Advertisement

ಮಳೆಗೆ ನೆಲಕಚ್ಚಿದ ಮೆಕ್ಕೆ ಜೋಳದ ಬೆಳೆ

04:48 PM Oct 17, 2020 | Suhan S |

ಆಲೂರು: ತಾಲೂಕಾದ್ಯಂತ ಕೆಲ ದಿನಗಳಿಂದ ಸುರಿದ ಮಳೆಯಿಂದ ಮೆಕ್ಕೆ ಜೋಳ ಸೇರಿಇತರೆ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಕೆ.ಎಸ್‌.ಮಂಜೇ ಗೌಡ ಅಭಿಪ್ರಾಯಪಟ್ಟರು.

Advertisement

ತಾಲೂಕಿನಲ್ಲಿಮಳೆಯಿಂದಹಾನಿಗೊಳಗಾದ ರೈತರ ಜಮೀನಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿ, ಆಗಸ್ಟ್‌ನಲ್ಲಿ ಸುರಿದ ಗಾಳಿ ಮಳೆಯಿಂದಾಗಿ ಶೇ.60 ಮೆಕ್ಕೆಜೋಳ ಸಂಪೂರ್ಣ ನೆಲಕಚ್ಚಿತ್ತು. ಅಳಿದುಳಿದ ಬೆಳೆಕೈ ಸೇರುವಷ್ಟರಲ್ಲಿಮತ್ತೆ ಮಳೆ ಬಂದು ಸಂಪೂರ್ಣ ನಾಶವಾಗಿದೆ ಎಂದು ಹೇಳಿದರು.

ಬೆಂಬಲ ಬೆಲೆಘೋಷಿಸಿ: ಜೋಳ ಸಂಪೂರ್ಣ ನೆಲಕ್ಕೆ ಉರುಳಿರುವುದರಿಂದ ಹೊಲದಲ್ಲಿಯೇ ಜೋಳ ಮೊಳಕೆ ಆಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾನಿಗೆ ಒಳಗಾದ ರೈತರು ಬೆಳೆದ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಘೋಷಿಸಿ, ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಗಾಯದ ಮೇಲೆ ಬರೆ: ತಾಪಂ ಸದಸ್ಯ ನಟರಾಜ್‌ ನಾಕಲಗೋಡು ಮಾತನಾಡಿ, ತಾಲೂಕಿನ‌ಲ್ಲಿ ಸುರಿಯುತ್ತಿರುವ ಮಳೆ ಭಾರೀ ಅವಾಂತರವನ್ನೇಸೃಷ್ಟಿಸಿದೆ. ರೈತರ ಬದುಕಿಗೆ ಕೊಳ್ಳಿ ಇಟ್ಟಿದೆ. ಜುಲೈ, ಆಗಸ್ಟ್ ನಲ್ಲಿ ಸುರಿದ ಮಳೆ ಯಿಂದ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದರು. ಪುನಃ ಮಳೆ ಬಂದು ಅಳಿದುಳಿದ ಮೆಕ್ಕೆಜೋಳ ನಾಶವಾಗಿ, ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಮ್ಮಣ್ಣಗೌಡಗೆ ಜಿಲ್ಲಾಎಪಿಎಂಸಿ ಅಧ್ಯಕ್ಷ ಮಂಜೇಗೌಡ ಹಾಗೂ ನಟರಾಜ್‌ ನಾಕಲ ಗೋಡು ಹಾನಿಗೊಳಗಾದ ಮೆಕ್ಕೆಜೋಳದ ಹೊಲ ಹಾಗೂ ಕಟಾವು ಮಾಡಿದ್ದ ಮೆಕ್ಕೆ ಜೋಳದ ರಾಶಿಯೊಳಗೆ ಫ‌ಂಗಲ್ಸ್‌ ಹಾಗೂ ಮೊಳಕೆಯೊಡೆದ ಜೋಳ ತೋರಿಸಿ ಸರ್ಕಾರಕ್ಕೆ ಪ್ರಾಮಾಣಿಕವಾಗಿ ವರದಿಸಲ್ಲಿಸುವಂತೆ ಮನವಿ ಮಾಡಿದರು. ಎಪಿಎಂಸಿ ಸದಸ್ಯ ರಾಜನಾಯ್ಕ, ಜೆಡಿಎಸ್‌ ಮುಖಂಡ ಜೈಪಾಲ್‌ ಇತರರಿದ್ದರು.

Advertisement

ಆನೆ ದಾಳಿಗೆ ತುತ್ತಾದ ಬೆಳೆ ಪರಿಹಾರಕ್ಕೆಕ್ರಮ :

ಬೇಲೂರು: ತಾಲೂಕಿನ ಮಲೆನಾಡುಭಾಗ ಅರೇಹಳ್ಳಿ, ಬಿಕ್ಕೋಡು ಹೋಬಳಿಯ 10 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಾಡಾನೆಗಳು ತೋಟ, ಹೊಲ ಗದ್ದೆಗೆ ನುಗ್ಗಿ ಬೆಳೆನಾಶ ಮಾಡಿದ್ದು, ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಶೀಘ್ರ ಪರಿಹಾರಒದಗಿಸುವುದಾಗಿ ಶಾಸಕ ಕೆ.ಎಸ್‌. ಲಿಂಗೇಶ್‌ ಭರವಸೆ ನೀಡಿದರು.

ಕಾಡಾನೆಯಿಂದ ಬೆಳೆ ಹಾನಿಯಾದ ತಾಲೂಕಿನ ಮಲೆನಾಡು ಭಾಗದ ಗ್ರಾಮದ ತೋಟ, ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಆನೆಗಳ ದಾಳಿಯಿಂದ ಅಪಾರ ಪ್ರಮಾಣದಲ್ಲಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಕಂದಾಯ, ಕೃಷಿ, ತೋಟಗಾರಿಕೆ, ಅರಣ್ಯ ಅಧಿಕಾರಿಗಳು ನಷ್ಟದಅಂದಾಜುಪಟ್ಟಿ ತಯಾರಿಸಬೇಕು ಎಂದು ಸೂಚಿಸಿದರು.

ರೈತರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರದಮೇಲೆಒತ್ತಡಹಾಕಲಾಗುವುದು. ಆನೆಗಳು ತಾಲೂಕಾದ್ಯಂತ ಸಂಚರಿ ಸುತ್ತಿದ್ದು, ಕಾಫಿ ತೋಟ, ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿವೆ. ಬೆಳೆ ನಷ್ಟದಿಂದ ರೈತರು ಜೀವನಕ್ಕೆ ತೊಂದರೆ ಉಂಟಾಗಿದೆ. ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗೆ ಸ್ಥಳಾಂತರಿಸಲು ಶ್ರಮವಹಿಸಿದ್ದಾರೆ ಎಂದು ಹೇಳಿದರು.

ವಲಯ ಅರಣ್ಯ ಅಧಿಕಾರಿ ಯಶ್ಮಾ ಮಾಚಮ್ಮ ಮಾತನಾಡಿ, ವಾರದಿಂದಬೇಲೂರು ವಲಯ ವ್ಯಾಪ್ತಿಯಲ್ಲಿ 25 ಆನೆಗಳು ಬೀಡುಬಿಟ್ಟಿದ್ದು, ಅದರಲ್ಲಿ ಎರಡು ಭಾಗಗಳಾಗಿ ಸಂಚರಿಸುತ್ತಿವೆ. ಶಿರಗುರ, ನಾರ್ವೆ, ತುಂಬದೇವನಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚರಿಸಿ ಲಕ್ಷಾಂತರ ರೂ. ನಷ್ಟ ಉಂಟುಮಾಡುತ್ತಿವೆ.ಈಗಾಗಲೇಅರಣ್ಯ ಸಿಬ್ಬಂದಿನಷ್ಟದ ಅಂದಾಜು ಪಟ್ಟಿ ಮಾಡುತ್ತಿದ್ದಾರೆ.

ಆಲೂರು ಮತ್ತು ಬೇಲೂರಿನಿಂದ 20 ಅರಣ್ಯ ಸಿಬ್ಬಂದಿಗಳೊಂದಿಗೆ ಆನೆ ಓಡಿಸುವಕೆಲಸ ಮಾಡುತ್ತಿದ್ದೇವೆ ಎಂದರು.ಈವೇಳೆತಾಪಂಸದಸ್ಯಸೋಮಯ್ಯ,ಜೆಡಿಎಸ್‌ ಮುಖಂಡರಾದ ನಟರಾಜ್‌, ಸವೀನ್‌, ಕೇಶವಮೂರ್ತಿ, ಸುಗನ್‌ ರಾಜ್‌, ಸಂದೇಶ್‌, ಸಂತೋಷ್‌ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next