Advertisement

ಮಹಾವೀರ ಜಯಂತಿ ಆಚರಣೆ

01:49 PM Apr 26, 2021 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಜೈನ ಸಮುದಾಯದವರಿಂದ, ಅಹಿಂಸೆಯ ಸಾಕಾರಮೂರ್ತಿ ಭಗವಾನ್‌ಶ್ರೀಮಹಾವೀರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದಆಚರಿಸಲಾಯಿತು.

Advertisement

ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಸರ್ಕಾರ ವಾರಾಂತ್ಯದ ಕರ್ಫ್ಯೂ ಘೋಷಿಸಿರುವುದರಿಂದ ಮಹಾವೀರ ಜಯಂತಿ ಅಂಗವಾಗಿ ನಗರದಆಸ್ಪತ್ರೆ ವೃತ್ತದ ಬಳಿ ಇರುವ ಶ್ರೀ ಮಹಾವೀರ ಜೈನಶ್ವೇತಾಂಬರ ಮಂದಿರದಲ್ಲಿ ಯಾವುದೇ ಉತ್ಸವಹಾಗೂ ಹೆಚ್ಚು ಭಕ್ತರ ಭಾಗವಹಿಸುವಿಕೆ ಇಲ್ಲದೇಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಬೆಳಗ್ಗೆ 9ಕ್ಕೆ ಘಂಟಾನಾದ, ಶಂಖ ನಾದ, ಜಾಗಟೆಬಾರಿಸಿ ಪ್ರಭುವಿನ ಜನ್ಮದಿನವನ್ನು ಆಚರಿಸಲಾಯಿತು.ಈ ವೇಳೆ ಭಗವಂತ ಇಡೀ ವಿಶ್ವವನ್ನು ಕೊರನಾಮಹಾಮಾರಿಯಿಂದ ಅತಿಶೀಘ್ರ ದಲ್ಲಿ ಮುಕ್ತಿ ಮಾಡಲಿಎಂದು ಪ್ರಾರ್ಥನೆ ಮಾಡಿದರು.

ಪ್ರಾಣಿ-ಪಕ್ಷಿಗಳಿಗೆ ನೀರು ಕುಡಿಯಲು ವ್ಯವಸ್ಥೆ:ಬೇಸಿಗೆ ಇರುವುದರಿಂದ ಪ್ರಾಣಿ-ಪಕ್ಷಿಗಳಿಗೆ ನೀರುಕುಡಿಯಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿನೀವು ಜೀವಿಸಿ ಜೀವಿಸಲು ಬಿಡಿ ಎನ್ನುವ ಮಹಾವೀರಅವರ ಸಂದೇಶ ಸಾರುವಲ್ಲಿ ಜೈನ ಸಮುದಾಯದಮಹಿಳೆಯರಿಂದ ಮೂಕ ಜೀವಿಗಳಿಗೆ ನೀರು ಧ್ಯೇಯದೊಂದಿಗೆ ಮನೆಗಳ ಮುಂದೆ ನೀರಿನ ಸಿಮೆಂಟ್‌ಬಟ್ಟಲು ಇಡುವ ಕಾರ್ಯಕ್ಕೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next