Advertisement

ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ಎಸ್‌ಪಿ

05:03 PM May 12, 2021 | Team Udayavani |

ಕೆಜಿಎಫ್: ಕೊರೊನಾ ಹರಡುವಿಕೆ ತಡೆಯಲು ಲಾಕ್‌ಡೌನ್‌ಜಾರಿಯಲ್ಲಿರುವ ಹಿನ್ನೆಲೆ ಅತ್ಯವಶ್ಯಕ ದಿನಸಿ ಅಂಗಡಿಗಳ ಬಳಿಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್‌ ತಿಳಿಸಿದರು.ರಾಜ್ಯಾದ್ಯಂತ ಲಾಕ್‌ಡೌನ್‌ ನಿಷೇಧಾಜ್ಞೆ ಜಾರಿಯಲ್ಲಿದ್ದು ಕೆಜಿಎಫ್ ನಗರದ ರಾಬರ್ಟ್‌ಸನ್‌ಪೇಟೆ ಎಂ.ಜಿ.ಮಾರುಕಟ್ಟೆ,ಗೀತಾರಸ್ತೆ, ಗಾಂಧಿವೃತ್ತ, ಸೂರಜ್‌ಮುಲ್‌ ವೃತ್ತ ಮೊದಲಾದೆಡೆಗಸ್ತು ತಿರುಗಿ ಮಾತನಾಡಿದರು.

Advertisement

ಅತ್ಯವಶ್ಯಕ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿದಅವರು, ನಿಗದಿತ ಅವಧಿಯೊಳಗಾಗಿ ವ್ಯಾಪಾರ ವಹಿವಾಟುನಡೆ ಸಲು, ಜನಸಾಮಾನ್ಯರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಓಡಾಡಲು,ಅಂಗಡಿ ಗಳವರು ಸ್ಯಾನಿಟೈಜರ್‌, ಸಾಬೂನು, ಕೈತೊಳೆಯುವನೀರಿನ ವ್ಯವಸ್ಥೆ ಮಾಡಲು ಸೂಚಿಸಿದರು.

ಜಿಲ್ಲಾ ರಕ್ಷಣಾಧಿಕಾರಿಗಳ ಭೇಟಿ ಸಮಯದಲ್ಲಿ ಡಿವೈಎಸ್ಪಿ ಬಿ.ಕೆ.ಉಮೇಶ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ನಾಗರಾಜ್‌, ಪಿ ಎಸ್‌ಐಶ್ರುತಿ ಮತ್ತಿತರರಿದ್ದರು. ದಿನಸಿ ಅಂಗಡಿಗಳಲ್ಲಿ ಸ್ವತ್ಛತೆ, ಶುಭ್ರತೆಕಾಪಾಡಲು, ಪ್ರತಿ ಯೊಬ್ಬರೂ ಮಾಸ್ಕ್ ಧರಿಸಿ, ಕೈತೊಳೆದುದಾಸ್ತಾನು ನೀಡಲು, ಸಾರ್ವಜನಿಕರೂ ಮಾಸ್ಕ್ ಧರಿ ಸದೇಓಡಾಡದೇ ನಿಯಮ ಪಾಲಿಸುವಂತೆ ಕೋರಿದರು.ಕೊರೊನಾ ಕುರಿತಾದ ದೂರುಗಳಿದ್ದಲ್ಲಿ ಸಹಾಯವಾಣಿಸಂಖ್ಯೆ: 104, 1077 ಇಆರ್‌ಎಸ್‌ಎಸ್‌ 112 ಅಥವಾಪೊಲೀಸ್‌ ಕಂಟ್ರೋಲ್‌ ರೂಂ 08153274743ಕ್ಕೆ ಅಥವಾಮೊ.9480802700ಕ್ಕೆ ಸಂಪರ್ಕಿಸಲು ಜಿಲ್ಲಾ ರಕ್ಷಣಾಧಿಕಾರಿಇಲಕ್ಕಿಯಾ ಕರುಣಾಕರನ್‌ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next