Advertisement

ಜೆಡಿಯು15 ಅಭ್ಯರ್ಥಿಗಳ ಪಟ್ಟಿ ಪ್ರಕಟ

06:55 AM Apr 17, 2018 | |

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿರುವ ಸಂಯುಕ್ತ ಜನತಾ ದಳ (ಜೆಡಿಯು) ತನ್ನ 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.

Advertisement

ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜೆ.ಪಟೇಲ್‌ ಅವರು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಗಣಿ ಉದ್ಯಮಿ ಟಪಾಲ್‌ ಗಣೇಶ್‌ ಬಳ್ಳಾರಿ ನಗರದಿಂದ ಸ್ಪರ್ಧಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಿಂದ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಜಗದೀಶ್‌ ಶೆಟ್ಟರ್‌ ವಿರುದ್ಧ ರಾಜು ನಾಯಕ್‌ವಾಡಿ ಅವರನ್ನು ಕಣಕ್ಕಿಳಿಸಲಾಗಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಪಟೇಲ್‌ 15 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಮೊದಲ ಪಟ್ಟಿಯಲ್ಲಿ ಇದುವರೆಗೂ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗಿದೆ. ಏ. 22ರಂದು ಸುಮಾರು 25 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತಿದ್ದು, ಈ ವೇಳೆ ಸಮಾಜಮುಖೀ ಚಿಂತನೆಯುಳ್ಳ ಮತ್ತು ಪಕ್ಷದ ತತ್ವ, ಸಿದ್ಧಾಂತಗಳನ್ನು ಮೆಚ್ಚಿಕೊಂಡು ಚುನಾವಣೆಗೆ ಸ್ಪರ್ಧಿಸುವವರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲೋಕ್‌ಪಾಲ್‌ ಜೈನ್‌, ರಾಜ್ಯ ಹಿರಿಯ ಉಪಾಧ್ಯಕ್ಷ ಸುಭಾಷ್‌ ಕಪಾಟೆ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುಂದರವೇಲು, ರಮೇಶ್‌ ಗುಡೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಅಭ್ಯರ್ಥಿಗಳ ಪಟ್ಟಿ:
ಚನ್ನಗಿರಿ- ಮಹಿಮ ಜೆ.ಪಟೇಲ್‌
ಆಳಂದ- ಅರುಣಕುಮಾರ ಸಿ.ಪಾಟೀಲ್‌
ಕುಂದಗೋಳ- ಹಜರತ್‌ ಅಲಿ ಶೇಖ್‌
ಬಳ್ಳಾರಿ ನಗರ- ಟಪಾಲ್‌ ಗಣೇಶ್‌
ನವಲಗುಂದ- ಜಿ.ಎನ್‌.ತೋಟದ್‌
ರಾಣೆಬೆನ್ನೂರು- ಡಿ.ಕೆ.ಹಿತ್ತಲಮನಿ
ಚಿಕ್ಕನಾಯಕನಹಳ್ಳಿ- ವಿಜಯೇಂದ್ರ ರೆಡ್ಡಿ
ನೆಲಮಂಗಲ- ಬಿ.ರಾಮಯ್ಯ
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌- ರಾಜು ನಾಯಕ್‌ವಾಡಿ
ಕುಂದಾಪುರ- ರಾಜೀವ್‌ ಕೋಟ್ಯಾನ್‌
ದೊಡ್ಡಬಳ್ಳಾಪುರ- ಎಸ್‌.ಪುರುಷೋತ್ತಮ್‌
ಗುರುಮಿಟಕಲ್‌- ದೊಡ್ಡಪ್ಪ ಮಾಲಿ ಪಾಟೀಲ್‌
ಗದಗ- ಎಸ್‌.ಎಸ್‌.ರೆಡ್ಡೇರ
ಹೊಳಲ್ಕೆರೆ- ಎಚ್‌.ರಾಮಚಂದ್ರಪ್ಪ
ಕೂಡ್ಲಿಗಿ- ಜಿ.ಈಶಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next