ಮುಂಬೈ: ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಬಹು ನಿರೀಕ್ಷಿತ ಎಸ್‌ಯುವಿಗೆ ಸಮನಾದ ಎಸ್201 ವಾಹನ “ಎಕ್ಸ್‌ಯುವಿ 300′ ಫೆಬ್ರವರಿ ಮಾಸದಲ್ಲಿ ಮಾರುಕಟ್ಟೆಗೆ ಬರಲಿದೆ. ಬಹು ಬಳಕೆಗೆ ಸೂಕ್ತವಾದ ಎಕ್ಸ್‌ಯುವಿ 300 ಕಾಂಪ್ಯಾಕ್ಟ್ಎ ಸ್‌ಯುವಿ ಕಾರನ್ನು ಆಧುನಿಕ ವಿನ್ಯಾಸದಲ್ಲಿ ಮಹಾರಾಷ್ಟ್ರದ ನಾಸಿಕ್ ಘಟಕದಲ್ಲಿ ದಕ್ಷಿಣ ಕೊರಿಯಾದ ಸ್ಯಾಂಗ್ ಯಾಂಗ್ ಟಿವೊಲಿ ಸಂಸ್ಥೆ ಜೊತೆಗೂಡಿ ತಯಾರಿಸಲಾಗುತ್ತಿದೆ. 2015ರಲ್ಲಿ ಬಿಡುಗಡೆಯಾದ ಸ್ಯಾಂಗ್‌ಯಾಂಗ್ ಟಿವೊಲಿ ಕಾರು 50 ದೇಶದಲ್ಲಿ, 2.6 ಲಕ್ಷ ಕಾರುಗಳು ಮಾರಾಟವಾಗಿದ್ದವು. ಇದರ ಸ್ಥಾನವನ್ನು ಈ ನೂತನ ಎಕ್ಸ್‌ಯುವಿ300 ತುಂಬಲಿದೆ ಎಂದು ಕಂಪನಿ ತಿಳಿಸಿದೆ.
ಎಂಆ್ಯಂಡ್‌ಎಂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಪವನ್ ಗೊಯೆಂಕ ಮಾತನಾಡಿ, ಇದೊಂದು ಮುಂದಿನ
ಪೀಳಿಗೆಯ ಎಸ್‌ಯುವಿಯಾಗಿದ್ದು, ಈಗಾಗಲೇ ಗ್ರಾಹಕರ ಮೆಚ್ಚುಗೆ ಪಡೆದಿದೆ. ಈ ಹಿಂದೆ ಬಿಡುಗಡೆ ಮಾಡಿದ್ದ ಕಾರುಗಳಿಗಿಂತ ಉತ್ತಮವಾಗಿದ್ದು, ಎಕ್ಸ್‌ಯುವಿ500 ನಲ್ಲಿರುವ ಎಲ್ಲ ಸೌಲಭ್ಯಗಳು ಹಾಗೂ ವೈಶಿಷ್ಟಗಳು ಇದರಲ್ಲಿವೆ. ಕುಟುಂಬದ ಮೆಚ್ಚುಗೆ ಪಡೆಯುವ ವಾಹನ ಇದಾಗಲಿದೆ ಎಂದರು.
ವಿಶೇಷತೆಗಳು: ಡ್ಯುಯೆಲ್ ಟೋನ್ ಡ್ಯಾಶ್‌ಬೋರ್ಡ್, ಫಕ್ಸ್ ಅಲ್ಯು ಮಿನಿಯಂ ಪ್ಯಾನೆಲ್, ಸುಧಾರಿತ ಆಡಿಯೋ ಸಿಸ್ಟಂ, ಬ್ಯೂಟೂಥ್ ಕನೆ ಕ್ಟಿವಿಟಿ, 7 ಇಂಚ್ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್, ಡ್ಯುಯೆಲ್‌ಟೋಮ್ ಕ್ಲೈಮೆಟ್ ಕಂಟ್ರೋಲ್, ಡ್ಯುಯೆಲ್ ಯುಎಸ್‌ಬಿ ಪೋರ್ಟ್, ವರ್ಟಿಕಲ್ ಎಸಿವೆಂಟ್, ಟಕ್‌ಸ್ಕ್ರೀನ್ ಸಿಸ್ಟಂ, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಡಿಆರ್‌ಎಲ್‌ಎಸ್, ಎಲ್‌ಇಡಿ ಟೈಲ್ ಗೇಟ್, 16 ಇಂಚ್ ಅಲಾಯ್ ವೀಲ್‌ಗಳನ್ನು ಹೊಂದಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಆಟೋ ಮೋಟಿವ್ ವಿಭಾಗದ ಅಧ್ಯಕ್ಷ ರಾಜನ್ ವಧೇರ ಅವರು ಆಧುನಿಕ ತಂತ್ರಜ್ಞಾನ, ಗರಿಷ್ಠ ಸುರಕ್ಷತೆ ಹಾಗೂ ಉತ್ತಮ ಒಳವಿನ್ಯಾಸವುಳ್ಳ ಈ ವಾಹನ ಗ್ರಾಹಕರನ್ನು ಆಕರ್ಷಿಸಲಿದೆ. ಇದು ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳಲ್ಲಿ ಲಭ್ಯ ಎಂದರು.