Advertisement

ಮಹಾವೀರರ ಅಹಿಂಸಾ ಸಂದೇಶ ಸಾರ್ವಕಾಲಿಕ

05:42 PM Apr 18, 2022 | Team Udayavani |

ಶಿಗ್ಗಾವಿ: ಅಹಿಂಸೆ, ಸತ್ಯ, ಧರ್ಮ, ನ್ಯಾಯ ತತ್ವದಡಿ ಶಾಂತಿಯಿಂದ ಬದುಕು, ಇತರರನ್ನೂ ಬದುಕಲು ಬಿಡು ಎನ್ನುವ ಮೂಲಕ ಜೈನ ತೀರ್ಥಂಕರ ಮಹಾವೀರರು ಜಗತ್ತಿಗೆ ಆಧ್ಯಾತ್ಮದ ತತ್ವ ಸಂದೇಶ ಸಾರಿದ್ದಾರೆಂದು ಶ್ರೀಕ್ಷೇತ್ರ ಸೋಂದಾ ಶಿರಸಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.

Advertisement

ರವಿವಾರ ಪಟ್ಟಣದ ಸಂತೆ ಮೈದಾನದ ರಂಗಮಂದಿರದಲ್ಲಿ ಶಿಗ್ಗಾವಿ ತಾಲೂಕು ದಿಗಂಬರ ಜೈನ ಕಮಿಟಿ ಆಯೋಜಿಸಿದ್ದ ಶ್ರೀ ಭಗವಾನ 1008 ಮಹಾವೀರ ತೀರ್ಥಂಕರರ 2621ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನಸ್ಸಿನ ವಿಚಾರಗಳಿಗೂ ಕರ್ಮ ಬಂಧಕ್ಕೂ ಬದುಕಿನ ಶುದ್ಧಿಯ ಸಂಬಂಧಗಳಿವೆ. ಉಣ್ಣುವ ಆಹಾರಕ್ಕೂ ಮನುಷ್ಯನ ಗುಣ ವಿಶೇಷಣತೆಗೂ ಸಂಬಂಧಗಳಿದ್ದು, ಶರೀರ ಶುದ್ಧವಾಗಿಟ್ಟುಕೊಂಡು ಒಳ್ಳೆಯ ಪರಿಶುದ್ಧ ಆಹಾರ ಸೇವನೆ ಮಾಡಿದರೆ ಕೆಟ್ಟ ವಿಚಾರಗಳು ನಮ್ಮಿಂದ ದೂರವಾಗುತ್ತವೆ. ಅಹಿಂಸಾ ನೀತಿಯಂತೆ, ನಮ್ಮಂತೆ ಜಗತ್ತಿನ ಇತರೇ ಜೀವಿಗಳೆಲ್ಲವೂ ಬದುಕಬೇಕೆನ್ನುವುದನ್ನು ಮಹಾವೀರರು ಸಂದೇಶದಲ್ಲಿ ವಿಶ್ವಕಲ್ಯಾಣಕ್ಕಾಗಿ ತಿಳಿಸಿದ್ದಾರೆ. ಪ್ರಸಕ್ತ ವಿದೇಶದಲ್ಲಿನ ಯುದ್ಧ ಪರಿಸ್ಥಿತಿ ನೋಡಿದರೆ, ಜೈನ ಪರಂಪರೆಯ ಅಹಿಂಸೆ ಸಂದೇಶವನ್ನು ಜಗತ್ತು ಒಪ್ಪಿಕೊಳ್ಳತೊಡಗಿದೆ. ಒಳ್ಳೆಯ ಮಾತಿನಿಂದ ಪ್ರೀತಿ ಕಾಣಲು ಸಾಧ್ಯ. ಇತರ ಧರ್ಮವನ್ನೂ ನಾವು ಪ್ರೀತಿಸುವುದದನ್ನು ಕಲಿಯಬೇಕೆಂದರು.

ವರೂರು ನವಗ್ರಹ ತೀರ್ಥಕ್ಷೇತ್ರದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸ್ವ ಇಚ್ಛೆಯಡಿ ಸ್ವತಂತ್ರತೆಯಿಂದ ಇತರ ಜೀವಿಗಳೂ ಬದುಕಬೇಕು. ಹಿಂಸೆ ಒಳ್ಳೆಯದಲ್ಲ. ಮನುಷ್ಯನ ಅಷ್ಟ ಕರ್ಮಗಳನ್ನು ನಾಶ ಮಾಡಿ ಸಂಸ್ಕೃತಿಯಿಂದ ನಡೆಯಬೇಕು. ಅಲ್ಲದೇ, ತ್ಯಾಗಿಯಾಗಿ ಬದುಕಿದ ಭಗವಾನ ಮಹಾವೀರ ಜಯಂತಿ ಆಚರಣೆಯೊಂದಿಗೆ ಪುಣ್ಯ ಸಂದೇಶ ಸಾರಬೇಕೆಂದರು.

ವಿರಕ್ತಮಠದ ಸಂಗನಬಸವ ಶರಣರು ಮಾತನಾಡಿ, ಹುಟ್ಟು ಸಾವಿನ ಮಧ್ಯೆದ ಬದುಕು ಸಮಾಜಮುಖೀಯಾಗಿ ಅತ್ಯುತ್ತಮವಾದರೆ ಮಾತ್ರ ಜಗತ್ತು ನಮ್ಮನ್ನು ಸ್ಮರಿಸುತ್ತದೆ ಎಂದರು.

Advertisement

ಭಾರತೀ ಛಬ್ಬಿ ಹಾಗೂ ಸಂಗಡಿಗರು ಪ್ರಾರ್ಥಿಸಿ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಶಿವಾನಂದ ಬಾಗೂರು, ಜೈನ ಸಮಾಜದ ಮುಖಂಡರಾದ ಮಾಣಿಕ್ಯ ಚಂದ ಲಾಡರ್‌, ರವೀಂದ್ರ ಪಾಸಾರ, ಮನೋಹರ ಸಾತಗೊಂಡ, ಭೂಪಾಲ ಪಾಯಣ್ಣವರ, ಶಶಿಕಾಂತ ಹಿತ್ತಲಕೇರಿ, ಕೆಪಿಸಿಸಿ ಸದಸ್ಯ ಷಣ್ಮುಖಪ್ಪ ಶಿವಳ್ಳಿ, ಫಕ್ಕೀರಪ್ಪ ಕುಂದೂರು, ಕುಬೇರಪ್ಪ ಸಿದ್ದಣ್ಣವರ, ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಶ್ರಾವಕ, ಶ್ರಾವಕಿಯರು ಪಾಲ್ಗೊಂಡಿದ್ದರು.

ಬೆಳಿಗ್ಗೆ ಪಟ್ಟಣದ ಎಪಿಎಂಸಿ ಮೈದಾನದಿಂದ ಪುರಸಭೆ ವೃತ್ತದವರೆಗೂ ಸಕಲ ಸಂಗೀತ ವಾದ್ಯವೃಂದದ ಜೊತೆಗೆ 1008 ಭಗವಾನ ಮಹಾವೀರರ ಮೂರ್ತಿ ಹಾಗೂ ಪೂಜ್ಯ ಸ್ವಾಮೀಜಿಗಳ ಅದ್ಧೂರಿ ಮೆರವಣಿಗೆ ನಡೆಯಿತು.

ಸಮುದಾಯ ಭವನಕ್ಕೆ 5 ಲಕ್ಷ ನೆರವು: ದುಂಡಿಗೌಡ್ರ

ಕಾರ್ಯಕ್ರಮದಲ್ಲಿ ಮಾತನಾಡಿದ ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ತಾಲೂಕು ದಿಗಂಬರ ಜೈನ ಸಮುದಾಯ ತಾಲೂಕು ಕೇಂದ್ರದಲ್ಲಿ ಸಮುದಾಯಕ್ಕಾಗಿ ಕಚೇರಿ ತೆರೆಯಲಿ. ಸಮುದಾಯ ಭವನ ನಿರ್ಮಿಸಲು ಮತ್ತು ನಿವೇಶನಕ್ಕೆ ಭೂಮಿ ಖರೀ ಸುವುದಾದಲ್ಲಿ ವೈಯಕ್ತಿಕ ಐದು ಲಕ್ಷ ರೂ. ನೆರವು ನೀಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next