Advertisement

ಪೂರ್ಣ ಮಿಲಿಟರಿ ಗೌರವ: ಮೇಜರ್‌ ಧೌಂಡಿಯಾ ಅಂತ್ಯಕ್ರಿಯೆ

11:22 AM Feb 19, 2019 | udayavani editorial |

ಡೆಹರಾಡೂನ್‌ : ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರೊಂದಿಗೆ ಹೋರಾಡುತ್ತಾ ಪ್ರಾಣಾರ್ಪಣೆ ಗೈದ ಸೇನಾ ಮೇಜರ್‌ ವಿಭೂತಿ ಶಂಕರ್‌ ಧೌಂಡಿಯಾಲ್‌ ಅವರ ಅಂತ್ಯಕ್ರಿಯೆ ಇಂದಿಲ್ಲಿ  ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ನಡೆದು  ಸಹಸ್ರಾರು ಜನರು ಅಶ್ರುತರ್ಪಣ ಸಲ್ಲಿಸಿದರು. 

Advertisement

ವರ್ಷದ ಹಿಂದಷ್ಟೇ ಮೇಜರ್‌ ಧೌಂಡಿಯಾಲ್‌ ಅವರನ್ನು ಮದುವೆಯಾಗಿದ್ದ ಪತ್ನಿ ನಿಕಿತಾ ಕೌಲ್‌ ಅವರು ಕಣ್ಣೀರ ಧಾರೆಯ ನಡುವೆಯೇ ಪತಿಗೆ ಶಾಶ್ವತ ವಿದಾಯ ಕೋರಿದರು. ಹೃದ್ರೋಗಿಯಾಗಿರುವ ತಾಯಿ ಸರೋಜ್‌ ಅವರು ಸೊಸೆಯನ್ನು ಆಧರಿಸಿಕೊಂಡು ಹಿಡಿದಿದ್ದರೂ ಪುತ್ರನಿಗೆ ಅಂತಿಮ ವಿದಾಯ ಹೇಳುವಾಗ ಹೃದಯವೇ ಬಾಯಿಗೆ ಬಂದಂತಿತ್ತು. 

ಧೌಂಡಿಯಾ ಅವರ ಪಾರ್ಥಿವ ಶರೀರವಿದ್ಧ ಶವಪೆಟ್ಟಿಗೆಯನ್ನು ತ್ರಿವರ್ಣ ಧ್ವಜದಿಂದ ಮುಚ್ಚಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next