Advertisement

ಮುಚ್ಚಿದ ಕನ್ನಡ ಶಾಲೆ ಆರಂಭಕ್ಕೆ  ಕ್ರಮ

06:56 PM Mar 03, 2021 | Team Udayavani |

ಹೊಸಪೇಟೆ: ರಾಜ್ಯದಲ್ಲಿ ಮುಚ್ಚಿದ ಕನ್ನಡ ಶಾಲೆ ಪುನರ್‌ ಆರಂಭ, ಯಾವುದೇ ಕನ್ನಡ ಶಾಲೆ ಮುಚ್ಚದಂತೆ ಕ್ರಮ ಕೈಗೊಳ್ಳುವೆ ಎಂದು ನಾಡೋಜ ಡಾ| ಮಹೇಶ  ಜೋಶಿ ಹೇಳಿದರು.

Advertisement

ನಗರದಲ್ಲಿ ಅಮರಾವತಿ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಸಾಪಕ್ಕೆ ಮೇ 9ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಯಾಗಿರುವೆ. ಕನ್ನಡ  ಕಟ್ಟುವ ಕಾರ್ಯಕ್ಕಾಗಿ ಚುನಾವಣೆಗೆ ಕಣಕ್ಕಿಳಿಯುತ್ತಿರುವೆ. ಕನ್ನಡ ಅನ್ನದ ಭಾಷೆಯಾಗಬೇಕು. ಯಾವುದೇ ಕನ್ನಡ ಶಾಲೆ ಮುಚ್ಚದಂತೆ ನೋಡಿಕೊಳ್ಳುವೆ. ಮುಚ್ಚಿರುವ ಶಾಲೆಗಳನ್ನು ಪುನರಾರಂಭಿಸಲು ಶ್ರಮಿಸುತ್ತೇನೆ ಎಂದರು.

ಪರಿಷತ್ತು ಕೇವಲ ಕನ್ನಡಕ್ಕೆ ಮಾತ್ರ ಸಿಮಿತಗೊಳಿಸದೇ ಜಾನಪದ, ನಾಟಕ, ರಂಗಭೂಮಿ ಹಾಗೂ ಕಲೆಗಳನ್ನು ಉಳಿಸಿ ಬೆಳೆಸುವಂತ ಕೆಲಸ ಮಾಡುವೆ. ರಾಜ್ಯದ ಪ್ರತಿ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣದ ಗುರಿ. ಮಹಿಳೆಯರ ಅಧ್ಯಕ್ಷತೆಯಲ್ಲಿ ಮುಂದಿನ ಎರಡು ಸಮ್ಮೇಳನ ನಡೆಸುವ ಚಿಂತನೆ ನಡೆಸಲಾಗಿದೆ. ಪರಿಷತ್ತಿನ ಸದಸ್ಯತ್ವ ಶುಲ್ಕವನ್ನು 250ಕ್ಕೆ ಇಳಿಸುವೆ. ಸುಪ್ರೀಂಕೋರ್ಟ್‌ ಅಥವಾ ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿ ಪರಿಷತ್ತಿನ ನಿಯಮಗಳ ಬದಲಾವಣೆ ತರಲು ಪ್ರಯತ್ನಿಸುವೆ ಎಂದರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಮಾತನಾಡಿ, ದೂರದರ್ಶನದ ಚಂದನ ವಾಹಿನಿಯ ಮೂಲಕ ಕನ್ನಡ ಕಟ್ಟುವ ಕೆಲಸವನ್ನು ಮಹೇಶ ಜೋಶಿ ಮಾಡಿದ್ದಾರೆ. ಅನೇಕ ಸ್ತರಗಳಲ್ಲಿ ಕೆಲಸ ನಿರ್ವಹಿಸಿರುವ ಅವರಿಗೆ ಅಪಾರ ಅನುಭವವಿದೆ. ಕನ್ನಡದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಜೋಶಿ ಅವರು ಪರಿಷತ್ತಿನ ಚುಕ್ಕಾಣಿ ಹಿಡಿದರೆ ಅದಕ್ಕೆ ಹೊಸ ಸ್ವರೂಪ ಸಿಗಬಹುದು ಎಂದು ಭರವಸೆ ವ್ಯಕ್ತಪಡಿಸಿದರು.

ಪ್ರಚಾರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ನಬಿಸಾಬ್‌ ಕುಷ್ಟಗಿ, ಚನ್ನಬಸವ ಕೊಟಗಿ, ರೇವಣಸಿದ್ದಪ್ಪ, ಮಾಜಿ ಕಸಪಾ ತಾಲೂಕು ಘಟಕ ಅಧ್ಯಕ್ಷೆ ಸುಜಾತ, ಪ್ರಕಾಶ್‌ ಕುಲಕರ್ಣಿ, ಎಲ್‌.ಡಿ. ಜೋಷಿ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next