Advertisement

ಚೆನ್ನೈ: ಕೆಮಿಕಲ್ ಗೋಡೌನ್ ನಲ್ಲಿ ಭಾರೀ ಅಗ್ನಿ ಅನಾಹುತ ; 100 ಕೋಟಿ ರೂ. ಮೊತ್ತದ ವಸ್ತು ಭಸ್ಮ

08:54 AM Mar 01, 2020 | Hari Prasad |

ಚೆನ್ನೈ: ಇಲ್ಲಿನ ಮಾಧವರಂ ಪ್ರದೇಶದಲ್ಲಿರುವ ರಾಸಾಯನಿಕ ಸಂಗ್ರಹಾಗರದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಸುತ್ತಮುತ್ತ ವ್ಯಾಪಿಸುತ್ತಿರುವ ಭಾರೀ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳದ 500 ಸಿಬ್ಬಂದಿಗಳು ಮತ್ತು 30 ಅಗ್ನಿಶಾಮಕ ವಾಹನಗಳು ಹಾಗೂ ಆರು ಫೋಮ್ ಟೆಂಡರ್ ಗಳು ಶ್ರಮಿಸುತ್ತಿವೆ.

Advertisement

ವೈದ್ಯಕೀಯ ಬಳಕೆಗಾಗಿ ರಾಸಾಯನಿಕ ವಸ್ತುಗಳನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಡುವ ಗೋಡೌನ್ ಇದಾಗಿದೆ ಎಂದು ಪ್ರಾಥಮಿಕ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಇಲ್ಲಿ ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಡಲಾಗಿದ್ದ ರಾಸಾಯನಿಕ ಕಚ್ಛಾ ವಸ್ತುಗಳಿಗೆ ಬೆಂಕಿ ತಗುಲಿರುವುದರಿಂದ ಸುಮಾರು 100 ಕೋಟಿಗೂ ಅಧಿಕ ಮೊತ್ತದ ವಸ್ತುಗಳು ಬೆಂಕಿಗೆ ಆಹುತಿಯಾಗಿರಬಹುದೆಂದು ಅಗ್ನಿಶಾಮಕ ದಳದ ಉನ್ನತ ಅಧಿಕಾರಿಯ ಹೇಳಿಕೆಯನ್ನು ಆಧರಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next