Advertisement

ಶ್ರೀಕಾಂತ್‌ಗೆ ವರ್ಷದ ಶ್ರೇಷ್ಠ ಕ್ರೀಡಾಪಟು ಗೌರವ

07:00 AM Feb 28, 2018 | Team Udayavani |

ಮುಂಬಯಿ: ಕಿದಂಬಿ ಶ್ರೀಕಾಂತ್‌ ಅವರ ಸಾಧನೆಗಳಿಗೆ ಮತ್ತೂಂದು ಪುರಸ್ಕಾರ ಒಲಿದಿದೆ. ವಿಶ್ವದ ಮೂರನೇ ಶ್ರೇಯಾಂಕಿತರಾಗಿರುವ ಅವರಿಗೆ ಸೋಮವಾರ ನಡೆದ 3ನೇ ಮಹೀಂದ್ರ ಸ್ಕಾರ್ಪಿಯೋ ಟೈಮ್ಸ್‌ ಆಫ್ ಇಂಡಿಯಾದ  ವರ್ಷದ ಶ್ರೇಷ್ಠ ಕ್ರೀಡಾಪಟು (ಜನರ ಆಯ್ಕೆ) ಗೌರವ ದೊರೆತಿದೆ.

Advertisement

ಶ್ರೀಕಾಂತ್‌ ಅವರು ಜಿತು ರೈ ಮತ್ತು ಪಿ.ವಿ. ಸಿಂಧು ಅವರ ಬಳಿಕ ಈ ಗೌರವಕ್ಕೆ ಪಾತ್ರವಾದ ಭಾರತದ ಮೂರನೇ ಆಟಗಾರ ಎಂದೆನಿಸಿಕೊಂಡರು. 2017ರ ಋತುವಿನಲ್ಲಿ ಶ್ರೀಕಾಂತ್‌ ಅವರ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ಭಾರತದ ಭರವಸೆಯ ಆಟಗಾರನೆನಿಸಿರುವ ಶ್ರೀಕಾಂತ್‌ ಸೂಪರ್‌ ಸೀರೀಸ್‌ ಪ್ರಶಸ್ತಿ ಗೆದ್ದಿರುವುದಲ್ಲದೆ ಪುರುಷರ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ವಿಭಾಗದಲ್ಲಿ ವಿಶ್ವದ ಎರಡನೇ ರ್‍ಯಾಂಕಿಂಗ್‌ಗೆ ಏರಿದ ಸಾಧನೆಗೂ ಪಾತ್ರರಾಗಿದ್ದಾರೆ.

ಈ ಪ್ರಶಸ್ತಿಗೆ ಘಟಾನುಘಟಿ ಕ್ರೀಡಾಪಟುಗಳು ಸ್ಪರ್ಧೆಯಲ್ಲಿದ್ದರು. ಅವರಲ್ಲಿ ಪಿ.ವಿ. ಸಿಂಧು, ಸುನಿಲ್‌ ಚೇತ್ರಿ, ವಿರಾಟ್‌ ಕೊಹ್ಲಿ, ಮಿಥಾಲಿ ರಾಜ್‌, ಅಂಕುರ್‌ ಮಿತ್ತಲ್‌, ಗುರ್ಜಿತ್‌ ಕೌರ್‌ ಪ್ರಮುಖರಾಗಿದ್ದರು. ಅವರೆಲ್ಲರನ್ನೂ ಹಿಂದಿಕ್ಕಿದ  25ರ ಹರೆಯದ ಶ್ರೀಕಾಂತ್‌ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ ಎನ್ನುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next