Advertisement
ಅಲ್ಲದೇ ನಾನು ಬಿಜೆಪಿ ತೆಗೆದುಕೊಂಡಿರುವ ಯಾವ ನಿರ್ಧಾರಕ್ಕೂ ಅಡ್ಡಿ ಮಾಡುವುದಿಲ್ಲ ಎಂದರು. ಚುನಾವಣಾ ಫಲಿತಾಂಶ ಪ್ರಕಟವಾದ ಹೊಸತರಲ್ಲಿ ಶಿಂಧೆ ಸಹ ಮುಖ್ಯಮಂತ್ರಿ ಸ್ಥಾನದ ಮೇಲೆ ಹಕ್ಕು ಮಂಡಿಸಿದ್ದರು. ಆದರೆ ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಜತೆ ಸಭೆ ನಡೆಸಿದ ಬಳಿಕ ಶಿಂಧೆ ಸಿಎಂ ಸ್ಥಾನ ಬಿಟ್ಟುಕೊಡಲು ಒಪ್ಪಿಕೊಂಡಿದ್ದರು.
ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಬಳಿಕ ಮಾಧ್ಯಮಗಳ ಎದುರು ಮಾತನಾಡಿದ ಏಕನಾಥ ಶಿಂಧೆ, ಅಜಿತ್ ಪವಾರ್ ಅವರ ಕಾಲೆಳೆದಿದ್ದಾರೆ. ಅಜಿತ್ ಅವರಿಗೆ ಸಾಕಷ್ಟು ಅನುಭವವಿದ್ದು, ಹಗಲು, ರಾತ್ರಿ ಯಾವಾಗಾದರೂ ಪ್ರಮಾಣ ವಚನ ಸ್ವೀಕರಿಸಲು ಅವರು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ಮಹಾಯುತಿ ಸರ್ಕಾರದಲ್ಲಿ ಒಂದು ಡಿಸಿಎಂ ಹುದ್ದೆ ನನಗೆ ಸೇರಿದ್ದು, ಇದನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಅಜಿತ್ ಪವಾರ್ ಹೇಳಿದ್ದರು. ಮಹಾಯುತಿ ಸರ್ಕಾರದಲ್ಲಿ ಯಾವು ಯಾವ ಹುದ್ದೆಯನ್ನು ನಿಭಾಯಿಸುತ್ತೀರಿ ಎಂಬ ಪ್ರಶ್ನೆಗಳಿಗೆ ಶಿಂಧೆ ಉತ್ತರಿಸುತ್ತಿದ್ದಾಗಲೇ ಮಧ್ಯಪ್ರವೇಶಿಸಿದ ಅಜಿತ್ ಪವಾರ್, “ನಾನು ಖಂಡಿತವಾಗಿಯೂ ಡಿಸಿಎಂ ಆಗಿ ಪದಗ್ರಹಣ ಮಾಡುತ್ತೇನೆ ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು, ಇದಕ್ಕೆ ಅಷ್ಟೇ ಹಾಸ್ಯಭರಿತವಾಗಿ ಪ್ರತಿಕ್ರಿಯೆ ನೀಡಿದ ಏಕನಾಥ್ ಶಿಂಧೆ, ಅಜಿತ್ ದಾದಾ ಪವಾರ್ ಗೆ ಡಿಸಿಎಂ ಆಗಿ ಬೆಳಿಗ್ಗೆ ಹಾಗೂ ಸಂಜೆ ಪದಗ್ರಹಣ ಮಾಡಿದ ಅನುಭವವಿದೆ ಎಂದು ಕಾಲೆಳೆದಿದ್ದಾರೆ.
Related Articles
Advertisement
ಗೃಹ ಖಾತೆ ಬಿಜೆಪಿಗೆ?ಮುಖ್ಯಮಂತ್ರಿ ಸ್ಥಾನ ಅಂತಿಮವಾಗುತ್ತಿದ್ದಂತೆ ಮಹಾಯುತಿಯಲ್ಲಿ ಸಚಿವ ಸ್ಥಾನದ ಲಾಬಿ ಶುರುವಾಗಿದೆ ಎನ್ನಲಾಗಿದೆ. ಸೋಮವಾರ ಹಾಗೂ ಮಂಗಳವಾರ ಇದರ ಬಗ್ಗೆಯೇ ದೆಹಲಿಯಲ್ಲಿ ಚರ್ಚೆ ನಡೆಸಲಾಗಿದ್ದು, ಗೃಹ ಖಾತೆಯನ್ನು ಬಿಜೆಪಿಗೆ ಬಿಟ್ಟುಕೊಡಲಾಗಿದೆ ಎನ್ನಲಾಗಿದ್ದು, ಇದರೊಂದಿಗೆ ಬಿಜೆಪಿಗೆ 22 ಸಚಿವ ಸ್ಥಾನ ನೀಡಲಾಗಿದೆ ಎನ್ನಲಾಗಿದೆ. ನಗರಾಭಿವೃದ್ಧಿ ಖಾತೆ ಜತೆಗೆ ಶಿವಸೇನೆಗೆ 12 ಸಚಿವ ಸ್ಥಾನ, ಹಣಕಾಸು ಮತ್ತು ಡೆಪ್ಯೂಟಿ ಸ್ಪೀಕರ್ ಹುದ್ದೆ ಜತೆಗೆ ಎನ್‌ಸಿಪಿಗೆ 10 ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಮಾಣ ವಚನ ಸ್ವೀಕಾರದ ಆಹ್ವಾನ ಪತ್ರಿಕೆಯಲ್ಲಿ ನಿಯೋಜಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ಹೆಸರಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ತಾಯಿ-ತಂದೆಯ ಹೆಸರನ್ನು ತಮ್ಮ ಹೆಸರಲ್ಲಿ ಸೇರಿಸಿಕೊಂಡಿದ್ದು, ದೇವೇಂದ್ರ ಸರಿತಾ ಗಂಗಾಧರರಾವ್ ಫಡ್ನವೀಸ್ ಎಂದು ಬದಲಿಸಿಕೊಂಡಿದ್ದಾರೆ. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಕಳೆದ ಬಾರಿ ತಂದೆಯ ಹೆಸರನ್ನು ಮಾತ್ರ ಸೇರಿಸಿಕೊಂಡಿದ್ದರು.