Advertisement

Mahua Moitra ‘ಪ್ರಶ್ನೆಗಾಗಿ ಲಂಚ’ ಪ್ರಕರಣ: ವಿದೇಶ ಪ್ರವಾಸದ ವಿವರ ಸಂಗ್ರಹ?

12:16 AM Oct 27, 2023 | Team Udayavani |

ಹೊಸದಿಲ್ಲಿ: “ಪ್ರಶ್ನೆಗಾಗಿ ಲಂಚ’ ಪ್ರಕರಣ ವು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾರಿಗೆ ಮತ್ತಷ್ಟು ಸಂಕಷ್ಟ ಉಂಟು  ಮಾಡಿದೆ. ಅ.31ರಂದು ವಿಚಾ ರಣೆಗೆ ಹಾಜರಾಗುವಂತೆ ಲೋಕ ಸಭೆಯ ನೀತಿ ನಿಯಮ ಸಮಿತಿ ಮಹು ವಾರಿಗೆ ಸೂಚಿಸಿದೆ. ಇದೇ ವೇಳೆ, ಮಹುವಾ ವಿರುದ್ಧದ ಆರೋಪವು ಗಂಭೀರವಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿರುವುದಾಗಿ ಸಮಿತಿ ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ.

Advertisement

ಸದನದಲ್ಲಿ ಪ್ರಶ್ನೆ ಕೇಳಲು ಮಹುವಾ ಅವರು ಉದ್ಯಮಿಯೊಬ್ಬರಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ, ವಕೀಲ ಜೈ ಅನಂದ್‌ ದೇಹದ್‌ರಾಯ್‌ರನ್ನು ಸಮಿತಿ ವಿಚಾರಣೆ ನಡೆಸಿದೆ. ಇವರಿಬ್ಬರೂ ಮಹುವಾ ವಿರುದ್ಧ ಮೌಖೀಕ ಸಾಕ್ಷ್ಯಗಳನ್ನು ನೀಡಿ ದ್ದಾರೆ. ಯಾರನ್ನು ಮೊದಲು ವಿಚಾರ ಣೆಗೆ ಒಳಪಡಿ ಸಬೇಕು ಎಂಬ ಬಗ್ಗೆ ಆರಂಭ ದಲ್ಲಿ ಸಮಿತಿ ಸದಸ್ಯರ ನಡು ವೆಯೇ ಭಿನ್ನಾಭಿಪ್ರಾಯ ಏರ್ಪಟ್ಟಿತು. ಕೊನೆಗೆ ದೂರುದಾರರನ್ನು ಮೊದಲು ವಿಚಾರಣೆಗೆ ಒಳಪಡಿಸಲಾಯಿತು.

ಆರೋಪ ಸಂಬಂಧ ಕೇಂದ್ರ ಗೃಹ ಇಲಾಖೆ ಮತ್ತು ಐಟಿ ನೆರವು ಪಡೆಯಲು ಚಿಂತನೆ ನಡೆಸಿರುವುದಾಗಿ ಸಮಿತಿ ಮುಖ್ಯಸ್ಥ ವಿನೋದ್‌ ಕುಮಾರ್‌ ಹೇಳಿದ್ದಾರೆ. 5 ವರ್ಷಗಳಲ್ಲಿ ಮಹುವಾ ವಿದೇಶ ಪ್ರವಾಸದ ವಿವರ, ಪ್ರವಾಸಕ್ಕೂ ಮುನ್ನ ಲೋಕಸಭೆಗೆ ಮಾಹಿತಿ ನೀಡಿದ್ದರೇ, ಅನುಮತಿ ಪಡೆದಿದ್ದರೇ ಎಂಬ ಬಗ್ಗೆಯೂ ಗೃಹ ಇಲಾಖೆ ಯಿಂದ ವಿವರ ಪಡೆಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next