ನವದೆಹಲಿ: ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (ಎಸ್‌ಸಿ) ಶುಕ್ರವಾರ ಮುಂದಿನ ವರ್ಷ ಜನವರಿ 3ಕ್ಕೆ ಮುಂದೂಡಿದೆ.
ಲೋಕಸಭೆಯಲ್ಲಿ ನೈತಿಕ ಸಮಿತಿಯ ವರದಿಯನ್ನು ಅಂಗೀಕರಿಸಿದ ನಂತರ ಸೋಮವಾರ ಟಿಎಂಸಿ ನಾಯಕಿಯನ್ನು ಸದನದಿಂದ ಹೊರಹಾಕಲಾಯಿತು. ಇದನ್ನು ವಿರೋಧಿಸಿ ಮೊಯಿತ್ರಾ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ವರದಿಯಲ್ಲಿ ‘ಹಣಕ್ಕಾಗಿ ಪ್ರಶ್ನೆಗಳನ್ನು ಕೇಳುವ’ ವಿಷಯದಲ್ಲಿ ‘ಅನೈತಿಕ ಮತ್ತು ಅಸಭ್ಯ ವರ್ತನೆ’ಗೆ ಮೊಯಿತ್ರಾ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ.
ಪ್ರಕರಣದ ವಿಚಾರಣೆ ಪ್ರಾರಂಭವಾದ ತಕ್ಷಣ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು ಮೊಯಿತ್ರಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿಗೆ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಸಂಜಯ್ ಖನ್ನಾ ಅವರು, ಉಚ್ಚಾಟಿತ ಟಿಎಂಸಿ ನಾಯಕಿಯ ಕಡತವನ್ನು ಪರಿಶೀಲಿಸಲು ನನಗೆ ಅವಕಾಶ ಸಿಗಲಿಲ್ಲ ಎಂದು ಹೇಳಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಡಿಸೆಂಬರ್ 8 ರಂದು ಲೋಕಸಭೆಯಲ್ಲಿ ತೀವ್ರ ಚರ್ಚೆಯ ನಂತರ ಮೊಯಿತ್ರಾ ಉಚ್ಚಾಟನೆಯ ಪ್ರಸ್ತಾಪವನ್ನು ಮಂಡಿಸಿದರು, ಅದನ್ನು ಧ್ವನಿ ಮತದ ಮೂಲಕ ಸದನವು ಅಂಗೀಕರಿಸಿತು. ಮೊಯಿತ್ರಾ ಅವರಿಗೆ ಚರ್ಚೆಯಲ್ಲಿ ತನ್ನ ಪರವನ್ನು ಮಂಡಿಸಲು ಅವಕಾಶ ಸಿಗಲಿಲ್ಲ.
ಇದನ್ನೂ ಓದಿ: Shri Krishna ಜನ್ಮಸ್ಥಳ ಮಥುರಾ ಭೂ ವಿವಾದ: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ