Advertisement
ಅಕಾಲಿಕ ಮಳೆ, ನೀರಿನ ಕೊರತೆಯ ಜತೆಗೆ ಕಾಡುವ ರೋಗಗಳ ಮಧ್ಯೆ ಅಡಿಕೆ ಬೆಳೆಯನ್ನು ಉಳಿಸಿಕೊಳ್ಳುವುದು ಹಾಗೂ ನಿರೀಕ್ಷಿತ ಫಲ ಪಡೆಯುವುದು ತ್ರಾಸದಾಯಕ. ಆದರೆ ನಿರ್ವಹಣೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಕಚ್ಚಾ ರೂಪದಲ್ಲಿ ಕೊಡುವ ಯೂರಿಯಾವನ್ನು 250 ಗ್ರಾಂ. ಸೂಪರ್ ಪಾಸ್ಪೇಟ್ 300 ಗ್ರಾಂ. ಮತ್ತು ಪೊಟ್ಯಾಶ್ 225 ಗ್ರಾಂ. ಅನ್ನು ವರ್ಷಕ್ಕೆ ಮೂರು ಬಾರಿ ವಿಭಜಿಸಿ ಕೊಡಬೇಕು. ಅಧಿಕ ಮಳೆಯಾಗುವ ಕರಾವಳಿ ಭಾಗಗಳಲ್ಲಿ ಗೊಬ್ಬರಗಳನ್ನು ವಿಭಜಿತ ಕಂತುಗಳಲ್ಲಿ ಕೊಡುವುದು ಸೂಕ್ತ. ಮಳೆಗಾಲ ಪೂರ್ವದಲ್ಲಿ ಸಾರಜನಕ ಕಡಿಮೆ ಇರುವ ಗೊಬ್ಬರ ಹಾಗೂ ಮಳೆಗಾಲ ಮುಗಿಯುವಾಗ ರಂಜಕ, ಸಾರಜನಕ, ಪೊಟ್ಯಾಶ್ ಸಮ ಪ್ರಮಾಣದಲ್ಲಿ ನೀಡಬೇಕು. ಜನವರಿ, ಫೆಬ್ರವರಿ ತಿಂಗಳಲ್ಲಿ ಮತ್ತೂಮ್ಮೆ ಗೊಬ್ಬರ ಹಾಕಬೇಕು.
Related Articles
ಸಾಂಪ್ರದಾಯಿಕ ಕ್ರಮದಂತೆ ಬುಡ ಬಿಡಿಸಿ ಕೊಡುವುದು ಈಗ ಸಾಧ್ಯವಾಗದು. ಅದಕ್ಕೆ ಮೂರೂ ಗೊಬ್ಬರ ಹಾಗೂ ಲಘು ಪೊಷಕಾಂಶಗಳಾದ ಸತು, ಬೋರಾನ್, ಮ್ಯಾಂಗನೀಸ್ ಉಳ್ಳ ಮಿಶ್ರಣವನ್ನು ಪ್ರಮಾಣ ಹಾಗೂ ಗಿಡದ ಲೆಕ್ಕಾಚಾರದ ಮೇಲೆ ಬ್ಯಾರಲ್‌ಗೆ ಹಾಕಿ ಕರಗಿಸಿ ಕೊಡುವುದು ಉತ್ತಮ.
Advertisement
ಬೇಸಗೆ ಸಮಯ ಉತ್ತಮಒಮ್ಮೆಲೇ ಗೊಬ್ಬರ ಹಾಕಿಸಲು ಖರ್ಚು ಅಧಿಕ. ಇದನ್ನು ವಿಭಜಿಸಲು ಸಾಧ್ಯ. ಬೇಸಗೆಯ ಸಮಯದಲ್ಲಿ ಗೊಬ್ಬರ ಕೊಡುವುದರಿಂದ ಫಲಿತಾಂಶ ದುಪ್ಪಟ್ಟು ಲಭಿಸುತ್ತದೆ ಎನ್ನುತ್ತಾರೆ ಅನುಭವಿಗಳು. ಲಘು ಪೋಷಕಾಂಶ ನೀಡಿ
ಕಚ್ಚಾ ಗೊಬ್ಬರಗಳನ್ನು ಕೊಡುವ ಜತೆಗೆ ಸಂಯುಕ್ತ ಗೊಬ್ಬರಗಳನ್ನು ಕೊಡುವುದೂ ಅಗತ್ಯ. ಕೊಟ್ಟಿಗೆ ಗೊಬ್ಬರ, ಹಸುರೆಲೆ ಗೊಬ್ಬರವನ್ನು ನೀಡಲು ಸಾಧ್ಯವಾಗದವರು ಕಡಿಮೆ ಫಲವತ್ತತೆಯ ಭೂಮಿಯಲ್ಲೂ ಕೃಷಿ ಮಾಡಿದ್ದರೆ ಲಘು ಪೋಷಕಾಂಶಗಳನ್ನು ಕೊಡುವ ಅಗತ್ಯ ಇದೆ. ಸಾವಯವ ಗೊಬ್ಬರದ ಮೂಲವಾಗಿ ಕೊಟ್ಟಿಗೆ ಗೊಬ್ಬರ, ಅಡಿಕೆ ಹಾಳೆ, ಗರಿ, ಬಾಳೆ, ತ್ಯಾಜ್ಯಗಳನ್ನು ಕೊಡಬೇಕು. ಇದು ಮಣ್ಣಿನಲ್ಲಿ ನೈಸರ್ಗಿಕ ಕ್ರಿಯೆಯನ್ನು ಉಂಟು ಮಾಡುತ್ತದೆ. ಪೊಟ್ಯಾಶಿಯಂ ಸತ್ವಕ್ಕಾಗಿ ಸುಟ್ಟ ಬೂದಿಯನ್ನು ಬಳಕೆ ಮಾಡಬೇಕು. - ರಾಜೇಶ್ ಪಟ್ಟೆ, ಪುತ್ತೂರು