Advertisement

ಸಾರಾಯಿ ಮುಕ್ತ ಗ್ರಾಮವಾಗಿಸಿ

04:19 PM Feb 12, 2020 | Team Udayavani |

ಅಂಕೋಲಾ: ತಾಲೂಕಿನ ಅಗಸೂರು ಗ್ರಾಮ ಸಾರಾಯಿ ಮುಕ್ತ ಗ್ರಾಮವನ್ನಾಗೀಸಲು  ಇಲ್ಲಿಯ ಗ್ರಾಮಸ್ಥರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ತಾಪಂ ಇಒ ಪಿ.ವೈ.ಸಾವಂತಗೆ ಮಂಗಳವಾರ ಮನವಿ ಸಲ್ಲಿಸಿದರು.

Advertisement

ಅಗಸೂರು ಗ್ರಾ.ಪಂ. ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಹಾವಳಿ ಹೆಚ್ಚಾಗಿದ್ದು ಇದನ್ನು ಸಂಪೂರ್ಣವಾಗಿ ನಿರ್ಮೂಲನೇ ಮಾಡಲು ಗ್ರಾ.ಪಂ. ಸದಸ್ಯ ಗೋಪಾಲ ನಾಯಕ ಅಡೂರು ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ ಮನವಿ ಸ್ವೀಕರಿಸಿದ ಪಿ.ವೈ. ಸಾವಂತ ಮದ್ಯಪಾನ ಮುಕ್ತ ಗ್ರಾಮವಾಗಿ ಹೋರಾಟ ಮಾಡುತ್ತಿರುವುದು ಇದೊಂದು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಒಂದು ಮಾದರಿ ಸಂದೇಶವಾಗಿದೆ. ನಮ್ಮಿಂದ ಹೋರಾಗಾರ ಸಮಿತಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಮತ್ತು ಸಂಬಂಧಪಟ್ಟ ಅಧಿಕಾರಿಗೆ ಸಹ ತಿಳಿಸುತ್ತೇನೆ ಎಂದರು. ಹೋರಾಟ ಸಮಿತಿ ಮುಖ್ಯಸ್ಥ ಗೋಪಾಲ ನಾಯಕ ಅಡೂರು ಮಾತನಾಡಿ ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಅಕ್ರಮ ಸರಾಯಿ ಮಾರಾಟ ಹೆಚ್ಚಾಗುತ್ತಿದ್ದು, ಅದನ್ನು ಕಡಿವಾಣ ಹಾಕಲು ಪಣ ತೊಡಬೇಕಾದ ಸಂದರ್ಭ ಬಂದಿದೆ. ಸಾರಾಯಿ ಮುಕ್ತ ಗ್ರಾಮ ಮಾಡಬೇಕಾದರೆ ಸಾರ್ವಜನಿಕರ ಜೊತೆ ಸಂಬಂಧಪಟ್ಟ ಅಧಿಕಾರಿಗಳು ಕೈಜೋಡಿಸಬೇಕು.

ಇದಕ್ಕಾಗಿ ನಮ್ಮ ಗ್ರಾಪಂನಿಂದ ಕೆಲ ಸಾರಾಯಿ ಮಾರಾಟ ಮಾಡುವ ಗೂಡಂಗಡಿಯವರಿಗೆ ನೋಟಿಸ್‌ ಜಾರಿಗೆ ಮಾಡುತ್ತೇವೆ. ಸಾರಾಯಿ ಕಡಿವಾಣಕ್ಕೆ ಅಬಕಾರಿ ಇಲಾಖೆಯವರು ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸಬೇಕು. ಇಲ್ಲವಾದಲ್ಲಿ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಪಂ ಸದಸ್ಯೆ ನಿರ್ಮಾಲ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ರಾಮಂಚ ನಾಯ್ಕ, ಉಪಾಧ್ಯಕ್ಷ ಯಶವಂತ ಗೌಡ, ಸದಸ್ಯ ರವಿ ನಾಯಕ, ಪ್ರಮುಖರಾದ ಶಂಕರ ಗೌಡ, ಸೋಮು ಗೌಡ, ರಾಮದಾಸ ನಾಯಕ, ವಸಂತ ಗೌಡ, ನೀಲಮ್ಮ ಗೌಡ, ಭಾರತಿ ಹರಿಕಂತ್ರ ಸೇರಿದಂತೆ ಹಲವರು ಮಾತನಾಡಿದರು. ಪಿಡಿಒ ಎಂ.ಯು. ಪಟೇಲ್‌, ಮಧುಸೂದನ ನಾಯಕ, ಲಕ್ಷ್ಮೀ ನಾಯಕ, ಚಂದ್ರಕಲಾ ಗೌಡ, ಜಾನಕಿ ಗೌಡ, ಗೀತಾ ಗೌಡ, ತುಳಸಿ ಗೌಡ, ಲಕ್ಷ್ಮೀ ನಾಯ್ಕ, ಶಾಂತಿ ಗೌಡ, ಇಂದಿರಾ ಗೌಡ, ಸರೋಜಾಗೌಡ, ಜಯಶ್ರೀ, ಶೀಲಾ ಗೌಡ, ಭವಾನಿ ಗೌಡ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next