Advertisement

ಅಮೆರಿಕ ಮಹಿಳೆಯ ಪ್ರಾಣ ಕಾಪಾಡಿದ ಆ್ಯಪಲ್‌ ವಾಚ್‌!

08:57 AM Jul 23, 2022 | Team Udayavani |

ನವದೆಹಲಿ: ಆ್ಯಪಲ್‌ ಕಂಪನಿಯ ಹಲವು ಉತ್ಪನ್ನಗಳು ಇಂದು ಜಗತ್ತಿನ ಮಾರುಕಟ್ಟೆಯನ್ನುಆಕ್ರಮಿಸಿಕೊಂಡಿವೆ.

Advertisement

ಈ ಉತ್ಪನ್ನಗಳ ಪೈಕಿ ಇತ್ತೀಚೆಗೆ ವೇಗವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ಆ್ಯಪಲ್‌ ವಾಚ್‌. ಇದನ್ನು ಕೈಗೆ ಕಟ್ಟಿಕೊಂಡರೆ ಆರೋಗ್ಯದಲ್ಲಾಗುವ ಏರುಪೇರಿನ ಬಗ್ಗೆ ಆಗಾಗ ಸೂಚನೆ ರವಾನಿಸುತ್ತಿರುತ್ತದೆ. ಈ ವಾಚ್‌ ನೀಡಿದ ಸೂಚನೆಯೊಂದು ಅಮೆರಿಕದ ಮಹಿಳೆಯ ಪ್ರಾಣ ರಕ್ಷಿಸಿದೆ!

ಅಲ್ಲಿನ ಮೈನ್‌ ಎಂಬ ರಾಜ್ಯದ ಮಹಿಳೆ ಕಿಮ್‌ ಡರ್ಕಿಗೆ, ಆ್ಯಪಲ್‌ ವಾಚ್‌ ನೀಡಿದ ಸುಳಿವಿನಿಂದ ಆಕೆಯ ಶರೀರದಲ್ಲೊಂದು ಗಡ್ಡೆ ಬೆಳೆಯುತ್ತಿರುವುದು ಗೊತ್ತಾಗಿದೆ.

ಆಗಿದ್ದೇನು?: ಕೆಲವು ತಿಂಗಳ ಹಿಂದೆ ಕಿಮ್‌ ಡರ್ಕಿಗೆ ಆ್ಯಪಲ್‌ ವಾಚ್‌ನಲ್ಲಿ ಒಂದು ಸಂದೇಶ ಕಂಡಿತ್ತು. ನಿಮ್ಮ ಹೃದಯ ಅನಿಯಮಿತವಾಗಿ, ವೇಗವಾಗಿ (ಏಟ್ರಿಯಲ್‌ ಫಿಬ್ರಿಲೇಶನ್‌) ಬಡಿದುಕೊಳ್ಳುತ್ತಿದೆ ಎಂದು ಅದರಲ್ಲಿತ್ತು. 3ನೇ ಬಾರಿ ಸ್ವಲ್ಪ ಬಲವಾದ ಸಂದೇಶ ಬಂದಾಗ ಕಿಮ್‌, ವೈದ್ಯರಲ್ಲಿಗೆ ತೋರಿಸಿದರು. ಮೆಸಾಚುಸೆಟ್ಸ್‌ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ, ಶರೀರದಲ್ಲೊಂದು ಗಡ್ಡೆ ಬೆಳೆಯುತ್ತಿರುವುದು ಪತ್ತೆಯಾಗಿತ್ತು. ಮುಂದೆ ಐದು ಗಂಟೆಗಳ ಶಸ್ತ್ರಚಿಕಿತ್ಸೆಯಲ್ಲಿ ಅದನ್ನು ನಿವಾರಿಸಲಾಯಿತು. ಒಂದು ವೇಳೆ ಸಕಾಲದಲ್ಲಿ ತೆಗೆಯದಿದ್ದರೆ, ಅದು ಕಿಮ್‌ಗೆ ಮಾರಣಾಂತಿಕವಾಗುವುದು ಖಚಿತವಿತ್ತು.

ತಜ್ಞರು ಏನಂತಾರೆ?
ಕಿಮ್‌ ವಿಚಾರದಲ್ಲಿ ಹೀಗಾಯಿತು ಎಂದ ಮಾತ್ರಕ್ಕೆ ಎಲ್ಲಾ ಸ್ಮಾರ್ಟ್‌ ವಾಚ್‌ಗಳು ಸಂಭಾವ್ಯ ಅಪಾಯವನ್ನು ಸೂಚಿಸುತ್ತವೆ ಎಂಬರ್ಥವಲ್ಲ. ವೇಗದ ಹೃದಯ ಬಡಿತ ಇತ್ಯಾದಿ ಶಾರೀರಿಕ ವ್ಯತ್ಯಾಸಗಳನ್ನು ಅವು ತೋರಿಸಬಹುದು. ಕೆಲವೊಮ್ಮೆ ತೋರಿಸದೆಯೂ ಇರಬಹುದು. ಹಾಗಾಗಿ, ಅವುಗಳ ಮೇಲೆಯೇ ಹೆಚ್ಚು ಅವಲಂಬಿತವಾಗಬಾರದು ಎಂದು ತಜ್ಞರ ಅಭಿಪ್ರಾಯ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next