Advertisement

ಕ್ಯೂಎಸ್‌ ರ್‍ಯಾಂಕಿಂಗ್‌: ಮಾಹೆಗೆ 26ನೇ ಸ್ಥಾನ

10:00 AM Oct 26, 2019 | Team Udayavani |

ಉಡುಪಿ: ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯವು ಕ್ಯೂಎಸ್‌ (ಕ್ವಾಕರೆಲಿ ಸೈಮಂಡ್ಸ್‌) ಇಂಡಿಯಾ ಯುನಿವರ್ಸಿಟಿ ರ್‍ಯಾಂಕಿಂಗ್ಸ್‌ 2020ರಲ್ಲಿ ಖಾಸಗಿ ವಿ.ವಿ.ಗಳ ವಿಭಾಗದಲ್ಲಿ ಮೂರನೆಯ ರ್‍ಯಾಂಕ್‌ ಮತ್ತು ಒಟ್ಟಾರೆ 26ನೆಯ ಸ್ಥಾನವನ್ನು ಪಡೆದುಕೊಂಡಿದೆ. ಇದರಿಂದ ಮಾಹೆ ಕಳೆದ ವರ್ಷದ ಸ್ಥಾನವನ್ನು ಉಳಿಸಿಕೊಂಡಿದೆ.

Advertisement

ಮಾಹೆ ವಿ.ವಿ. ಕುಲಪತಿ ಡಾ| ಎಚ್‌. ವಿನೋದ ಭಟ್‌ ಅವರು, ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವ ಡಾ| ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರಿಂದ ರ್‍ಯಾಂಕಿಂಗ್‌ ಪ್ರಮಾಣಪತ್ರವನ್ನು ಗೋವಾದಲ್ಲಿ ನಡೆದ ಕ್ಯೂಎಸ್‌ ಇಂಡಿಯಾ ಸಮಾವೇಶದಲ್ಲಿ ಸ್ವೀಕರಿಸಿದರು. ನಿರ್ದೇಶಕ (ಗುಣಮಟ್ಟ) ಡಾ| ಕ್ರಿಸ್ಟೋಫ‌ರ್‌ ಸುಧಾಕರ್‌ ಉಪಸ್ಥಿತರಿದ್ದರು.

ಶೈಕ್ಷಣಿಕ ಮಟ್ಟ, ಮಾಲಕರ ವರ್ಚಸ್ಸು, ಬೋಧಕರು- ವಿದ್ಯಾರ್ಥಿಗಳ ಅನುಪಾತ, ಸಾಧನೆಗಳ ಮಾನದಂಡದಲ್ಲಿ ರ್‍ಯಾಂಕಿಂಗ್‌ ನೀಡಲಾಗಿದೆ. ಸಂಸ್ಥೆಯ ಹಿರಿತನ, ವಿಶಾಲ ಸ್ತರದ ಕೋರ್ಸುಗಳು, ಖಾಸಗಿಯಾದರೂ ಲಾಭ ಉದ್ದೇಶವಿಲ್ಲದ ಸ್ಥಾನಮಾನ, ಉನ್ನತ ದರ್ಜೆಯ ಸಂಶೋಧನೆ, ಸಮಗ್ರ ವಿಷಯವಾರು ಕ್ಷೇತ್ರಗಳು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು, ಬೋಧಕರು- ವಿದ್ಯಾರ್ಥಿಗಳ ಸೂಚಕದಲ್ಲಿಯೂ ಪ್ರತ್ಯೇಕ ವಿಶಿಷ್ಟ ಸ್ಥಾನವನ್ನು ಮಾಹೆ ಪಡೆದುಕೊಂಡಿದೆ. ಈ ವರ್ಷ 100 ವಿ.ವಿ.ಗಳನ್ನು ರ್‍ಯಾಂಕಿಂಗ್‌ಗೆ ಪರಿಗಣಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next