Advertisement

Manipal: ಮಾಹೆ; ಸಿಜಿಎಂಪಿ ಕೇಂದ್ರಕ್ಕೆ ಭಾರತ ಫಾರ್ಮಾ ಪ್ರಶಸ್ತಿ

11:11 PM Nov 27, 2024 | Team Udayavani |

ಮಣಿಪಾಲ: ಮಾಹೆ ವಿ.ವಿ.ಯ ಸಿಜಿಎಂಪಿ ಕೇಂದ್ರಕ್ಕೆ ಸತತ ಎರಡನೇ ಬಾರಿಗೆ ಔಷಧೀಯ ಗುಣಮಟ್ಟಕ್ಕೆ ನೀಡಿದ ಗಣನೀಯ ಕೊಡುಗೆಯನ್ನು ಗುರುತಿಸಿ ಪ್ರತಿಷ್ಠಿತ ಇಂಡಿಯಾ ಫಾರ್ಮಾ ಅವಾರ್ಡ್ಸ್‌ 2024 ಅನ್ನು ನೀಡಲಾಗಿದೆ.

Advertisement

ಈ ಕೇಂದ್ರವು ತನ್ನ ಪ್ರವರ್ತಕ ಉಪಕ್ರಮವಾದ ಮಣಿಪಾಲ್‌ ಸಿಜಿಎಂಪಿ ವಸ್ತುಸಂಗ್ರಹಾಲಯಕ್ಕಾಗಿ ಗುಣಮಟ್ಟದಲ್ಲಿ ಉತ್ಕೃಷ್ಟತೆ ವಿಭಾಗದಲ್ಲಿ ವಿಶೇಷ ಮನ್ನಣೆ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಇಂಡಿಯಾ ಫಾರ್ಮಾ ಅವಾರ್ಡ್ಸ್‌
2024 ಸಮಾರಂಭ ಸಿಪಿಎಚ್‌ಐ- ಪಿಎಂಇಸಿ ಇಂಡಿ ಯಾದ ಗ್ರೇಟರ್‌ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್‌ನಲ್ಲಿ ನಡೆಯಿತು. ಇದರಲ್ಲಿ 2 ಸಾವಿರಕ್ಕೂ ಹೆಚ್ಚು ಪ್ರದರ್ಶಕರು ಮತ್ತು 50 ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದರು.

ಕೇಂದ್ರ ಸಂಯೋಜಕ ಡಾ| ಗಿರೀಶ್‌ ಪೈ ಕೆ., ಸಹ-ಸಂಯೋಜಕ ಡಾ| ಮುದುಕೃಷ್ಣ ಬಿ.ಎಸ್‌. ಮಣಿಪಾಲವನ್ನು ಪ್ರತಿನಿಧಿಸಿದರು. 3 ನಿಮಿಷಗಳ ಆಕರ್ಷಕ ಪ್ರಸ್ತುತಿಯನ್ನು ನೀಡಿದರು.

ಇದು ಗುಣಮಟ್ಟ ನಿಯಂತ್ರಣ ವ್ಯವಸ್ಥೆಗಳು, ನಿಯಂತ್ರಕ ಅನುಸರಣೆ, ಆಂತರಿಕ ತರಬೇತಿ ಮತ್ತು ವೆಚ್ಚ ದಕ್ಷತೆಯಂತಹ ಪ್ರಮುಖ ನಿಯತಾಂಕಗಳನ್ನು ಎತ್ತಿ ತೋರಿಸಿತ್ತು. ತೀರ್ಪುಗಾರರ ಸದಸ್ಯರು ಈ ಉಪಕ್ರಮವನ್ನು ಅದರ ನಾವೀನ್ಯ ಮತ್ತು ದೀರ್ಘ‌ಕಾಲೀನ ಸಾಮಾಜಿಕ ಪ್ರಭಾವಕ್ಕಾಗಿ ಶ್ಲಾಘಿಸಿದರು. ಇದು ಔಷಧೀಯ ವಲಯಕ್ಕೆ ಗಮನಾರ್ಹ ಕೊಡುಗೆಯಾಗಿದೆ ಎಂದು ಗುರುತಿಸಿದರು.

Advertisement

ಡಾ| ಗಿರೀಶ್‌ ಪೈ ಕೆ. ಮತ್ತು ಡಾ| ಮುದುಕೃಷ್ಣ ಬಿ.ಎಸ್‌. ಅವರು ಬ್ಲೂ ಕ್ರಾಸ್‌ ಲ್ಯಾಬೋರೇಟರೀಸ್‌ ಲಿ. ಜಂಟಿ ವ್ಯವಸ್ಥಾಪಕ ನಿರ್ದೇಶಕ ಬಾಲಚಂದ್ರ ಬಾರ್ವೆ ಅವರಿಂದ ಉದ್ಯಮ ಕ್ಷೇತ್ರದ ಪ್ರಮುಖರು, ಔಷಧೀಯ ಉದ್ಯಮಿಗಳು ಮತ್ತು ಜಾಗತಿಕ ಫಾರ್ಮಾ ಕಂಪೆನಿಗಳ ಕಾರ್ಯನಿರ್ವಾಹಕರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next