Advertisement
ಪ್ರತಿದಿನ ಸಿಂಕ್ ಸ್ವಚ್ಛಗೊಳಿಸಿಅಡುಗೆ ಮನೆಯ ಸಿಂಕ್ ಅನ್ನು ಪ್ರತಿದಿನ ಸ್ವಚ್ಛಗೊಳಿಸಿ. ಪಾತ್ರೆಗಳನ್ನು ತೊಳೆದ ಅನಂತರ ಬಹಳಷ್ಟು ಮಂದಿ ನೀರನ್ನು ಸಿಂಕ್ ಮೇಲೆ ಸುರಿಯುತ್ತಾರೆ. ಆದರೆ ಈ ರೀತಿ ಸುರಿಯುವ ನೀರು ಸಿಂಕ್ ಅನ್ನು ಸ್ವತ್ಛಗೊಳಿಸುವುದಿಲ್ಲ ಮತ್ತು ಕೀಟಾಣು ಮುಕ್ತವಾಗಿಸುವುದಿಲ್ಲ. ಪ್ರತಿದಿನ ಸ್ವತ್ಛಗೊಳಿಸುವುದು ಕಷ್ಟವಾದರೆ, ವಾರಕ್ಕೆ ಎರಡು ಮೂರು ಬಾರಿ ಸಿಂಕ್‌ಗಳನ್ನು ಸ್ವತ್ಛಗೊಳಿಸುವುದು ಮುಖ್ಯ.
ಅಡುಗೆ ಮನೆಯಲ್ಲಿನ ಕಸವನ್ನು ಪ್ರತಿದಿನ ವಿಲೇವಾರಿ ಮಾಡಲೇಬೇಕು. ಇಲ್ಲದಿದ್ದರೆ ಅದರಲ್ಲಿನ ತ್ಯಾಜ್ಯ ಕೊಳೆತು ಕೀಟ ಉತ್ಪತ್ತಿಯಾಗುವುದು. ಜತೆಗೆ ಹುಳಗಳೂ ಕಸದ ತೊಟ್ಟಿಯಲ್ಲಿ ಸೇರುವ ಅಪಾಯ ಇದೆ. ವಿಶೇಷವಾಗಿ ಹಸಿ ತ್ಯಾಜ್ಯಗಳು ಬೇಗನೇ ಕೊಳೆಯುವುದರಿಂದ ಕೀಟಾಣು ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪ್ರತಿದಿನ ಕಸ ವಿಲೇವಾರಿ ಮಾಡಬೇಕು.