಂತರಾಗಿಸಿ

11:29 AM Sep 02, 2017 | Team Udayavani |

ಹುಮನಾಬಾದ: ಮಕ್ಕಳಲ್ಲಿ ದೇವರ ನಂಬಿಕೆ ಮತ್ತು ಪರಸ್ಪರ ಪ್ರೀತಿ ಹುಟ್ಟಿಸುವ ಮೂಲಕ ಅವರನ್ನು ಉತ್ತಮ ಸಂಸ್ಕಾರವಂತರನ್ನಾಗಿ
ರೂಪಿಸಿ ಎಂದು ಶಿಕ್ಷಣ ತಜ್ಞ ಡಾ| ಗುರುರಾಜ ಕರಜಗಿ ಹೇಳಿದರು.

Advertisement

ಹಳ್ಳಿಖೇಡ(ಬಿ) ಪಟ್ಟಣದಲ್ಲಿ ಬಸವತೀರ್ಥ ವಿದ್ಯಾಪೀಠ ಸಂಸ್ಥೆ ಹಾಗೂ ವಿಕಾಸ ಆಕಾಡೆಮಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪಾಲಕರ ಶೈಕ್ಷಣಿಕ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರಿಗೆ ವಿನಯದಿಂದ ಗೌರವ ನೀಡುವುದು, ತಂದೆ-ತಾಯಿ ಮತ್ತು
ಅಕ್ಕಪಕ್ಕದರನ್ನು ಪ್ರೀತಿಸುವುದನ್ನು ಮಕ್ಕಳಿಗೆ ಕಲಿಸುವುದು ಅತಿ ಅವಶ್ಯವಾಗಿದೆ. ಈ ಇವನ್ನು ಮಕ್ಕಳು ಕಲಿಯದಿದ್ದರೆ ಎಷ್ಟೇ ಉನ್ನತ
ವಿದ್ಯೆ ಕಲಿತರೂ ಉಪಯೋಗವಾಗುವುದಿಲ್ಲ ಎಂದರು. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕೆ ಹೊರತೂ ನಕಾರಾತ್ಮಕ ವಿಚಾರಗಳನ್ನಲ್ಲ.
ತಪ್ಪು ಮಾಡಿದಾಗ ಪದೆ ಪದೇ ಅದನ್ನು ಅಣುಕಿಸುವ, ಟೀಕಿಸುವುದರಿಂದ ಮಕ್ಕಳ ಆತ್ಮಸ್ಥೈರ್ಯ ಕುಂದುತ್ತದೆ. ಹಾಗೆ ಮಾಡಬೇಡಿ ಎಂದು ಸಲಹೆ ನೀಡಿದರು.

ಮಕ್ಕಳಿಗೆ ದೇಶ ಭಕ್ತರ, ದಾರ್ಶನಿಕರ, ರಾಷ್ಟ್ರಪ್ರೇಮಿಗಳ ಜೀವನ ದರ್ಶನ ಮಾಡಿಸಿ, ಕತೆಗಳ ಮೂಲಕ ಅವರ ಹೋರಾಟದ ಸಂದೇಶವನ್ನು ಮಕ್ಕಳಿಗೆ ನೀಡುವ ಕಾರ್ಯ ಶಿಕ್ಷಕರು ಮಾಡಬೇಕು. ಕೇವಲ ಓದಿನ ಬಗ್ಗೆ ಹೆಚ್ಚು ಒತ್ತಡ ಹಾಕದೇ ದೈಹಿಕ ಬೆಳವಣಿಗೆಯ ಚಟುವಟಿಕೆಗೂ ಹೆಚ್ಚು ಮಹತ್ವ ನೀಡಬೇಕು
ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪಾ ವಾಲಿ, ಸಂಸ್ಥೆಯ
ಕಾರ್ಯಾಧ್ಯಕ್ಷ ಕೇಶವರಾವ್‌ ತಳಘಟಕರ್‌, ರೇವಸಿದ್ದಪ್ಪಾ ಜಲಾದೆ, ಶಿವಶಂಕರ ತರನಳ್ಳಿ, ಗುಂಡಯ್ನಾ ತೀರ್ಥಾ, ಮಹಾದೇವಪ್ಪ
ನಾಗೂರೆ, ಬಾಬುರಾವ್‌ ಸೊಂತ, ರಮೇಶ ಮಹೇಂದ್ರಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next