ಚಿಕ್ಕೋಡಿ: ಲೋಕಸಭೆ ಚುನಾವಣೆಯಲ್ಲಿ ಕುಡಚಿ ಮತಕ್ಷೇತ್ರದಿಂದ 22 ಸಾವಿರ ಅಧಿಕ ಮತಗಳು ಲಿಡ್ ಕೊಡಲಾಗಿದೆ.ಆದರೂ ನಮ್ಮ ಏಳ್ಗೆ ಸಹಿಸದ ಸಚಿವ ಸತೀಶ ಜಾರಕಿಹೊಳಿ ನನ್ನ ವಿರುದ್ದ ಅನಾವಶ್ಯಕ ಆರೋಪ ಮಾಡುತ್ತಿದ್ದಾರೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಆರೋಪಿಸಿದರು.
ಚಿಕ್ಕೋಡಿ ನಗರದ ಕಲ್ಲೋಳಕರ ಪಾರ್ಮಹೌಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕಸಭೆ ಚುನಾವಣೆ ಯಶಸ್ವಿಯಾಗಿ ಮುಗಿದಿದೆ. ಚುನಾವಣೆ ಪೂರ್ವದಿಂದಲೂ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದೇನೆ ಎಂದರು.
ಕುಡಚಿ ಕ್ಷೇತ್ರದಲ್ಲಿ 25 ಸಾವಿರ ನನಗೆ ಲಿಡ್ ಕೊಟ್ಟಿದ್ದರೂ. ಅದೇ ಲಿಡ್ ಕೊಡಬೇಕೆಂದು ಸಚಿವರು ಹೇಳಿದ್ದರೂ ಆದರೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದರಿಂದ 22588 ಲಿಡ್ ಬಂದರೂ ನನ್ನ ಮೇಲೆ ಸತೀಶ ಜಾರಕಿಹೊಳಿ ಆರೋಪ ಮಾಡಿರುವುದು ಬೇಸರ ತರಿಸಿದೆ ಎಂದರು.
ಸಚಿವ ಸತೀಶ ಜಾರಕಿಹೊಳಿ ಕ್ಷೇತ್ರದ ಯಮಕನಮರಡಿ ಕ್ಷೇತ್ರದಲ್ಲಿ 57 ಸಾವಿರ ಲಿಡ್ ತೆಗೆದುಕೊಂಡಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ 23 ಸಾವಿರ ಮಾತ್ರ ಕಾಂಗ್ರೆಸ್ ಪರವಾಗಿ ಮತಗಳು ಬಂದಿರುವುದನ್ನು ಸಚಿವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಶಂಭು ಕಲ್ಲೋಳಕರ ಅವರಿಗೆ ಬೆಂಬಲ ಕೊಟ್ಟಿದ್ದಾರೆಂದು ಸಚಿವರ ಆರೋಪಕ್ಕೆ ತಿರುಗೇಟ ನೀಡಿದ ಅವರು ಕಲ್ಲೋಳಕರ ಕುಡಚಿಯಲ್ಲಿ ಕೇವಲ 3400 ಮತಗಳು ಮಾತ್ರ ತೆಗೆದುಕೊಂಡಿದ್ದಾರೆ. ಒಂದು ವೇಳೆ ನಾನು ಅವರ ಪರವಾಗಿ ಕೆಲಸ ಮಾಡಿದರೆ ಅವರಿಗೆ 20 ಸಾವಿರ ಮತಗಳನ್ನು ಕೊಡಲಾಗುತ್ತಿತ್ತು ಎಂದರು.
ಜಾರಕಿಹೊಳಿ ಅವರು ದಲಿತ ಸಮಾಜದ ಮುಖಂಡರನ್ನು ತುಳಿಯುವ ಕೆಲಸ ನಡೆಯುತ್ತಿದೆ. ಮಾಜಿ ಶಾಸಕ ಶ್ಯಾಮ ಘಾಟಗೆ. ಮಹಾವೀರ ಮೋಹಿತೆ. ಪ್ರದೀಪ ಮಾಳಗೆ. ಸುರೇಶ ತಳವಾರ ಮನೆ ಹಿಡಿಸಿದ್ದಾರೆ.
ದಲಿತ ಸಮಾಜದ ಮೇಲೆ ಅವರಿಗೆ ಕಳಕಳಿ ಇದ್ದರೆ ದಲಿತ ನಾಯಕರನ್ನು ಬೆಳೆಸುವ ಕೆಲಸ ಮಾಡುತ್ತಿದ್ದರು. ಹೈಕಮಾಂಡಗೆ ದೂರು ನೀಡಿದರೆ ನಾನು ಉತ್ತರ ಕೊಡಲು ಸಿದ್ದ ಎಂದರು.
ಹಿರಿಯರಾದ ಸಚಿವ ಸತೀಶ ಅವರು ಮುಂಬರುವ ಜಿಪಂ ತಾಪಂ ಚುನಾವಣೆಯಲ್ಲಿ ಗೋಕಾಕ ಮತ್ತು ಅರಭಾವಿಯಲ್ಲಿ ಲಿಡ್ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: Bigg Boss OTT 3: ಬಿಗ್ ಬಾಸ್ ಓಟಿಟಿಯ ಮೂರನೇ ಸೀಸನ್ ಆರಂಭಕ್ಕೆ ಡೇಟ್ ಫಿಕ್ಸ್