Advertisement

ಮಹಾತ್ಮರ ಸಂದೇಶ ದಾರಿದೀಪ

12:34 PM Feb 10, 2022 | Team Udayavani |

ಜೇವರ್ಗಿ: ಮಹಾತ್ಮರು ನೀಡಿರುವ ಸಂದೇಶಗಳು ಸಮಾಜಕ್ಕೆ ದಾರಿದೀಪ ವಾಗಿವೆ ಎಂದು ಉಪನ್ಯಾಸಕ, ಚಿಂತಕ ಎಚ್‌.ಬಿ. ಪಾಟೀಲ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಬಾಲಕರ ಸರ್ಕಾರಿ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿವನ ಕಣ್ಣಿನಿಂದ ಹುಟ್ಟಿದ್ದರಿಂದ ಸವಿತಾ ಮಹರ್ಷಿಗಳ ಸಮಾಜವನ್ನು “ನಯನಜರು’ ಎಂದು ಕರೆಯಲಾಗುತ್ತದೆ. ರಥ ಸಪ್ತಮಿ ದಿನದಂದು ಸೂರ್ಯ ಆರಾಧನೆ ದಿನ ಮಹರ್ಷಿ ಜಯಂತಿ ಆಚರಿಸಲಾಗುತ್ತದೆ. ಗಾಯಿತ್ರಿ ದೇವಿ ಸವಿತಾ ಮಹರ್ಷಿ ಮಗಳಾಗಿದ್ದು, ಸಾಮವೇದಕ್ಕೆ ಕೊಡುಗೆ ನೀಡಿದ್ದಾಳೆ ಎಂದು ನುಡಿದರು.

ಕಾಲೇಜಿನ ಉಪನ್ಯಾಸಕರಾದ ರವಿಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್‌, ಮಂಜುನಾಥ ಎ.ಎಂ., ಜಮೀಲ್‌ ಅಹಮ್ಮದ್‌ ಹಾಗೂ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next