Advertisement
ಭಾರತ ತಂಡದ ಕೋಚ್ ಹುದ್ದೆಗೆ ಬಹಳಷ್ಟು ಮಂದಿ ಮಾಜಿ ಕ್ರಿಕೆಟಿಗರು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿರುವ ಪ್ರಮುಖ ಹೆಸರು ಮಾಹೇಲ ಜಯವರ್ಧನೆ ಅವರದಾಗಿದೆ. ಜಯವರ್ಧನೆ ಇಂಗ್ಲೆಂಡ್ ತಂಡದ ಕೋಚಿಂಗ್ ಸಲಹೆಗಾರನಾಗಿ ಅಲ್ಪಾವಧಿಗೆ ದುಡಿದಿದ್ದರು. ಆದರೆ ಜಯವರ್ಧನೆ ಭರಪೂರ ಯಶಸ್ಸು ಕಂಡದ್ದು ಐಪಿಎಲ್‌ನಲ್ಲಿ. ಮುಂಬೈ ಇಂಡಿಯನ್ಸ್ ಕೋಚ್ ಆಗಿ ಅವರು ತಂಡವನ್ನು ಬಹಳ ಎತ್ತರಕ್ಕೆ ಏರಿಸಿದ್ದರು.
ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವಾಗಿರುವ ಮುಂಬೈ ಇಂಡಿಯನ್ಸ್ 3 ಆವೃತ್ತಿಗಳಲ್ಲಿ 2 ಸಲ ಚಾಂಪಿಯನ್ ಆಗಿ ಮೂಡಿಬಂದಿತ್ತು. ಆಗ ಜಯವರ್ಧನೆ ಅವರೇ ತಂಡದ ತರಬೇತುದಾರನಾಗಿದ್ದರು. ಒಂದು ಮೂಲದ ಪ್ರಕಾರ ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಮಾಜಿ ತರಬೇತುದಾರ ಗ್ಯಾರಿ ಕರ್ಸ್ಟನ್, ಟಾಮ್ ಮೂಡಿ ಕೂಡ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಯಾರೇ ಆಯ್ಕೆಯಾದರೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಜತೆಗೂಡಿ ಮುಂದಿನ ವಿಶ್ವಕಪ್ ವೇಳೆ ಬಲಿಷ್ಠ ತಂಡವೊಂದನ್ನು ರೂಪಿಸಬಹುದೆಂಬ ವಿಶ್ವಾಸವಿದೆ.