Advertisement

ನಾನು ಹಳೇಯ ವೈನ್ ಇದ್ದಂತೆ; ಟೀಂ ಇಂಡಿಯಾ ಮಾಜಿ ಕಪ್ತಾನ ಧೋನಿ

03:59 PM Jul 01, 2017 | Sharanya Alva |

ನವದೆಹಲಿ: ಟೀ ಇಂಡಿಯಾದ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮನ್ನು ವೈನ್ ಗೆ ಹೋಲಿಸಿಕೊಂಡಿದ್ದಾರೆ.

Advertisement

ಪಂದ್ಯಾಟದಲ್ಲಿ ಒಮ್ಮೊಮ್ಮೆ ಉತ್ತಮ ಪ್ರದರ್ಶನ ಹಾಗೂ ಕೆಲವೊಮ್ಮೆ ಕಳಪೆ ಪ್ರದರ್ಶನ ತೋರುತ್ತಿರುವ ಕುರಿತು ಕೇಳಿ ಬರುತ್ತಿರುವ ಟೀಕೆಗಳಿಗೆ ತಿರುಗೇಟು ಎಂಬಂತೆ ಧೋನಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ವೈನ್ ನಂತೆ ನಾನು, ಯಾಕೆಂದರೆ ವೈನ್ ಹಳೆಯದಾದಷ್ಟು ರುಚಿ ಹೆಚ್ಚು. ಹಾಗೆ ನನಗೆ ವಯಸ್ಸಾದಂತೆ ಹೆಚ್ಚು ಪ್ರಬುದ್ಧನಾಗಿ ಆಟವಾಡುತ್ತೇನೆ ಎಂದು ಹೇಳಿದ್ದಾರೆ.

79 ಬಾಲ್ ಗಳಿಗೆ 78 ರನ್ ಮಾಡಿ ಸಾಧನೆ ಮಾಡಿರುವ ಧೋನಿ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ನಾನು ವೈನ್ ನಂತೆ ಎಂದು ಹೇಳಿಕೊಂಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಅಗ್ರ ಕ್ರಮಾಂಕದ ಸ್ಕೋರ್ ಮಾಡಬೇಕೆಂಬ ಪ್ರಯತ್ನದಲ್ಲಿದ್ದೆ. ಆ ಅವಕಾಶ ಈಗ ಸಿಕ್ಕಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next