Advertisement

ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಬಿಡುಗಡೆ

11:59 AM Oct 17, 2017 | Team Udayavani |

ಬೆಂಗಳೂರು: ಎಸ್‌ಯುವಿ ಕಾರು ಉತ್ಪಾದನೆ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ (ಎಂಆ್ಯಂಡ್‌ಎಂ) ಸಂಸ್ಥೆ ನ್ಪೋರ್ಟ್ಸ್ ಯುಟಿಲಿಟಿ ವಾಹನ ವಿಭಾಗದಲ್ಲಿ ನೂತನ “ಕೆಯುವಿ100 ಎನ್‌ಎಕ್ಸ್‌ಟಿ’ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Advertisement

ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಪವನ್‌ ಗೋಯೆಂಕಾ, ಕೆಯುವಿ100 ಎನ್‌ಎಕ್ಸ್‌ಟಿ ವಾಹನವು, 40 ಹೊಸ ವೈಶಿಷ್ಟಗಳು ಹಾಗೂ ಸುಧಾರಣೆಗಳೊಂದಿಗೆ ಮೂಡಿಬಂದಿದೆ. ಕೆಯುವಿ 100 ಬಿಡುಗಡೆ ಮಾಡಿದ 21 ತಿಂಗಳ ಒಳಗಾಗಿ ಗ್ರಾಹರಿಂದ ಪ್ರತಿಕ್ರಿಯೆ ಪಡೆದು ಸುಧಾರಿತ ಮಾದರಿಯನ್ನು ಅನಾವರಣಗೊಳಿಸುವಲ್ಲಿ ಎಂಆ್ಯಂಡ್‌ಎಂ ಯಶಸ್ವಿಯಾಗಿದೆ.

ಈ ನೂತನ ಎಸ್‌ಯುವಿ ಕಾರಿನಲ್ಲಿ ಅತ್ಯಾಧುನಿಕ ವೈಶಿಷ್ಟಗಳು, ಸುಂದರ ಒಳಾಂಗಣ ಹಾಗೂ ಆರಾಮದಾಯಕ ಚಾಲನೆಗೆ ಅನುಕೂಲವಾಗುವಂತೆ ರೂಪಿಸಲಾಗಿದ್ದು, ಇದರ ಬೆಲೆ ಕೇವಲ 4.50 ಲಕ್ಷ ರೂ.ನಿಂದ 7.50 ಲಕ್ಷದವರೆಗಿದೆ. ಐದು ಮತ್ತು ಆರು ಸೀಟರ್‌ಗಳ ಪೆಟ್ರೋಲ್‌ ಮತ್ತು ಡೀಸೆಲ್‌ ಮಾದರಿಯ ಕೆ2 ಮತ್ತು ಕೆ2 ಪ್ಲಸ್‌, ಕೆ4 ಪ್ಲಸ್‌, ಕೆ6 ಪ್ಲಸ್‌ ಹಾಗೂ ಕೆ8 ಮಾದರಿಗಳು ದೊರೆಯಲಿವೆ ಎಂದರು.

ಸಂಸ್ಥೆಯ ಆಟೋಮೋಟಿವ್‌ ವಿಭಾಗದ ಅಧ್ಯಕ್ಷ ರಾಜನ್‌ ವದೇರಾ ಮಾತನಾಡಿ, ಕೆಯುವಿ100 ಸರಣಿಯ ನೂತನ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ. ಗ್ರಾಹಕರಿಗೆ ಇಷ್ಟವಾಗುವ ಎಸ್‌ಯುವಿ ಸೆಗೆಟ್‌ನ ಚಿಕ್ಕ-ಚೊಕ್ಕದಾದ ವಾಹನ ಇದಾಗಿದೆ. ಮೊದಲ ಬಾರಿಗೆ ಕಾರು ಕೊಳ್ಳುವ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಎಲ್ಲ ಆಧುನಿಕ ಸೌಲಭ್ಯಗಳುಳ್ಳ ಕಾರು ಎನಿಸಲಿದೆ ಎಂದು ನುಡಿದರು. 

Advertisement

Udayavani is now on Telegram. Click here to join our channel and stay updated with the latest news.

Next