Advertisement

ಹೆದ್ದಾರಿ ನಿರ್ಮಾಣಕ್ಕೆ ಅಪಾರ ಗಿಡ ನಾಶ

02:10 PM Jun 16, 2019 | Team Udayavani |

ಗದಗ: ತಾಲೂಕಿನ ಹುಲಕೋಟಿ ಹಾಗೂ ಗದಗ ಮಾರ್ಗವಾಗಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-63 ನಿರ್ಮಾಣಕ್ಕಾಗಿ ಅಸಂಖ್ಯಾತ ಗಿಡಗಳನ್ನು ನಾಶ ಮಾಡಲಾಗಿದೆ. ಅದಕ್ಕೆ ಪರಿಹಾರವಾಗಿ ಕನಿಷ್ಠ ಒಂದು ಸಾವಿರ ಸಸಿಗಳನ್ನು ಬೆಳೆಸಬೇಕು ಎಂದು ಒತ್ತಾಯಿಸಿ ಗ್ರಾಮದ ಯುವಕರು ಹುಲಕೋಟಿಯಲ್ಲಿ ಪ್ರತಿಭಟನೆ ನಡೆಸಿದರು.

Advertisement

ಗ್ರಾಮದ ಬಸ್‌ ನಿಲ್ದಾಣದ ಬಳಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ತಡೆದು, ಪರಿಸರ ಜಾಗೃತಿಗಾಗಿ ಜಾಥಾ ನಡೆಸಿ ಕೆಲಕಾಲ ಘೋಷಣೆ ಕೂಗಿದರು. ರಸ್ತೆ ನಿರ್ಮಾಣದ ಗುತ್ತಿಗೆ ಪಡೆದಿರುವ ಕೆ.ಎನ್‌.ಆರ್‌. ಕಂಪನಿ ರಸ್ತೆ ಅಗಲೀಕರಣಕ್ಕಾಗಿ ಈ ಭಾಗದಲ್ಲಿನ ಅಸಂಖ್ಯಾತ ಮರಗಳನ್ನು ನಾಶ ಮಾಡಿವೆ. ಇವರು ಬೃಹತ್‌ ಮರ ಕಡಿದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಕಾಂಗ್ರೆಸ್‌ನ ಯುವ ನಾಯಕ ಸಚಿನ್‌ ಪಾಟೀಲರು ಪಕ್ಷದ ಕಾರ್ಯಕರ್ತರು, ಬೆಂಬಲಿಗರಿಗಷ್ಟೇ ಕನಿಷ್ಠ 500 ಮರಗಳನ್ನು ನೆಡುವಂತೆ ಕರೆ ನೀಡಿದ್ದಾರೆ. ಅದರೊಂದಿಗೆ ಸರಕಾರದಿಂದ ಕನಿಷ್ಠ 1000 ಮರಗಳನ್ನು ಬೆಳೆಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರಮೇಶ್‌ ಹೊನ್ನಿನಯಕರ, ರಮೇಶ್‌ ಕರಿಕಟ್ಟಿ, ಮುದಾಸೀರ್‌ ಬಾಳೆಕುಂದ್ರಿ, ಇಮಾಮ್‌ ತಹಶೀಲ್ದಾರ್‌, ಈರಣ್ಣ ಹಂಪನ್ನವರ್‌, ಮಂಜು ಹಂಗಂಕಟ್ಟಿ, ಮಂಜು ಗೋಣಿ, ಶಿವು ಎಲಿಶೆಟ್ಟರ್‌, ಸುರೇಶ್‌ ಕರಿಕಟ್ಟಿ, ರಾಘು ಹಾದಿಮನಿ, ಹಾಲೇಶ್‌ ಕೆಂಬಾವಿಮಠ, ಮಂಜು ತಿರಲಾಪುರ್‌, ಮಂಜು ಬಳಗಾನೂರ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next