Advertisement

ಮತದಾನದ ಅರಿವು ಮೂಡಿಸಿ

07:26 AM Mar 15, 2019 | |

ಕೊಳ್ಳೇಗಾಲ: ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ ನಡೆಯುವಂತೆ  ಮಾಡಬೇಕು. ಮತದಾನದ ಹಕ್ಕನ್ನು ಸಂಪೂರ್ಣ ಬಳಕೆಯಾಗುವಂತೆ ಮತದಾರರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕಿ ಮಂಜುಳಾ ಸ್ವಿಪ್‌ ಸದಸ್ಯರಿಗೆ ಸೂಚನೆ ನೀಡಿದರು. ನಗರದ ಬಾಪುನಗರ ಬಡಾವಣೆಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ತಾಲೂಕು ಸ್ವಿಪ್‌ ಸಮಿತಿ ವತಿಯಿಂದ ಎರಡು ದಿನದ ಸ್ವಿಪ್‌  ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ನೆ ಮಾತನಾಡಿ, 

Advertisement

ಭಾರತ ಚುನಾವಣಾ ಆಯೋಗದ ಆದೇಶದಂತೆ ಎರಡು ದಿನದ ಕಾರ್ಯಾಗಾರವನ್ನು ಆಯೋಜನೆ ಮಾಡಿ ಮತದಾರರಿಗೆ ಸಂಪೂರ್ಣ ಅರಿವು ಮೂಡಿಸಲು ತೊಡಗಿಸಿಕೊಳ್ಳುವಂತೆ ಸೂಚನೆಯ ಮೇರೆಗೆ ಅಯೋಜನೆ ಮಾಡಲಾಗಿದ್ದು, ಸ್ವಿಪ್‌ ಸದಸ್ಯರು ಮತದಾರರಿಗೆ ಸಂಪೂರ್ಣ ಮತದಾನದಲ್ಲಿ ತೊಡಗುವಂತೆ ಸಲಹೆ ನೀಡಬೇಕು ಎಂದರು.

ಕಾರ್ಯಾಗಾರ ಸಾರ್ಥಕ: ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಚುನಾವಣೆ ಬಂದಿದ್ದು, ಸಂವಿಧಾನದ ಹಕ್ಕಾದ ಮತದಾನವನ್ನು ಮಾಡುವ ಮೂಲಕ ಚುನಾವಣೆ ಯಶಸ್ವಿಗೊಳಿಸಲು ಪ್ರತಿಯೊಬ್ಬರು ಸಹಕರಿಸಿದಾಗ ಮಾತ್ರ ಎರಡು ದಿನದ ಕಾರ್ಯಾಗಾರ ಸಾರ್ಥಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ತಿಳಿವಳಿಕೆ ನೀಡಿ: ಭಾವಿ ಮತದಾರ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲೇ ಅರಿವು ಮೂಡಿಸುವ ಪ್ರಯತ್ನವನ್ನು ಮಾಡುವುದು ಶಿಕ್ಷಕರ ಜವಾಬ್ದಾರಿಯಾಗಿದ್ದು, ಇದರ ಬಗ್ಗೆ ಹೆಚ್ಚು ತಿಳಿವಳಿಕೆ ನೀಡಬೇಕು ಮತ್ತು ವಿದ್ಯಾರ್ಥಿಗಳು ತಮ್ಮ ನೆರಹೊರೆಯವರಿಗೆ  ಮಾಹಿತಿ ನೀಡುವಂತಹ ತಿಳಿವಳಿಕೆ ನೀಡಿ, ಮತದಾನಕ್ಕೆ ಪ್ರತಿಯೊಬ್ಬರು ಸಾಕ್ಷಿಯಾಗಬೇಕು ಎಂದು ತಿಳಿಸಿದರು.

ಪ್ರೋತ್ಸಾಹ ನೀಡಿ: ಶಿಕ್ಷಕರು ಚುನಾವಣಾ ಕೆಲಸ ಹೆಚ್ಚುವರಿ ಕೆಲಸವೆಂದು ಭಾವಿಸದೆ ಚುನಾವಣೆಯ ಕೆಲಸ ಜವಾಬ್ದಾರಿ ಕೆಲಸವೆಂದು ಭಾವಿಸಬೇಕು ಮತ್ತು ಚುನಾವಣಾ ಸಂದರ್ಭದಲ್ಲಿ ಮತಗಟ್ಟೆಗಳಿಗೆ ಮತದಾರರು ಬರುವಂತೆ ಪ್ರೋತ್ಸಾಹ ನೀಡಬೇಕು ಎಂದರು.

Advertisement

ನೂರಕ್ಕೆ ನೂರು ಮತದಾನವಾಗಲಿ: ಶಿಕ್ಷಕರಿಗೆ ತಾಲೂಕು ಮತ್ತು ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ  ಅನೇಕ ರೀತಿಯ ತರಬೇತಿಗಳನ್ನು ನೀಡಲಾಗಿದ್ದು, ಪ್ರತಿಯೊಬ್ಬ ಶಿಕ್ಷಕರು ಕಡ್ಡಾಯವಾಗಿ ಚುನಾವಣೆಯ ಕರ್ತವ್ಯದಲ್ಲಿ ಪಾಲ್ಗೊಂಡು ಕರ್ತವ್ಯ ನಿರ್ವಹಿಸುವ ಮೂಲಕ ನೂರಕ್ಕೆ ನೂರು ಮತದಾರ ನಡೆಯುವಂತೆ ಮಾಡಬೇಕು ಎಂದು ತಿಳಿಸಿದರು.

ಶಿಕ್ಷಕರೇ ಮುಖ್ಯ: ತಾಪಂ ಇಒ ಉಮೇಶ್‌ ಮಾತನಾಡಿ, ಚುನಾವಣಾ ಆಯೋಗ ನಡೆಸುವ ಚುನಾವಣೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಜಿಲ್ಲೆಯಲ್ಲಿ ಸಂಪೂರ್ಣ ಮತದಾನಕ್ಕೆ ಅನುವು ಮಾಡಿಕೊಡಬೇಕು. ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಶಿಕ್ಷಕರ ಪಾತ್ರ ಹೆಚ್ಚಾಗಿದ್ದು, ಅದೇ ಮಾದರಿಯಲ್ಲಿ ಚುನಾವಣೆಗೆ ಶಿಕ್ಷಕರು ಅಡಿಗಲ್ಲು ಆಗಿರುವುದರಿಂದ ಯಶಸ್ವಿಗೊಳಿಸಲು ಸಹಕಾರಿಯಾಗಬೇಕೆಂದು ಮನವಿ ಮಾಡಿದರು.

ಜಿಲ್ಲಾ ಶಿಕ್ಷಣ ಇಲಾಖೆಯ ಸಂಯೋಜಕರುಗಳಾದ ಶಂಕರ್‌, ಓಲೇಕಾರ್‌, ಬಿಆರ್‌ಸಿ ಮಂಜುಳ, ಬಿಆರ್‌ಪಿ ಶಾಂತರಾಜು, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುದ್ದಣ್ಣ  ಹಾಗೂ ಸಿಬ್ಬಂದಿವರ್ಗ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next