Advertisement

ಬಿಲ್ಲವರ ಅಸೋ. ಮುಂಬಯಿ ಮಹಿಳಾ ವಿಭಾಗ: ಮಕರ ಸಂಕ್ರಾಂತಿ ಆಚರಣೆ

11:18 AM Jan 17, 2022 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಮಕರ ಸಂಕ್ರಾಂತಿ ಆಚರಣೆ ಹಾಗೂ ಅರಸಿನ ಕುಂಕುಮ ಕಾರ್ಯಕ್ರಮವು ಜ. 14ರಂದು ಸಂಜೆ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾಂಥಾ ಕ್ರೂಜ್‌ ಪೂರ್ವದ ಬಿಲ್ಲವ ಭವನದ ಸಭಾ ಗೃಹದಲ್ಲಿ ನಡೆಯಿತು.

Advertisement

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಅಧ್ಯಕ್ಷ ಹರೀಶ್‌ ಜಿ. ಪೂಜಾರಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಉಪಧ್ಯಾಕ್ಷೆ ಜಯಂತಿ ವಿ. ಉಳ್ಳಾಲ್‌, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್‌ ಜಿ. ಸಾಲ್ಯಾನ್‌ ಹಾಗೂ ಮಹಿಳಾ ವಿಭಾಗದ ಕಾರ್ಯಾ ಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌ ಹಾಗೂ ಉಪಕಾರ್ಯಾಧ್ಯಕ್ಷೆಯರಾದ ಗಿರಿಜಾ ಚಂದ್ರ ಶೇಖರ್‌ ಹಾಗೂ ಜಯಂತಿ ಕೋಟ್ಯಾನ್‌, ಗೌರವ ಕಾರ್ಯದರ್ಶಿ ಸಬಿತಾ ಜಿ. ಪೂಜಾರಿ ಅವರು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಜತೆ ಕಾರ್ಯದರ್ಶಿ ರೇಖಾ ಸದಾನಂದ್‌ ಅವರು ಪ್ರಾರ್ಥನೆಗೈದರು.

ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಯನ್ನು ಮಹಿಳಾ ವಿಭಾಗದ ಉಪಕಾರ್ಯಧಕ್ಷೆ ಜಯಂತಿ ಎಸ್‌. ಕೋಟ್ಯಾನ್‌ ಅವರು ವಿವರಿಸಿದರು. ದಾಂಪತ್ಯ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಗಿರಿಜಾ ಚಂದ್ರಶೇಖರ್‌ ಅವರನ್ನು ಪುಷ್ಪಗುತ್ಛ ನೀಡಿ, ಶಾಲು ಹೊದೆಸಿ ಸಮ್ಮಾನಿಸಲಾಯಿತು.

ಮಹಿಳಾ ವಿಭಾಗದವರ ವೈವಿಧ್ಯಮಯ ಕಾರ್ಯ  ಕ್ರಮ  ಗಳನ್ನು ಕಂಡಾಗ ಖುಷಿಯಾಗುತ್ತಿದೆ ಎಂದು ಅಧ್ಯಕ್ಷರಾದ ಹರೀಶ್‌ ಅಮೀನ್‌ ಅವರು ನುಡಿ   ದರು. ಉಪಧ್ಯಾಕ್ಷೆ ಜಯಂತಿ ಎ. ಉಳ್ಳಾಲ್‌ ಅವರು ಸ್ಥಳೀಯ ಸಮಿತಿಯ ಮಹಿಳಾ ಸದಸ್ಯೆ ಯರು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದರು. ಕಾರ್ಯಾಧ್ಯಕ್ಷೆ ಶಕುಂತಲಾ ಕೋಟ್ಯಾನ್‌ ಅವರು ಎಲ್ಲ ಸ್ಥಳೀಯ ಹಾಗೂ ಕೇಂದ್ರ ಸಮಿತಿಯ ಮಹಿಳೆ ಯರು ಮಹಿಳಾ ವಿಭಾಗದ ಕಾರ್ಯ ಕ್ರಮಗಳಿಗೆ ಸಹಕಾರ ನೀಡುತ್ತಿದ್ದಾರೆ. ಅವರೆಲ್ಲರನ್ನು ಈ ಸಂದರ್ಭದಲ್ಲಿ ಅಭಿನಂದಿಸುವುದಾಗಿ ಹೇಳಿದರು.

ಅಸೋಸಿಯೇಶನ್‌ನ ಮಹಿಳಾ ವಿಭಾಗ ಸದಸ್ಯೆ ಯರು ಹಾಗೂ ವಿಶೇಷ ಆಮಂತ್ರಿತ ಸದಸ್ಯೆ ಯ ರುಗಳಾದ ಪ್ರೇಮಾ ಕೋಟ್ಯಾನ್‌, ವಿಲಾಸಿನಿ ಸಾಲ್ಯಾನ್‌, ಭವಾನಿ ಕೋಟ್ಯಾನ್‌, ವನಿತಾ ಕುಕ್ಯಾನ್‌, ಲಕ್ಷ್ಮೀ ಪೂಜಾರಿ, ಸುಜಾತ ಪೂಜಾರಿ, ಭಾರತಿ ಅಂಚನ್‌, ಯಶೋದಾ ಎನ್‌. ಟಿ, ಪ್ರಭಾ ಸುವರ್ಣ, ಉಮಾ ಬಂಗೇರ, ಬಬಿತಾ ಕೋಟ್ಯಾನ್‌ ಅವರು ಉಪಸ್ಥಿತರಿದ್ದರು.

Advertisement

ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನೆ, ಕುಣಿತಾ ಭಜನೆ, ವಿವಿಭ ನೃತ್ಯ ವೈವಿಧ್ಯ ಜರಗಿತು. ಗೌರವ ಕಾರ್ಯದರ್ಶಿ ಸಬಿತಾ ಜಿ. ಪೂಜಾರಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಹಾಗೂ ಕೊನೆಗೆ ಜತೆ ಕಾರ್ಯದರ್ಶಿ ಕುಸುಮ ಸಿ. ಪೂಜಾರಿಯವರು ವಂದಿಸಿದರು. ಕಾರ್ಯ ಕ್ರಮದ ಕೊನೆಯಲ್ಲಿ ಲಘು ಉಪಹಾರ ವ್ಯವಸ್ತೆಯನ್ನು ಮಾಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next