Advertisement

ಹಣ್ಣಿನಿಂದ ಆರೋಗ್ಯ ಕಾಪಾಡಿಕೊಳ್ಳಿ

11:15 PM Dec 23, 2019 | mahesh |

ಬಹುತೇಕ ಹಣ್ಣುಗಳು ದೇಹದ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುತ್ತಿದ್ದು ಇವುಗಳನ್ನು ಕಾಲ-ಕಾಲಕ್ಕೆ ಸೇವಿ ಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹಾಗೆಂದು ಸಿಕ್ಕ ಸಿಕ್ಕ ಹಣ್ಣುಗಳ ಅನಿಯಮಿತ ಸೇವನೆ ಮಾಡುವುದು ಸೂಕ್ತವಲ್ಲ. ಒಬೊಬ್ಬರೂ ಒಂದೊಂದು ವಿಧಾನವನ್ನು ಇಷ್ಟಪಡುತ್ತಾರೆ. ಕೆಲವರು ಖಾಲಿ ಹೊಟ್ಟೆಯಲ್ಲಿ ಹಣ್ಣು ಸೇವಿಸುವುದು ಸೂಕ್ತವೆಂದರೆ ಇನ್ನೂ ಕೆಲವರು ಬೆಯಿಸಿ ಸೇವಿಸಬೇಕೆನ್ನುತ್ತಾರೆ. ಸಿಪ್ಪೆ ಸಹಿತ ಸೇವಿಸುವುದೇ ಅಥವಾ ರಹಿತವಾಗಿ ಸೇವಿಸುವುದು ಒಳ್ಳೆಯದೇ ಹೀಗೆ ಹತ್ತು ಹಲವಾರು ಪ್ರಶ್ನೆಗಳು ಮೂಡುವುದು ಸಹಜವಾಗಿದೆ.

Advertisement

ಸೀಬೆ ಹಣ್ಣು (ಪೆರಳೆ)
ಸೀಬೆ ಹಣ್ಣಿನಲ್ಲಿ ವಿಟಮಿನ್‌ ಸಿ ಲಭ್ಯವಿದ್ದು ದೇಹವನ್ನು ರಕ್ಷಿಸಲು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ. ಸೀಬೆ ಹಣ್ಣಿನಲ್ಲಿ ಶೇ.80 ಪ್ರತಿಶತದಷ್ಟು ನೀರನ್ನು ಹೊಂದಿದ್ದು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹ ರೋಗಿಗಳು ಇದನ್ನು ನಿಯಮಿತ ಸೇವಿಸುವುದು ಆರೋಗ್ಯ ದೃಷ್ಠಿಯಿಂದ ಬಹಳ ಉಪಯುಕ್ತವಾಗಿದೆ. ವಿಟಮಿನ್‌ ಎ ಮತ್ತು ವಿಟಮಿನ್‌ ಇ ಯೂ ಕಣ್ಣು, ಕೂದಲು ಮತ್ತು ಚರ್ಮವನ್ನು ಪೋಷಿಸುತ್ತದೆ.

ನೆರಳೆ ಹಣ್ಣು
ನೆರಳೆ ಹಣ್ಣಿನ ಜ್ಯೂಸ್‌ ಅನ್ನು ನಿಯಮಿತ ಸೇವನೆಯೂ ಸಕ್ಕರೆ ಖಾಯಿಲೆಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿರುವ ಪೊಟ್ಯಾಶಿಯಂ ಅಂಶವು ಬಿಪಿಯನ್ನು ನಿಯಂತ್ರಿಸುತ್ತದೆ. ಮಕ್ಕಳು ಮತ್ತು ಹೆಣ್ಣು ಮಕ್ಕಳು ಇದನ್ನು ಸೇವಿಸುವುದರಿಂದ ರಕ್ತಹೀನತೆ ಬರದಂತೆ ತಡೆಯಬಹುದಾಗಿದೆ. ಯಥೇಚ್ಚವಾಗಿ ಕಬ್ಬಿಣಾಂಶ, ಕ್ಯಾಲ್ಸಿಯಂ ಇರುವುದರಿಂದ ಪಿತ್ತದೋಷ, ಕ್ಯಾನ್ಸರ್‌ ನಿವಾರಣೆಗೂ ಇದು ಸಹಾಯಕವಾಗಿದೆ.

ಚಿಕ್ಕು ಹಣ್ಣು (ಸಪೋಟಾ)
ಈ ಹಣ್ಣಿನಲ್ಲಿ ವಿಟಮಿನ್‌ ಬಿ ಪ್ರಮಾಣ ಹೇರಳವಾಗಿದ್ದು ರಕ್ತ ಹೀನತೆ, ಸುಸ್ತು, ಬೆಳವಣಿಗೆ ಕುಂಟಿತವಾಗುವುದು, ನರವ್ಯವಸ್ಥೆ ಶಿಥಿಲವಾಗುವುದು, ಹೃದಯ ಸಂಬಂಧಿ ತೊಂದರೆಗಳನ್ನು ನಿವಾರಣೆಗೆ ಇದನ್ನು ಸೇವಿಸುತ್ತಾರೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಪೋಟಾದಲ್ಲಿ ವಿಟಮಿನ್‌ ಸಿ ಪ್ರಮಾಣವೂ ಅಧಿಕವಿದ್ದು ರೋಗನಿರೋಧ ಶಕ್ತಿಯನ್ನು ಹೆಚ್ಚಿಸಲೂ ಸಹ ನೆರವಾಗುತ್ತದೆ.

ಪಪ್ಪಾಯಿ
ಪಪ್ಪಾಯಿ ಎಲ್ಲ ಖಾಲದಲ್ಲೂ ಲಭ್ಯವಿರುವ ಹಣ್ಣಾಗಿದ್ದು ಉಪಹಾರ ಸೇವಿಸುವ ಮುನ್ನ ಸೇವಿಸುವುದರಿಂದ ಅಧಿಕ ಪೋಷಕಾಂಶ ಲಭ್ಯವಾಗುತ್ತದೆ. ಸಕ್ಕರೆ ಅಂಶ ಶೇ.8ರಷ್ಟಿದ್ದು ವಿಟಮಿನ್‌ ಎ ಹೊಂದಿದೆ ರಕ್ತದೊತ್ತಡ ನಿವಾರಣೆಗೆ, ಹೃದಯ ಸಂಬಂಧಿತ ಖಾಯಿಲೆಗೆ, ದೇಹದಲ್ಲಿ ಅಧಿಕ ಸಂಗ್ರಹವಾದ ಕೊಬ್ಬಿನಾಂಶವನ್ನು ಹೊರಹಾಕಲೂ ಸಹ ಇದರ ಸೇವನೆ ಬಹಳ ಉಪಯುಕ್ತವಾಗಿದೆ.

Advertisement

ಅಂಜೂರ
ಇದರಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೆಶಿಯಂ ಅಧಿಕವಾಗಿದ್ದು ದೇಹದಲ್ಲಿ ಇನ್ಸುಲಿನ್‌ ಬಿಡುಗಡೆ ಮಾಡುತ್ತದೆ. ಚರ್ಮದ ಊತ ಮತ್ತು ಕೆಂಪಾಗುವಿಕೆಯನ್ನು ನಿಯಂತ್ರಿಸಲು ಸಹಾಯಕವಾಗಿದೆ. ಅಧಿಕ ಕ್ಯಾಲ್ಸಿಯಂ ಮತ್ತು ಮೆಗ್ನೆಶಿಯಂ ಹೊಂದಿರುವುದರಿಂದ ಮೂಳೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಸಹಾಯಕವಾಗಿದೆ. ಅಧಿಕ ರಕ್ತದೊತ್ತಡ, ಕ್ಯಾನ್ಸರ್‌ ನಿವಾರಣೆಗೆ, ಅಸ್ತಮ ಸಮಸ್ಯೆ ನಿವಾರಿಸಲೂ ಸಹ ಇದನ್ನು ಸೇವಿಸುತ್ತಾರೆ. ಪ್ರಕೃತಿಯಿಂದ ಲಭ್ಯವಾಗುವ ಎಲ್ಲ ಹಣ್ಣುಗಳು ಉಪಯುಕ್ತ ಗುಣಗಳನ್ನು ಹೊಂದಿದ್ದರೂ ಎಲ್ಲ ಹಣ್ಣುಗಳನ್ನು ಎಲ್ಲ ಕಾಲಕ್ಕೂ ಸೆವಿಸುವುದು ಒಳ್ಳೆಯದಲ್ಲ. ನಿಮ್ಮ ದೇಹಕ್ಕೆ ಯಾವುದು ಸೂಕ್ತವೆಂದು ಅರಿತು ಅಂತಹ ಹಣ್ಣನ್ನು ಸೇವಿಸುವುದರಿಂದ ಆರೋಗ್ಯವೃದ್ಧಿಸಲು ಸಾಧ್ಯವಾಗುತ್ತದೆ.

ದಾಳಿಂಬೆ
ಇದರಲ್ಲಿರುವ ವಿಟಮಿನ್‌ ಸಿ ಅಂಶವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಸಿಪ್ಪೆಯನ್ನು ಒಣಗಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಕೊಬ್ಬಿನಾಂಶವನ್ನು ಕಡಿಮೆ ಮಾಡಲು ಉತ್ತಮ ರಕ್ತ ಪರಿಚಲನೆಗೆ ಇದು ಉಪಯುಕ್ತವಾಗಿದೆ.

-  ರಾಧಿಕಾ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next