Advertisement

Kollur ಮೇಲ್‌ ಹೊಸೂರು: 1.50 ಲಕ್ಷ ರೂ.ಮೌಲ್ಯದ ಅಡಿಕೆ ನಾಪತ್ತೆ; ದೂರು

06:53 PM Mar 27, 2024 | Team Udayavani |

ಕೊಲ್ಲೂರು: ಹೊಸೂರು ಗ್ರಾಮದ ಮೇಲ್‌ ಹೊಸೂರು ನಿವಾಸಿ ಸಿ.ಕೆ.ಜೋಸೆಫ್‌ ಅವರ ತೋಟದಲ್ಲಿ ಇರಿಸಲಾಗಿದ್ದ ಅಡಿಕೆ ತುಂಬಿದ 150 ಚೀಲಗಳ ಪೈಕಿ 50 ಚೀಲ ಕಾಣೆಯಾದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ತೋಟದಲ್ಲಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಅಡಿಕೆಯನ್ನು ಮಾ. 25 ಹಾಗೂ 26ರ ನಡುವಿನ ಅವ ಧಿಯಲ್ಲಿ ಯಾರೋ ಕಳ್ಳರು ಕದ್ದೊಯ್ದಿರಬಹುದಾಗಿ ಶಂಕಿಸಲಾಗಿದೆ.

ಕಾಣೆಯಾದ ಅಡಿಕೆಯ ಒಟ್ಟು ಮೌಲ್ಯ 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಕೊಲ್ಲೂರು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next