ಫ್ಯಾಷನ್ ಹೆಸರಿನಲ್ಲಿ ದಿನಬೆಳಗಾದರೆ ಹೊಸ ವಿನ್ಯಾಸದ ಡ್ರೆಸ್‌ಗಳು ಮಾರುಕಟ್ಟೆಗೆ ಬರುತ್ತವೆ. ಆದರೂ ಶತಮಾನಗಳಿಂದ ಜನರು ಧರಿಸುತ್ತಿರುವ “ಜೀನ್ಸ್ ಅಥವಾ ಡೆನಿಮ್’ ಫ್ಯಾಷನ್ ಜಗತ್ತಿನಲ್ಲಿ ಎಂದಿಗೂ ಅಜರಾಮರ. ಎಷ್ಟೆಲ್ಲಾ ತರಾವರಿ ವಿನ್ಯಾಸಗಳು ಬಂದು ಹೋದವು, ಏನೆಲ್ಲಾ ವಸ್ತ್ರಗಳು ಬಂದವು ಆದರೆ ಡೆನಿಮ್ ಮಾತ್ರ ತನ್ನ ಆಕರ್ಷಣೆ ಕಳೆದುಕೊಳ್ಳಲಿಲ್ಲ. ಡೆನಿಮ್ ಕೂಡಾ ಕಾಲಕ್ಕೆ ತಕ್ಕಂತೆ ವಿನ್ಯಾಸ ಬದಲಿಸಿಕೊಳ್ಳುತ್ತಾ ಹಲವಾರು ರೂಪಾಂತರಗಳಿಗೆ ಒಗ್ಗಿಕೊಳ್ಳಬೇಕಾದ ಕಾರಣಕ್ಕೋ ಏನೋ ಡೆನಿಮ್ ಇಂದಿಗೂ ಎಂದೆಂದಿಗೂ ಟ್ರೆಂಡಿ ಡ್ರೆಸ್.
ಇಂಥದ್ದೇ ಖ್ಯಾತಿ ಇರುವ ಮತ್ತೂಂದು ಡಿಸೈನ್ ಎಂದರೆ ಅದು ಸ್ಟ್ರೈಪ್ಸ್. ಎಷ್ಟೋ ವರ್ಷಗಳಿಂದ ಬಟ್ಟೆಗಳ ಮೇಲೆ ಸ್ಟ್ರೈಪ್ಸ್ ವಿನ್ಯಾಸ ಕೂಡ ರಾರಾಜಿಸುತ್ತಿದೆ. ಸ್ಟ್ರೈಪ್ ಉಡುಗೆಗಳ ಗಮ್ಮತ್ತು ಏನೆಂದರೆ ಇವನ್ನು ಫ್ಯಾಷನೆಬಲ್ ಆಗಿಯೂ ಮತ್ತು ಸಭ್ಯವಾಗಿಯೂ ಧರಿಸಬಹುದು. ವಸ್ತ್ರ ವಿನ್ಯಾಸಕ್ಕೆ ತಕ್ಕಂತೆ ಸ್ಟ್ರೈಪ್ ಡಿಸೈನ್ ಚಂದ ಕಾಣುತ್ತದೆ.
ಈಗ ಡೆನಿಮ್ ಮತ್ತು ಸ್ಟ್ರೈಪ್ ಕಾಂಬಿನೇಷನ್‌ನಲ್ಲಿ ಹೊಸ ಫ್ಯಾಷನ್ ಅಲೆಯೊಂದು ಎದ್ದಿದೆ. ಟ್ರೆಂಡಿ ಟ್ರೆಂಡಿ ಸ್ಟ್ರೈಪ್ ಟಾಪ್‌ಗ್ಳ ಜೊತೆ ಅಷ್ಟೇ ಟ್ರೆಂಡಿ ಜೀನ್ಸ್ ಪ್ಯಾಂಟ್ ಅಥವಾ ಸ್ಕರ್ಟ್ ಧರಿಸುವುದೇ ಈ ಹೊಸ ಫ್ಯಾಷನ್. ಹಾಗೆ ನೋಡಿದರೆ ಈ ಫ್ಯಾಷನ್ ಹುಟ್ಟಿಕೊಂಡಿದ್ದು ಫ್ಯಾಷನ್ ತವರು ಫ್ರಾನ್ಸ್‌ನಲ್ಲಿ. ಇದಕ್ಕೆ “ಫ್ರೆಂಚ್ ಗರ್ಲ್ ಸ್ಟೈಲ್’ ಎಂದೇ ಹೆಸರು. ಇದು ಜಗತ್ತಿನಾದ್ಯಂತ ಭಾರಿ ಪ್ರಸಿದ್ಧಿ ಪಡೆದಿರುವ ಸ್ಟೈಲ್. ಕೆಲಕಾಲ ಕಣ್ಮರೆಯಾದಂತಾಗಿ ಮತ್ತೆ ಹೊಸ ರೂಪದಲ್ಲಿ ಧುತ್ತನೆ ಪ್ರತ್ಯಕ್ಷವಾಗುತ್ತದೆ. ಸದ್ಯ ಭಾರತದಲ್ಲಿ ಈ ಟ್ರೆಂಡ್ ಓಡುತ್ತಿದೆ. ಇದನ್ನು ತೋರಿಸಿಕೊಟ್ಟ ಕೀರ್ತಿ ಎಂದಿನಂತೇ ನಮ್ಮ ಬಾಲಿವುಡ್ ದಿವಾಗಳಿಗೇ ಸಲ್ಲುತ್ತದೆ.
ಈ ಕಾಂಬಿನೇಷನ್ ಡ್ರೆಸ್ಸನ್ನು ಹಲವಾರು ರೀತಿಯಲ್ಲಿ ತೊಡಬಹುದು. ಪ್ಯಾಚ್ ವರ್ಕ್ ಡೆನಿಮ್ ಅಥವಾ ರಿಪ್ಡ್ ಡೆನಿಮ್ ಮೇಲೆ ದೊಗಳೆ ಫಾರ್ಮಲ್ ಸ್ಟ್ರೈಪ್ ಶರ್ಟ್ ತೊಟ್ಟು, ಶರ್ಟಿನ ತೋಳುಗಳನ್ನು ಚೂರು ಮೇಲಕ್ಕೆ ಏರಿಸಿಕೊಂಡರೆ ಟಾಮ್ ಬಾಯ್ ಲುಕ್‌ನಲ್ಲಿ ಕಾಣಿಸಿಕೊಳ್ಳಬಹುದು. ಟಾಮ್ ಬಾಯಿಷ್ ಲುಕ್ ಬೇಡ, ಗ್ಲಾಮರಸ್ ಆಗಿ ಕಾಣಬೇಕೆಂದು ಬಯಸುತ್ತೀರ ಅದೂ ಕೂಡ ಸಾಧ್ಯ. ಅದನ್ನು ಬಾಲಿವುಡ್ ಪಟಾಕ ಗುಡ್ಡಿ ಆಲಿಯಾ ಭಟ್ ತೋರಿಸಿಕೊಟ್ಟಿದ್ದಾಳೆ. ಸ್ಟ್ರಿಪ್ಡ್ ಸ್ಟ್ರೈಫ್ ಟಾಪ್‌ನೊಂದಿಗೆ ಬೂಟ್ ಕಟ್ ಜೀನ್ಸ್ ತೊಟ್ಟು ಮೇಲೊಂದು ಮ್ಯಾಕ್ಸಿ ಕೋಟ್ ತೊಟ್ಟು ಆಲಿಯಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಳು. ಆಕೆಯಂತೆಯೇ ಡೆನಿಮ್ ಮೇಲೆ ಸ್ಲಿàವ್‌ಲೆಸ್ ಅಥವಾ ಸ್ಟ್ರಿಪ್ಡ್ ಸ್ಟ್ರೈಪ್ ಟಾಪ್ ಧರಿಸಿದರೆ ಏಕ್‌ದಂ ಫ್ಯಾಷನೆಬಲ್ ಆಗಿ ಕಾಣಬಹುದು. ಅದಲ್ಲದೇ ಜೀನ್ಸ್ ಓವರಾಲ್ ತೊಟ್ಟು ಕತ್ತಿನ ವರೆಗೂ ಬರುವ ರೋಲ್‌ನೆಕ್ ಟೀಶರ್ಟ್ ಧರಿಸಲೂಬಹುದು. ಬರೀ ಪ್ಯಾಂಟೊಂದಿಗೆ ಮಾತ್ರ ಸ್ಟ್ರೈಪ್ ಶರ್ಟ್ ಧರಿಸಬಹುದು ಎಂದೇನಿಲ್ಲ. ಡೆನಿಮ್ ಸ್ಕರ್ಟ್ ಜೊತೆ ಕೂಡ ಸ್ಟ್ರೈಪ್ ಶರ್ಟ್‌ದು ಹೇಳಿ ಮಾಡಿಸಿದ ಕಾಂಬಿನೇಶನ್. ಅದರಲ್ಲೂ ಡೆನಿಮ್ ಸ್ಟ್ರೇಟ್ ಕಟ್ ಸ್ಕರ್ಟ್ ಜೊತೆ ಪ್ಯಾಚ್ ವರ್ಕ್ ಇರುವ ಶರ್ಟನ್ನು ಧರಿಸಿ ಇನ್‌ಶರ್ಟ್ ಮಾಡಬೇಕು. ಸ್ಟೈಲಿಶ್ ಸಿಟಿ ಗರ್ಲ್ ಲುಕ್ ಗ್ಯಾರಂಟಿ.
ಡಿನಿಮ್ ಶಾರ್ಟ್ ಜೊತೆ ಕೂಡ ಸ್ಟ್ರೈಪ್ ಶರ್ಟ್ ಧರಿಸಿ, ಶರ್ಟಿನ ಮುಂಬಾಗದಲ್ಲಿ ಗಂಟು ಬಿಗಿಯುವುದು ಮತ್ತೂಂದು ಸ್ಟೈಲ್. ಇದಲ್ಲದೇ ಕ್ಯಾಶುವಲ್ ಸ್ಟ್ರೈಪ್ ಶರ್ಟ್, ಕ್ಯಾಶುವಲ್ ಸ್ಟ್ರೈಪ್ ಟೀ ಶರ್ಟ್‌ಗಳಂತೂ ಮಾರುಕಟ್ಟೆಯಲ್ಲಿ ಲಭ್ಯವಿವೆ.
ಸ್ಟ್ರೈಪ್ ಶರ್ಟ್ ಮತ್ತು ಡೆನಿಮ್ ಕಾಂಬಿನೇಷನ್ ಉಡುಗೆಯನ್ನು ಸಂದರ್ಭಕ್ಕೆ ಸರಿಯಾಗಿ ತೊಡಬೇಕು. ಆಫಿಸ್ ಮೀಟಿಂಗ್, ಕ್ಯಾಶುಲ್ ಪಾರ್ಟಿ ಇಂಥ ಸಮಯದಲ್ಲೆಲ್ಲಾ ಡೆನಿಮ್ ಮೇಲೆ ಸ್ಟ್ರೈಪ್ ಇರುವ ಸಾದಾ ಶರ್ಟ್ ಅಥವಾ ಟಾಪ್ ಚನ್ನಾಗಿ ಕಾಣುತ್ತವೆ. ಅಲ್ಲದೇ ನಿಮಗೆ ಗಂಭೀರ ನೋಟವನ್ನೂ ನೀಡುತ್ತವೆ. ಇನ್ನು ಫ್ರೆಂಡ್ಸ್ ಜೊತೆ ಸುತ್ತಾಟ, ಶಾಪಿಂಗ್, ಪಾರ್ಟಿ ವೇಳೆ ರಗಡ್ ಆಗಿ ಕಾಣವಂಥ ಪ್ಯಾಚ್ ವರ್ಕ್ ಸ್ಟ್ರೈಪ್ ಶರ್ಟ್‌ಗಳು, ಉದ್ದ ತೋಳಿನ ತುಸು ದೊಗಳೆ ಟೀ ಶರ್ಟ್‌ಗಳು ಸರಿ ಹೊಂದುತ್ತವೆ. ಇಂಥ ಸಮಯದಲ್ಲಿ ಜೀನ್ಸ್ ಕೂಡ ಅಷ್ಟೇ ಟ್ರೆಂಡಿಯಾಗಿರುವುದನ್ನು ಆಯ್ದುಕೊಳ್ಳುವುದು ಉತ್ತಮ.
ಇನ್ನು ಆಕ್ಸೆಸರೀಸ್ ವಿಷಯಕ್ಕೆ ಬಂದರೆ, ಒಂದು ಒಳ್ಳೆ ವಾಚ್, ಸೂಪರ್ ಆಗಿರುವ ಸನ್‌ಗಾÉಸ್, ಸ್ನೀಕರ್ ಶೂ ಅಥವಾ ಹೊಂದುವ ಚಪ್ಪಲಿ ಸಾಕು.
ಈ ಟ್ರೆಂಡ್ ಸದ್ಯ ಭಾರಿ ಹವಾ ಎಬ್ಬಿಸುತ್ತಿದೆ. ಇದರ ಹವಾ ಕಡಿಮೆಯಾಗುವುದರ ಒಳಗೆ ನೀವು ಒಂದು ಕೈ ನೋಡೇ ಬಿಡಿ.
– ಚೇತನ. ಜೆ.ಕೆ