ನೀ ಬರ್ತಿಯಾ ಅಂತ ಕಾದು ಕಾದು ಸಾಕಾಯ್ತು. ಈಗ ಕಾಲೆಳೆಯುತ್ತಾ ಎತ್ತಲೋ ಹೊರಟೆ. ಸಣ್ಣಗೆ ಮಳೆ ಹುಯ್ತಾಯಿದೆ. ಬರ್ತೀನಿ ಅಂತ ಹೇಳಿ ಹೀಗೆ ಕಾಯ್ಸೋದು ಸರಿನಾ ಹೇಳು ? ಈ ಪ್ರಶ್ನೆ ಕೇಳ್ಳೋಕೂ ನೀ ಸಿಗಲಿಲ್ಲ. ನೀ ಸಿಕ್ಕಿದ್ರೆ ನನ್ನೊಳಗೆ ಈ ಪ್ರಶ್ನೆನೇ ಹುಟಾ¤ ಇರಲಿಲ್ಲ. ಬಿಡು, ನೀವು ಹುಡ್ಗಿರೇ ಹೀಗೆ … ತುಂಟ ಹುಡುಗನ್ನ ಒಬ್ಬಂಟಿ ಮಾಡಿಬಿಡ್ತೀರಿ. ನೀ ಅಲ್ಲೆಲ್ಲೋ ಕಿಟಕಿ ಹತ್ತಿರ ಮಳೆಯನ್ನೇ ನೋಡುತ್ತಾ , ತಣ್ಣಗೆ ಕೊರೆಯೋ ಸರಳನ್ನ ಎರಡೂ ಕೈಯಲ್ಲಿ ಹಿಡ್ಕೊಂಡು.
Advertisement
“ಅಯ್ಯೋ ಪಾಪ..ಪಾಪಿ ಹುಡ್ಗಾ.. ಇನ್ನೂ ಕಾಯ್ತಾ ಇದ್ದೀನೇನೋ ?’ ಅಂತ ಬೆಚ್ಚಗೆ ಯೋಚಿಸೋ ಹೊತ್ತಲ್ಲೇ , ನಾನು ಮಳೆಯಲ್ಲಿ ನಡುಗುತ್ತಾ, ನಿನ್ನ ನೆನೆಯುತ್ತಾ , ದಿಕ್ಕು ತೋಚದೆ ನಡೆಯುತ್ತಿದ್ದೇನೆ. ನನ್ನತ್ತ ಹೊರಡೋಕೆ ನಿಂಗೆ ನೂರಾರು ಅಡೆತಡೆಗಳು .
ನಿನಗಾಗಿಯೇ ಅಣಿಮಾಡುತ ನಾನಂತೂ ಕಾಯುವೆ !
Related Articles
Advertisement
ನೀ ಯಾಕೆ ನಂಗೆ ಇಷ್ಟೊಂದು ಇಷ್ಟವಾಗಿ, ಬದುಕಿನ ಬಣ್ಣವಾಗಿ, ಆತ್ಮಕ್ಕೆ ಅನಿವಾರ್ಯವಾಗಿ , ಕನಸುಗಳಿಗೆ ಇರುಳಾಗಿ ಕಾಡುತ್ತೀ? ನೀ ಈ ಬದುಕಿನ ಪೂರ್ತಿ ಸಿಗುತ್ತೀಯೋ , ಇಲ್ಲವೋ? ಯಾವುದೂ ಇತ್ಯರ್ಥವಾಗದ ಹೊತ್ತಲ್ಲಿ ನೀನೇ ಈ ಬದುಕಿನ ಅನಿವಾರ್ಯವೆಂದು ಮನಸು ತೀರ್ಪೊಂದನು ನೀಡಿ , ನನ್ನನ್ನು ನೂರಾರು ಗೊಂದಲಗಳಿಂದ ಪಾರುಮಾಡುತ್ತದೆ . ನೀನೆಂದರೆ ಸಾವು ಬದುಕಿನ ನಡುವಿನ ಸೇತುವೆ ಕಣೆ. ನೀ ಯಾವತ್ತೋ ಬರುತ್ತೇನೆಂದು ಹೇಳಿ ಹೋದರೆ. ಮನಸು ಇವತ್ತಿನಿಂದಲೇ ನೀ ಯಾವತ್ತೋ ಸಿಗುವ ಗಳಿಗೆಗಾಗಿ ಕಾಯುತ್ತಾ… ಕನವರಿಸುತ್ತಾ ಕುಳಿತಿರುತ್ತದೆ.
ಕರೆಯೊಂದ ಮಾಡಿಬಿಡಲೇ… ಎದೆಯಿಂದ ಈಗಲೇ..ಪದವಿಲ್ಲದೇ..ಸ್ವರವಿಲ್ಲದೇ.. ನಾನಿನ್ನು ಕೂಗಲೇ ! ಅಲ್ಲೆಲ್ಲೋ ದೂರದಲಿ ನೀ ನಕ್ಕಾಗೆಲ್ಲಾ , ನನ್ನೆದೆಯೊಳಗೆ ಹೂ ಅರಳುತ್ತವೆ. ಆ ಹೂಗಳನ್ನೆಲ್ಲಾ ನೀ ಬರುವ ಹಾದಿಯಲ್ಲಿ ಚೆಲ್ಲಿ ನಿನಗಾಗಿ ಕಾಯುತ್ತಾ ನಿಲ್ಲುವೆ. ನೀ ಎಷ್ಟೇ ಮೆಲ್ಲಗೆ ಹೆಜ್ಜೆ ಇಟ್ಟು ಬಂದರೂ , ನನಗೆ ತಿಳಿದುಹೋಗುತ್ತದೆ. ಏಕೆಂದರೆ, ಅವೆಲ್ಲಾ ನನ್ನದೇ ಎದೆಯಾಳದ ನಿರೀಕ್ಷೆಯ ಹೂಗಳು ಕಣೆ.
ಲವ್ ಯೂ…. ನೀ ಬರುವ ಹಾದಿಯಲ್ಲಿ ನಿಂತ ಹುಡುಗ
– ಜೀವ ಮುಳ್ಳೂರು