Advertisement
ನಗರದ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗವನ್ನು ಮಂಗಳವಾರ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
Related Articles
Advertisement
ರೈಲು ನಿಲ್ದಾಣಕ್ಕೆ ನೇರ ಸಂಪರ್ಕ: ಈ ಮೊದಲು ಪ್ರಯಾಣಿಕರು ಮೆಟ್ರೋ ನಿಲ್ದಾಣದಿಂದ ಶ್ಯಾಮಲಾ ಸಿಲ್ಕ್ ವೃತ್ತದಿಂದ ರೈಲು ನಿಲ್ದಾಣ ತಲುಪಬೇಕಿತ್ತು. ಲಗೇಜು ಹೊತ್ತುಕೊಂಡು “ಪೀಕ್ ಅವರ್’ನಲ್ಲಿ ರಸ್ತೆ ದಾಟುವುದು ಪ್ರಯಾಣಿಕರಿಗೆ ಕಿರಿಕಿರಿಯಾಗಿತ್ತು. ಈಗ ಮೆಟ್ರೋ ನಿಲ್ದಾಣದ ಟಿಕೆಟ್ ಕೌಂಟರ್‌ನಿಂದಲೇ ನೇರವಾಗಿ ರೈಲು ನಿಲ್ದಾಣಕ್ಕೆ ತೆರಳಬಹುದು.
ಅಲ್ಲದೆ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಗೂ ಇದು ಸಂಪರ್ಕ ಕಲ್ಪಿಸುತ್ತದೆ. ಈ ಸೌಲಭ್ಯದಿಂದ ಪ್ರಯಾಣಿಕರಿಗೆ ಕನಿಷ್ಠ ಅರ್ಧ ಕಿ.ಮೀ.ನಷ್ಟು ಸಂಚಾರ ಕಡಿಮೆ ಆಗಲಿದೆ. ಒಂದು ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಕೆ.ಜೆ. ಜಾರ್ಜ್ ತಿಳಿಸಿದರು.
ಇದೇ ವೇಳೆ ಕೆಂಪೇಗೌಡ ಮೆಟ್ರೋ ನಿಲ್ದಾಣದ ಮತ್ತೂಂದು ಪ್ರವೇಶ ದ್ವಾರ ಚಿಕ್ಕಲಾಲ್‌ಬಾಗ್‌ನಿಂದ ಮಿನರ್ವ್ ಮಿಲ್ಸ್ ಬಳಿ ರಸ್ತೆ ದಾಟಲು ಮತ್ತೂಂದು ಸುರಂಗಮಾರ್ಗವನ್ನೂ ಲೋಕಾರ್ಪಣೆ ಮಾಡಲಾಯಿತು. ಇದು ರೈಲ್ವೆ ಕಾಲೊನಿಯಿಂದ ಗೋಪಾಲಪುರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ.
ಇದರ ಉದ್ದ ಸುಮಾರು 60 ಮೀಟರ್ ಹಾಗೂ ಅಗಲ 4.5 ಮೀ. ಇದೆ. ನಾಲ್ಕೂವರೆ ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು. ಸಂಸದ ಪಿ.ಸಿ.ಮೋಹನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಶಾಸಕ ದಿನೇಶ್ ಗುಂಡೂರಾವ್, ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಮತ್ತಿತರರು ಇದ್ದರು. ಕೆರೆ ಪುನರುಜ್ಜೀವನ: ಬಿಎಂಆರ್‌ಸಿ, ಟೈಟಾನ್ ಕಂಪನಿ ಹಾಗೂ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಆನೇಕಲ್‌ನ ವೀರಸಂಸ್ರ ಕೆರೆ ಮತ್ತು ಕೆಂಗೇರಿ ಕೆರೆಗಳ ಪುನರುಜ್ಜೀವಗೊಳಿಸಲು ಮುಂದಾಗಿದೆ. ಈ ಸಂಬಂಧ ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈಗಾಗಲೇ ಉದ್ದೇಶಿತ ಎರಡೂ ಕೆರೆಗಳ ಅಭಿವೃದ್ಧಿಗೆ “ಸಮಗ್ರ ಯೋಜನಾ ವರದಿ’ (ಡಿಪಿಆರ್) ಸಿದ್ಧಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕೆರೆಗಳ ಒತ್ತುವರಿ ತೆರವು, ಒಳಚರಂಡಿ ನೀರು ಸೇರದಂತೆ ತಡೆಗೋಡೆ ನಿರ್ಮಾಣ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗುವುದು. ಅಪಾರ್ಟ್‌ಮೆಂಟ್‌ಗೆ ಅನುಕೂಲ?: ಚಿಕ್ಕಲಾಲ್‌ಬಾಗ್‌ನಿಂದ ಗೋಪಾಲಪುರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಸುರಂಗಮಾರ್ಗದಿಂದ ಅಣತಿ ದೂರದಲ್ಲೇ ಇರುವ ಅಪಾರ್ಟ್‌ಮೆಂಟ್‌ಗೂ ಅನುಕೂಲ ಆಗಲಿದೆ. ಸುರಂಗ ಮಾರ್ಗ ನಿರ್ಮಾಣದ ಹಿಂದಿನ ಉದ್ದೇಶ ಈ ಅಪಾರ್ಟ್‌ಮೆಂಟ್‌ನ ನಿವಾಸಿಗಳಿಗೆ ಮುಂದಿನ ದಿನಗಳಿಗೆ ಅನುಕೂಲ ಮಾಡಿಕೊಡುವುದೂ ಆಗಿದೆ ಎಂದು ಹೇಳಲಾಗುತ್ತಿದೆ. ಗೋಪಾಲಪುರದ ಎದುರಿಗೇ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್ ಇದೆ. ನಡುವಿನ ರಸ್ತೆ ದಾಟಿದರೆ ಸಾಕು, ಸುರಂಗಮಾರ್ಗದ ಪ್ರವೇಶ ದ್ವಾರಕ್ಕೆ ಬಂದು ನಿಲ್ಲಬಹುದು.