Advertisement

ಮೈದಾ, ಗೋಧಿ ಹಿಟ್ಟು ಪ್ರತ್ಯೇಕ ನಮೂದಿಗೆ ಸೂಚನೆ

12:30 AM Feb 07, 2019 | |

ಹೊಸದಿಲ್ಲಿ: ವಿವಿಧ ಕಂಪನಿಗಳಿಂದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಗೋಧಿ ಹಿಟ್ಟು ಹಾಗೂ ಮೈದಾ ಹಿಟ್ಟಿನ ಪ್ಯಾಕ್‌ಗಳ ಮೇಲೆ ಅವುಗಳ ಬಗೆಗಿನ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಬೇಕೆಂದು  ಭಾರತೀಯ ಆಹಾರ ಗುಣಮಟ್ಟ ಮತ್ತು ಸುರಕ್ಷಾ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ವಿವಿಧ ಕಂಪನಿಗಳಿಗೆ ಸೂಚಿಸಿದೆ. ಈ ಬಗ್ಗೆ “ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ. 

Advertisement

ಗೋಧಿ ಮತ್ತು ಮೈದಾ ಹಿಟ್ಟಿನ ಪ್ಯಾಕೆಟ್ಟುಗಳ ಮೇಲೆ ಸಾಮಾನ್ಯವಾಗಿ “”wheat flour’ ಎಂದಷ್ಟೇ ಮುದ್ರಿಸುವ ಬದಲು, ಗೋಧಿ ಹಿಟ್ಟಿನ ಮೇಲೆ “whole wheat flour’ (ಸಂಪೂರ್ಣ ಗೋಧಿ ಹಿಟ್ಟು) ಹಾಗೂ ಮೈದಾ ಪ್ಯಾಕ್‌ ಮೇಲೆ “refined wheat flour’ (ಸಂಸ್ಕರಿತ ಗೋಧಿ ಹಿಟ್ಟು) ಎಂದು ಮುದ್ರಿಸುವಂತೆ ಸೂಚಿಸಲಾಗಿದೆ. ಗ್ರಾಹಕರಿಗೆ ತಾವು ಖರೀದಿಸುವ ಹಿಟ್ಟಿನ ಬಗ್ಗೆ ಸ್ಪಷ್ಟತೆಯನ್ನು ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಗೋಧಿ, ಮೈದಾ ಆಧಾರಿತ ಬಿಸ್ಕೇಟ್‌, ಬ್ರೆಡ್‌ ಇನ್ನಿತರ ಖಾದ್ಯಗಳ ಪೊಟ್ಟಣಗಳಿಗೂ ಈ ನಿಯಮ ಅನ್ವಯಿಸುತ್ತದೆ. ಏ.30ರ ಒಳಗಾಗಿ ಎಲ್ಲಾ ಕಂಪನಿಗಳು ಈ ನಿಯಮ ಪಾಲನೆ ಮಾಡಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next