ಬಳ್ಳಾರಿ: ಗ್ರಾಮ ಪಂಚಾಯತ್ ಮಟ್ಟದಲ್ಲಿ ತಂಬಾಕು ನಿಯಂತ್ರಣ ಕುರಿತು ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಪರಿಣಾಮಕಾರಿ ಅನುಷ್ಠಾನಕ್ಕೆಮುಂದಾಗುವಂತೆ ಅಪರ ಜಿಲ್ಲಾಧಿ ಕಾರಿ ಪಿ.ಎಸ್.ಮಂಜುನಾಥ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ತಂಬಾಕುನಿಯಂತ್ರಣ ಕೋಶದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ಶಾಲಾ-ಕಾಲೇಜುಗಳ 200 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು-ತಂಬಾಕು ಉತ್ಪನ್ನಗಳ ಮಾರಾಟ ನಿಷೇ ಧಿಸಬೇಕು ಮತ್ತು ಈ ಕುರಿತು ಗೋಡೆಬರಹ ಹಾಗೂ ನಾಮಫಲಕ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೊಟ್ಟೂರು, ಹರಪನಳ್ಳಿ ತಾಲೂಕುಗಳ ವ್ಯಾಪ್ತಿಯಲ್ಲಿ ತಂಬಾಕು ಬೆಳೆಬೆಳೆಯಲಾಗುತ್ತಿದ್ದು, ಈ ಬೆಳೆ ಬೆಳೆಯುತ್ತಿರುವ ರೈತರಿಗೆ ತಂಬಾಕು ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಬೇರೆ ಬೆಳೆ ಬೆಳೆಯುವ ಬಗ್ಗೆ ಮನವೊಲಿಸುವ ಕೆಲಸ ಮಾಡುವಂತೆ ಅವರು ಉತ್ಪಾದಕರ ಹೆಸರಿರದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳುವುದರ ಜತೆಗೆ ದಂಡ ಹಾಕುವ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಪರವಾನಗಿ ಹೊಂದಿರುವ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯವಾಗಿ ಸ್ಮೋಕ್ ಝೋನ್ ಮಾಡಬೇಕು ಮತ್ತು ಧೂಮಪಾನ ರಹಿತ ಪ್ರದೇಶವೆಂದು ಘೋಷಿಸುವ ಕುರಿತು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ ಅವರು ಅಂಗಡಿಗಳಿಗೆಲೈಸೆನ್ಸ್ ನೀಡುವ ಸಂದರ್ಭದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಮತ್ತು 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ನೀಡದಿರುವ ಕುರಿತ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸೂಚಿಸಬೇಕು ಎಂದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಸಂಬಂಧಿಸಿದ ಸೆಕ್ಷನ್ 4 ಅಡಿ ಫಲಕಗಳನ್ನು ಹಾಕಬೇಕು ಎಂದರು. ವಿವಿಧ ವಿಷಯಗಳ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಶರಣಪ್ಪ, ಡಿಎಚ್‌ಒ ಡಾ| ಎಚ್.ಎಲ್.ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ, ಡಿಎಸ್‌ಒ ಡಾ| ಮರಿಯಂಬಿವಿ.ಕೆ., ಡಿಟಿಒ ಡಾ| ಇಂದ್ರಾಣಿ, ಜಿಲ್ಲಾ ಅಂಕಿತ ಮತ್ತು ಆಹಾರ ಸುರಕ್ಷಿತಾ ಅಧಿಕಾರಿಗಳಾದ ಡಾ| ರುದ್ರಗೌಡ ಪಾಟೀಲ್, ಡಿಎಚ್‌ಇಒ ಈಶ್ವರ್ ದಾಸಪ್ಪನವರ್, ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳಾದ ಡಾ| ಹನುಮಂತಪ್ಪ, ದಂತತಜ್ಞ ಡಾ| ಪ್ರಶಾಂತ್, ಬೋಜರಾಜ್, ಎನ್‌ಸಿಡಿ ಕನ್ಸ್‌ಲ್ಟೆಂಟ್ ಡಾ| ಜಮೀನ್ ತಾಜ್, ಮೌನೇಶ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜ್, ಕಾರ್ಮಿಕ ನಿರೀಕ್ಷರ ಅಧಿಕಾರಿಗಳು ಸೇರಿದಂತೆ ಇನ್ನಿತರರು ಇದ್ದರು.