Advertisement

ದೇಶದ ಬಹುಸಂಖ್ಯಾತರಿಗೆ ಸ್ವಾತಂತ್ರ್ಯ ಬಂದಿಲ್ಲ: ಮುನಿಯಪ್ಪ

08:13 PM Aug 27, 2019 | Lakshmi GovindaRaj |

ಚಿಕ್ಕಬಳ್ಳಾಪುರ: ದೇಶದಲ್ಲಿ ಬಹುಸಂಖ್ಯಾತದ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ವಿಷಾದಿಸಿದರು. ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಬಿಎಸ್‌ಪಿ ಜಿಲ್ಲಾ ಹಾಗೂ ತಾಲೂಕು ಘಟಕಗಳ ನೂತನ ಪದಾಧಿಕಾರಿಗಳ ಆಯ್ಕೆ ಸಮಾವೇಶದಲ್ಲಿ ಮಾತನಾಡಿದರು.

Advertisement

ನಿರುದ್ಯೋಗ ಸಮಸ್ಯೆ ತಾಂಡವ: ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ಕಳೆದರೂ ಇಂದಿಗೂ ಸಮಾಜದಲ್ಲಿ ಜಾತಿ ತಾರತಮ್ಯ, ಬಡತನ, ಹಸಿವು, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿವೆ. ದೇಶಕ್ಕೆ ಬಂದಿರುವ ಸ್ವಾತಂತ್ರ್ಯ ಕೇವಲ ಕಾರ್ಪೋರೆಟ್‌ ಕಂಪನಿಗಳನ್ನು ನಡೆಸುವ ಬಂಡವಾಳ ಶಾಹಿಗಳಿಗೆ, ಶ್ರೀಮಂತರಿಗೆ ಮಾತ್ರವಿದೆ ಎಂದು ದೂರಿದರು. ದೇಶದಲ್ಲಿ ಬಹುಸಂಖ್ಯಾತರು ಶೋಷಿತ ಸಮುದಾಯಗಳಾಗಿದ್ದು, ಅವರು ಇನ್ನೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಬಲರಾಗಿಲ್ಲ. ದುಡಿಯುವ ಜನರಿಗೆ ಉದ್ಯೋಗ ಸಿಗುತ್ತಿಲ್ಲ. ಕೈಗಾರಿಕೆಗಳು ಆರ್ಥಿಕ ಸಂಕಷ್ಟಗಳಿಂದ ಮುಚ್ಚುತ್ತಿವೆ ಎಂದರು.

ಸಂವಿಧಾನ ಆಶಯ ಈಡೇರಿಸಿ: ಅಂಬೇಡ್ಕರ್‌ ಹುಟ್ಟದೇ ಹೋಗಿದ್ದರೆ ಈ ದೇಶದಲ್ಲಿ ಮೋದಿ, ದೇವೇಗೌಡ ಪ್ರಧಾನಿ ಆಗುತ್ತಿರಲಿಲ್ಲ. ದೇಶದಲ್ಲಿ ಸಾಮಾನತೆ, ಸಾಮಾರಸ್ಯ, ಸೋದರತ್ವ ಕಾಪಾಡುವ ಸಂವಿಧಾನಕ್ಕೆ ಕುತ್ತು ಬಂದಿದೆ. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಕೆಲಸವನ್ನು ಮನುವಾದಿ ಸರ್ಕಾರಗಳು ಮಾಡುತ್ತಿವೆ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಡಿ.ಬಸವರಾಜ್‌ ಮಾತನಾಡಿ, ಅಂಬೇಡ್ಕರ್‌ ಆಶಯದಂತೆ ರಾಜ್ಯಾಂಗದ ಅಧಿಕಾರ ಬಹುಸಂಖ್ಯಾತರ ಕೈಗೆ ಬರಬೇಕಿದೆ. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಜನ ವಿರೋಧಿ ಅವಕಾಶವಾದಿ ರಾಜಕಾರಣದಲ್ಲಿ ತೊಡಗಿದ್ದು, ಬಿಎಸ್‌ಪಿಯನ್ನು ಜಿಲ್ಲಾದ್ಯಂತ ಸಂಘಟಿಸಬೇಕೆಂದರು.

ವೇದಿಕೆಯಲ್ಲಿ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಂ.ಕೃಷ್ಣಮೂರ್ತಿ, ರಾಜ್ಯ ಸಮಿತಿ ಸದಸ್ಯ ಪಿ.ವಿ.ನಾಗಪ್ಪ, ಮುಖಂಡರಾದ ಮುನಿಕೃಷ್ಣ, ರಾಜಶೇಖರ್‌, ವಿ.ವೆಂಕಟೇಶ್‌ ಸೇರಿದಂತೆ ಇತ್ತೀಚೆಗೆ ಶಿಡ್ಲಘಟ್ಟದಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ನೂತನ ನಗರಸಭಾ ಸದಸ್ಯರು ಹಾಜರಿದ್ದರು.

Advertisement

ಬಿಎಸ್ಪಿ ಜಿಲ್ಲಾಧ್ಯಕ್ಷರಾಗಿ ಅಪ್ಸರ್‌ಪಾಷಾ ಆಯ್ಕೆ: ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಘಟಕಗಳ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ವೇಳೆ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷರಾಗಿ ಅಪ್ಸರ್‌ಪಾಷಾ ಆಯ್ಕೆಗೊಂಡರು. ಜಿಲ್ಲಾ ಸಂಯೋಜಕರಾಗಿ ಮುನಿಕೃಷ್ಣಪ್ಪ, ಸೋಮಶೇಖರ್‌, ಸೋದರತ್ವ ಸಮಿತಿ ಜಿಲ್ಲಾಧ್ಯಕ್ಷರಾಗಿ ಮೌಲಾ, ಜಿಲ್ಲಾ ಉಪಾಧ್ಯಕ್ಷರಾಗಿ ವೆಂಕಟೇಶ್‌, ದ್ಯಾವಪ್ಪ, ಜಿಲ್ಲಾ ಕಾರ್ಯದರ್ಶಿಯಾಗಿ ಮೂರ್ತಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜಶೇಖರ್‌, ಶಿಡ್ಲಘಟ್ಟ ತಾಲೂಕು ಅಧ್ಯಕ್ಷರಾಗಿ ಫ‌ಯಾಜ್‌ ಆಯ್ಕೆಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next