ಮಧುಗಿರಿ: ಅಗತ್ಯ ದಾಖಲೆ ಸರಳೀಕರಣ ಗೊಳಿಸಿ ರೈತರಿಗೆ ಜಮೀನಿನ ಖಾತೆ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಶಾಸಕ ಎಂ.ವಿ. ವೀರಭದ್ರಯ್ಯ ಸೂಚಿಸಿದರು.
ದೊಡ್ಡೇರಿ ಹೋಬಳಿಯ ಗಡಿ ಭಾಗದ ಸಜ್ಜೆಹೊಸಹಳ್ಳಿ ಗ್ರಾಪಂನಲ್ಲಿ 3ನೇ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರು ಅಲೆದಾಟ ತಪ್ಪಿಸಲು ಪಂಚನಾಮೆ ಮೂಲಕ ದಾಖಲೆ ಸಿದ್ಧಪಡಿಸಿಕೊಂಡು ಸಮಸ್ಯೆಗೆ ಮುಕ್ತಿ ತೋರಬೇಕು. ಇದರಿಂದ ಸುಮಾರು 10 ಸಾವಿರ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಗುರುತಿಸಲು ತಾಲೂಕಿನಲ್ಲಿ ಆಂದೋ ಲನ ಹಮ್ಮಿಕೊಳ್ಳಲಾಗುವುದು. 70-80 ವರ್ಷ ವಾದರೂ ವೃದ್ಧಾಪ್ಯ ಯೋಜನೆಯ ಆದೇಶಪತ್ರ ಈಗ ನೀಡುತ್ತಿರುವುದು ಇಲಾಖೆಗೆ ನಾಚಿಕೆ ಗೇಡು. ಹಲವು ಪಿಂಚಣಿಯ ಹಣ ಬಡವರಿಗೆ ಬರಗಾಲದಲ್ಲಿ ವರದಾನವಾಗಿದೆ. ಇಂತಹ ಸುಮಾರು 5-10 ಸಾವಿರ ಫಲಾನುಭವಿಗಳು ಕ್ಷೇತ್ರದಲ್ಲಿದ್ದು, ಅವರನ್ನು ಗುರುತಿಸಿ ಆದೇಶ ಪತ್ರ ಕೊಡಿಸುವ ಕಾರ್ಯಕ್ಕೆ ಮುಂದಿನ ದಿನ ಗಳಲ್ಲಿ ಚಾಲನೆ ನೀಡಲಾಗುವುದು ಎಂದರು.
ನಿವೇಶನ ಹಂಚಲು ಸೂಚನೆ: ಜನಸ್ಪಂದನೆ ಕಾರ್ಯಕ್ರಮದಲ್ಲಿ ವಿವಿಧ ಪಿಂಚಣಿಯ 62 ಅರ್ಜಿ, ಸಾಗುವಳಿ ಸಕ್ರಮಗೊಳಿಸುವುದು, ಗಂಗಾಕಲ್ಯಾಣ ಹಾಗೂ ಮನೆ ಮತ್ತು ನಿವೇಶನಕ್ಕೆ ಬೇಡಿಕೆಗಳು ಬಂದವು. ಬಗರ್ ಹುಕುಂ ಸಮಿತಿ ರಚಿಸಿ ಕೆಲವನ್ನು ಸ್ಥಳದಲ್ಲೇ ಬಗೆಹರಿಸಿದ ಶಾಸಕರು ನಿವೇಶನಕ್ಕೆ ಸಜ್ಜೆ ಹೊಸಹಳ್ಳಿಯಲ್ಲಿ 1.10 ಎಕರೆ ಜಮೀನು ಗುರುತಿಸಿದ್ದು, ನಿವೇಶನ ಹಂಚಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಅರ್ಜಿ ಮರುಕಳಿಸಿದರೆ ಶಿಸ್ತು ಕ್ರಮಕ್ಕೆ ಮುಂದಾಗುತ್ತೇನೆ ಎಂದು ಎಚ್ಚರಿಸಿದರು. ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಮಾತನಾಡಿ ತಾಲೂಕು ಆಡಳಿತವೆ ಜನರ ಮನೆ ಬಾಗಿಲಿಗೆ ಬಂದು ಸಮಸ್ಯೆ ಆಲಿಸಿ, ಬಗೆಹರಿಸು ವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು.
ತಹಶೀಲ್ದಾರ್ ನಂದೀಶ್ ಮಾತನಾಡಿ, 60ಕ್ಕೂ ಹೆಚ್ಚು ವಿವಿಧ ಪಿಂಚಣಿಯ ಆದೇಶ ಪತ್ರ ವಿತರಿಸಿದ್ದೇವೆ. ಸಾರ್ವಜನಿಕರ ಸಮಸ್ಯೆ ಸ್ಥಳ ದಲ್ಲೇ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ತಹಶೀಲ್ದಾರ್ ನಂದೀಶ್, ಇಒ ದೊಡ್ಡಸಿದ್ದಯ್ಯ, ಕೃಷಿ, ಪಶು ಸಂಗೋಪನೆ, ತೋಟಗಾರಿಕೆ, ರೇಷ್ಮೆ, ಸಹಾಯಕ ನಿರ್ದೇಶಕ ರಾದ ಹನುಮಂತರಾಯಪ್ಪ, ನಾಗಭೂಷಣ್, ವಿಶ್ವನಾಥಗೌಡ, ನಾಗರಾಜು, ಗ್ರಾಪಂ ಅಧ್ಯಕ್ಷ ಮಹಾಲಿಂಗಯ್ಯ, ಪಿಡಿಒ ಪ್ರಶಾಂತ್, ಕಂದಾ ಯಾಧಿಕಾರಿ ಮಹೇಶ್, ಸಹಾಯಕರಾದ ರಾಮಗಿರಿ, ಜಿಪಂ ಮಾಜಿ ಸದಸ್ಯ ಶ್ರೀನಿವಾಸ್, ಎಪಿಎಂಸಿ ಮಾಜಿ ಸದಸ್ಯ ಸಣ್ಣಮಲ್ಲಪ್ಪ, ಮುಖಂಡರಾದ ಮಂಜಣ್ಣ, ವೆಂಕಟೇಶ್‌ಗೌಡ, ಗೋವಿಂದರೆಡ್ಡಿ, ಗಂಗಣ್ಣ, ರಫೀಕ್ ಇದ್ದರು.