Advertisement

ದಾದಾ ಸಾಹೇಬ ಫಾಲ್ಕೆ

10:05 AM Apr 26, 2019 | Hari Prasad |

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

Advertisement

1 “ಭಾರತೀಯ ಸಿನಿಮಾದ ಪಿತಾಮಹ’ ದಾದಾ ಸಾಹೇಬ ಫಾಲ್ಕೆ 1870ರ ಏಪ್ರಿಲ್‌ 30ರಂದು ಮಹಾರಾಷ್ಟ್ರದಲ್ಲಿ ಜನಿಸಿದರು.
2 ಸಿನಿಮಾ ನಿರ್ಮಾಣ, ನಿರ್ದೇಶನ, ಬರವಣಿಗೆ, ಸಂಕಲನ, ವಸ್ತ್ರವಿನ್ಯಾಸ, ವಿತರಣೆ ಹೀಗೆ ಸಿನಿಮಾದ ಎಲ್ಲ ವಿಭಾಗಗಳಲ್ಲಿಯೂ ದಾದಾ ಸಾಹೇಬರು ಗಣನೀಯ ಸಾಧನೆ ಮಾಡಿದ್ದಾರೆ.
3 ಅವರ ಮೂಲ ಹೆಸರು ದುಂಡಿರಾಜ್‌ ಗೋವಿಂದ ಫಾಲ್ಕೆ
4 ಛಾಯಾಗ್ರಾಹಕನಾಗಿ ವೃತ್ತಿ ಪ್ರಾರಂಭಿಸಿದ ಅವರು, ಪ್ಲೇಗ್‌ನಿಂದಾಗಿ ಹೆಂಡತಿ-ಮಗುವನ್ನು ಕಳೆದುಕೊಂಡ ನಂತರ ಕೆಲಸ ಬಿಟ್ಟು ಜರ್ಮನಿಗೆ ಹೋದರು.
5 ಸಿನಿಮಾಕ್ಕೆ ಬರುವ ಮುನ್ನ ಕೆಲಕಾಲ ಜರ್ಮನಿಯಲ್ಲಿ ಕಾರ್ಲ್ ಹರ್ಟ್ಜ್ ಎಂಬ ಜಾದೂಗಾರನ ಜೊತೆ, ನಂತರ ಭಾರತೀಯ ಪುರಾತತ್ವ ಇಲಾಖೆ, ಮುದ್ರಣ ಉದ್ಯಮದಲ್ಲಿ ದಾದಾ ಸಾಹೇಬರು ಕೆಲಸ ಮಾಡಿದ್ದರು.


6 ಮುಂಬೈನ “ಅಮೆರಿಕ ಇಂಡಿಯಾ ಥಿಯೇಟರ್‌’ನಲ್ಲಿ ನೋಡಿದ “ದಿ ಲೈಫ್ ಆಫ್ ಕ್ರೈಸ್ಟ್‌’ ಮೂಕಿ ಚಿತ್ರ ದಾದಾ ಸಾಹೇಬರ ಬದುಕು ಬದಲಿಸಿತು. ಆಗಲೇ ಅವರು “ರಾಜಾ ಹರಿಶ್ಚಂದ್ರ’ ಸಿನಿಮಾ ಮಾಡಲು ನಿರ್ಧರಿಸಿದರು.
7 ದಾದಾ ಸಾಹೇಬರ “ರಾಜಾ ಹರಿಶ್ಚಂದ್ರ’ ಭಾರತದ ಮೊದಲ ಮೂಕಿ ಸಿನಿಮಾ.
8 ಆ ಚಿತ್ರಕ್ಕಾಗಿ ಅವರ ಇಡೀ ಕುಟುಂಬ ಕೆಲಸ ಮಾಡಿತು. ಸಿನಿಮಾದ ನಿರ್ಮಾಣ, ನಿರ್ದೇಶನ, ಬರವಣಿಗೆ, ಛಾಯಾಗ್ರಹಣ ಫಾಲ್ಕೆಯವರದ್ದಾದರೆ, ಅವರ ಪತ್ನಿ ವಸ್ತ್ರವಿನ್ಯಾಸ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ನೋಡಿಕೊಂಡರು. ಲೋಹಿತಾಶ್ವನಾಗಿ 7 ವರ್ಷದ ಮಗ ಬಾಲಚಂದ್ರ ಫಾಲ್ಕೆ ಬಣ್ಣ ಹಚ್ಚಿದ.
9 1913ರ ಮೇ 3ರಂದು ಬಿಡುಗಡೆಯಾದ ಈ ಸಿನಿಮಾದ ಒಟ್ಟು ಖರ್ಚು 15 ಸಾವಿರ ರೂಪಾಯಿ.
10 ಭಾರತೀಯ ಚಿತ್ರರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ನೀಡಲಾಗುತ್ತದೆ.

ಸಂಗಹ: ಪ್ರಿಯಾ

Advertisement

Udayavani is now on Telegram. Click here to join our channel and stay updated with the latest news.

Next